Saturday, 4th January 2025

IND vs AUS: ಸಿಡ್ನಿ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾದ ಪ್ರಧಾನಿಯನ್ನು ಭೇಟಿಯಾದ ಉಭಯ ತಂಡಗಳು!

AUS vs IND: Australian PM Anthony Albanese hosts both teams ahead of Sydney Test

ಸಿಡ್ನಿ: ಶುಕ್ರವಾರ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ (AUS vs IND) ಸರಣಿಯ ಐದನೇ ಹಾಗೂ ಕೊನೆಯ ಪಂದ್ಯಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಬುಧವಾರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರನ್ನು ಭೇಟಿಯಾಗಿವೆ. ಎರಡೂ ತಂಡಗಳ ಜತೆಗಿನ ಫೋಟೋವನ್ನು ಪ್ರಧಾನಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವೇಳೆ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆಂಥೋನಿ ಆಲ್ಬನೀಸ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ನಿಮ್ಮ ಬೌಲಿಂಗ್‌ ನೋಡಿದಾಗಲೆಲ್ಲಾ ರೋಮಂಚನಕಾರಿ ಎನಿಸತ್ತದೆ ಎಂದಿದ್ದ ಪ್ರಧಾನಿ, ನೀವು ಎಡಗೈನಲ್ಲಿ ಬೌಲ್‌ ಮಾಡಬೇಕು ಅಥವಾ ಒಂದು ಹೆಜ್ಜೆ ಹಿಂದಿನಿಂದ ಬೌಲ್‌ ಮಾಡಬೇಕು ಎಂದು ಟೀಮ್‌ ಇಂಡಿಯಾ ವೇಗಿಯನ್ನು ಕಿಚಾಯಿಸಿದ್ದಾರೆಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ವರದಿ ತಿಳಿಸಿದೆ.

IND vs AUS: ʻವೈಫಲ್ಯದ ಬಗ್ಗೆ ಮಾತ್ರ ಟೀಕಿಸಿʼ-ರಿಷಭ್‌ ಪಂತ್‌ಗೆ ಸಂಜಯ್‌ ಮಾಂಜ್ರೇಕರ್‌ ಬೆಂಬಲ!

ಆಸ್ಟ್ರೇಲಿಯಾದ ಹೊಸ ಟೆಸ್ಟ್ ಆಟಗಾರ ಸ್ಯಾಮ್ ಕೊನ್‌ಸ್ಟಸ್‌ ತನ್ನ ಬಾಲ್ಯದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಸ್ಯಾಮ್ ಅವರ ಪೋಷಕರು ಉಪಸ್ಥಿತರಿದ್ದರು. ಕೊನ್‌ಸ್ಟಸ್‌ ಕುಟುಂಬ ಕೂಡ ವಿರಾಟ್ ಜೊತೆ ಫೋಟೋ ತೆಗೆಸಿಕೊಂಡರು. ವಿರಾಟ್‌ ಕೊಹ್ಲಿ ಬಳಿಕ ಜಸ್‌ಪ್ರೀತ್‌ ಬುಮ್ರಾ ಅವರೊಂದಿಗಿನ ಫೋಟೋಗೆ ಪೋಸ್ ನೀಡಿದ್ದಾರೆ. ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ತಮ್ಮ ಪದಾರ್ಪಣೆ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಸ್ಯಾಮ್ 60 ರನ್ ಗಳಿಸಿದ್ದರು.

“ಪ್ರಧಾನ ಮಂತ್ರಿ XI ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಸ್ಯಾಮ್ ಕೊನ್‌ಸ್ಟಸ್‌ ಅವರು ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದರ ಶ್ರೇಯ ನನಗೂ ಸಿಗಬೇಕು. ಇದು ಬಹುಶಃ ರಾಷ್ಟ್ರೀಯ ಕ್ರಿಕೆಟ್‌ಗೆ ನನ್ನ ಏಕೈಕ ಕೊಡುಗೆಯಾಗಿದೆ,” ಎಂದು ಆಂಥೋನಿ ಆಲ್ಬನೀಸ್‌ ತಂಡವನ್ನು ನಗೆಗಡಲಿನಲ್ಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್ ಹೇಳಿದ್ದೇನು?

ಭಾರತೀಯ ನಾಯಕ ರೋಹಿತ್ ಶರ್ಮಾ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು, ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತನಾಡಿದ್ದಾರೆ ಎಂದು ವರದಿ ಹೇಳಿದೆ. “ಆಸ್ಟ್ರೇಲಿಯಾ ಭೇಟಿ ನೀಡಲು ಸುಂದರವಾದ ದೇಶವಾಗಿದೆ, ಆದರೆ ಇಲ್ಲಿ ಆಡುವುದು ಯಾವಾಗಲೂ ಸವಾಲಿನ ಸಂಗತಿಯಾಗಿದೆ. ಪ್ರೇಕ್ಷಕರು ಅದ್ಭುತವಾಗಿದ್ದಾರೆ. ನಮಗೆ ಇನ್ನೂ ಒಂದು ಟೆಸ್ಟ್‌ ಬಾಕಿ ಉಳಿದಿದೆ ಮತ್ತು ಪ್ರೇಕ್ಷಕರನ್ನು ಚೆನ್ನಾಗಿ ರಂಜಿಸುತ್ತೇವೆಂದು ನಾವು ಭಾವಿಸುತ್ತೇವೆ,” ಎಂದು ಹೇಳಿದ್ದಾರೆ.

ನಮಗೆ ಸರಣಿ ಗೆಲ್ಲುವ ಅವಕಾಶ: ಕಮಿನ್ಸ್‌

ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿ, “ಕಳೆದ ವಾರ ಮೆಲ್ಬರ್ನ್‌ನಲ್ಲಿ ನಡೆದಿದ್ದ ಅತ್ಯುತ್ತಮ ಟೆಸ್ಟ್ ಪಂದ್ಯಗಳಲ್ಲಿ ಒಂದಾಗಿದೆ. ಐದು ದಿನಗಳ ಕಾಲ ಅಂತಹ ಸಂಭ್ರಮವನ್ನು ನೋಡಿರಲಿಲ್ಲ. ಈ ವಾರದ ಪಂದ್ಯ ನಿರ್ಣಾಯಕವಾಗಲಿದೆ. ಇದು ನಮಗೆ ಸರಣಿ ಗೆಲ್ಲುವ ಅವಕಾಶ. ಈ ಪಂದ್ಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಸಿಡ್ನಿ ಟೆಸ್ಟ್‌ನಲ್ಲಿ ಗಾಯಾಳು ಮಿಚೆಲ್‌ ಸ್ಟಾರ್ಕ್‌ ಆಡ್ತಾರಾ? ಅಲೆಕ್ಸ್‌ ಕೇರಿ ಹೇಳಿದ್ದಿದು!