ನವದೆಹಲಿ: ಭಾರತೀಯ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವಾಗ, ತಂಡದಲ್ಲಿನ ಬದಲಾವಣೆಯ ಅವಧಿಯನ್ನು ನಿಭಾಯಿಸುವಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಪಾತ್ರ ವಿಷಯವಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (IND vs AUS) ಆಕ್ರಮಣಕಾರಿ ಮತ್ತು ಅತ್ಯಂತ ಬಲಿಷ್ಠ ಆಸ್ಟ್ರೇಲಿಯನ್ ತಂಡದ ವಿರುದ್ಧ ಸರಿಯಾದ ಸಂಯೋಜನೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ತಂಡವು ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರವಾಸಿ ತಂಡವು ಶುಕ್ರವಾರದಿಂದ (ಜ.3) ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿಉ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಸಲುವಾಗಿ ಸಿಡ್ನಿ ಟೆಸ್ಟ್ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.
ಮೈದಾನದಲ್ಲಿನ ಏರಿಳಿತಗಳಿಂದಾಗಿ ಮೈದಾನದ ಹೊರಗೂ ಕೆಲವು ಸಮಸ್ಯೆಗಳು ಉದ್ಭವಿಸುತ್ತಿದ್ದು, ಡ್ರೆಸ್ಸಿಂಗ್ ರೂಂನಲ್ಲಿ ಅಶಾಂತಿಯ ಚರ್ಚೆಗಳು ಹೆಚ್ಚಾಗುತ್ತಿವೆ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ಆಟಗಾರರ ಜೊತೆ ಇದ್ದ ಸಂವಹನವನ್ನು ಮುಂದುವರಿಸುವಲ್ಲಿ ಗೌತಮ್ ಗಂಭಿರ್ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಯಕ ರೋಹಿತ್ ಶರ್ಮಾ ಅವರು ಆಯ್ಕೆ ವಿಷಯಗಳ ಬಗ್ಗೆ ಆಟಗಾರರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಆದರೆ ಜುಲೈನಲ್ಲಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ನಂತರ, ಜೂನಿಯರ್ ಅಲ್ಲದ ಕೆಲವು ಆಟಗಾರರನ್ನು ಏಕೆ ತಂಡದಿಂದ ಹೊರಗಿಡಲಾಗಿದೆ ಎಂದು ರೋಹಿತ್ ಶರ್ಮಾ ಸ್ಪಷ್ಟವಾಗಿ ಹೇಳುತ್ತಿಲ್ಲ.
ಆದರೆ ಹೆಚ್ಚು ದೃಢವಾದ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿರುವ ಗಂಭೀರ್, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರಿನಷ್ಟು ವಯಸ್ಸಾಗದ ಹರ್ಷಿತ್ ರಾಣಾ ಅಥವಾ ನಿತೀಶ್ ರೆಡ್ಡಿ ಸೇರಿದ ಆಟಗಾರರ ಗುಂಪಿನಿಂದ ಹೆಚ್ಚಿನ ವಿಶ್ವಾಸವನ್ನು ಗಳಿಸಿಲ್ಲ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, “ಒಂದು ಟೆಸ್ಟ್ ಪಂದ್ಯ ಉಳಿದಿದೆ ಮತ್ತು ನಂತರ ಚಾಂಪಿಯನ್ಸ್ ಟ್ರೋಫಿ ಇದೆ. ಒಂದು ವೇಳೆ ಪ್ರದರ್ಶನ ಸುಧಾರಿಸದಿದ್ದರೆ ಗೌತಮ್ ಗಂಭೀರ್ ಅವರ ಸ್ಥಾನವೂ ಸುರಕ್ಷಿತವಾಗಿರುವುದಿಲ್ಲ. ಆಡುವ 11 ರೊಂದಿಗೆ ಪ್ರಯೋಗ ಮಾಡುವ ಪ್ರವೃತ್ತಿಯಿಂದಾಗಿ ಆಟಗಾರರು ಅಸುರಕ್ಷಿತ ಭಾವನೆ ಉಂಟಾಗಿದೆ,” ಎಂದು ಹೇಳಿದ್ದಾರೆ.
ರೆಡ್ಡಿಯಂತಹ ಆಟಗಾರರು ಪ್ರಸಕ್ತ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಆದರೆ ಶುಭಮನ್ ಗಿಲ್ ಕುರಿತ ನಿರ್ಧಾರಗಳ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಜಯ ಶಾ ಈಗ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಮತ್ತು ಮಂಡಳಿಯು ಜನವರಿ 12ರ ನಂತರ ಅವರ ಪೂರ್ಣ ಸಮಯದ ಉತ್ತರಾಧಿಕಾರಿಯನ್ನು ಹುಡುಕಲಿದೆ. ಆಡಳಿತಾತ್ಮಕ ಸ್ಥಿರತೆಯನ್ನು ಸಾಧಿಸಿದ ನಂತರ, ಬಿಸಿಸಿಐನ ಉನ್ನತ ಅಧಿಕಾರಿಗಳು ಭಾರತ ತಂಡದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಗಂಭೀರ್ ಬಿಸಿಸಿಐನ ಮೊದಲ ಆಯ್ಕೆಯಾಗಿರಲಿಲ್ಲ
ಶಾ ಬಿಸಿಸಿಐನ ಉಸ್ತುವಾರಿಯಲ್ಲಿ ಇರುವವರೆಗೂ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಮಂಡಳಿಯ ಪ್ರಸ್ತುತ ಅಧ್ಯಕ್ಷ ಮತ್ತು ಭಾರತದ ಮಾಜಿ ವೇಗದ ಬೌಲರ್ ರೋಜರ್ ಬಿನ್ನಿ ಯಾವುದೇ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದರೆ ಫೆಬ್ರವರಿ-ಮಾರ್ಚ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಅಷ್ಟೊಂದು ಚೆನ್ನಾಗಿರದಿದ್ದರೆ ಗಂಭೀರ್ ಸ್ಥಾನಕ್ಕೆ ಕತ್ತರಿ ಬೀಳಲಿದೆ.
“ಅವರು ಎಂದಿಗೂ ಬಿಸಿಸಿಐನ ಮೊದಲ ಆಯ್ಕೆಯಾಗಿರಲಿಲ್ಲ (ವಿವಿಎಸ್ ಲಕ್ಷ್ಮಣ್ ಆಗಿದ್ದರು) ಮತ್ತು ಕೆಲ ಪ್ರಸಿದ್ಧ ವಿದೇಶಿ ಹೆಸರುಗಳು ಎಲ್ಲಾ ಮೂರು ಸ್ವರೂಪಗಳ ತರಬೇತುದಾರರಾಗಲು ಬಯಸುವುದಿಲ್ಲ ಆದ್ದರಿಂದ ಅವರು ರಾಜಿಯಾಗಿದ್ದರು. ನಿಸ್ಸಂಶಯವಾಗಿ ಇತರ ಆಯ್ಕೆಗಳು ಕೂಡ ನಮಗೆ ಇದ್ದವು,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ʻಹೊರಗಡೆ ಮಾತುಗಳಿಗೆ ಕಿವಿ ಕೊಡಬೇಡಿʼ-ಗೌತಮ್ ಗಂಭೀರ್‌ಗೆ ರವಿ ಶಾಸ್ತ್ರಿ ಸಲಹೆ!