ಮೆಲ್ಬರ್ನ್: ಯಶಸ್ವಿ ಜೈಸ್ವಾಲ್ (82 ರನ್) ಸೊಗಸಾದ ಬ್ಯಾಟಿಂಗ್ ಹೊರತಾಗಿಯೂ ಅಗ್ರ ಕ್ರಮಾಂಕದ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ (IND vs AUS) ಎರಡನೇ ದಿನವೂ ಹಿನ್ನಡೆಯನ್ನು ಅನುಭವಿಸಿದೆ. ಅಲ್ಲದೆ ಬಹುತೇಕ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾ ಫಾಲೋ ಆನ್ ಭೀತಿಗೆ ಒಳಗಾಗಿದೆ.
ಶುಕ್ರವಾರ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 474 ರನ್‌ಗಳಿಗೆ ಆಲ್‌ಔಟ್ ಮಾಡಿದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಹಿನ್ನಡೆಯ ಭೀತಿಗೆ ಒಳಗಾಗಿದೆ.
IND vs AUS: ಸ್ಟೀವನ್ ಸ್ಮಿತ್ ಭರ್ಜರಿ ಶತಕ, 474 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್!
ಕೊಹ್ಲಿ-ಜೈಸ್ವಾಲ್ ಜುಗಲ್‌ಬಂದಿ
ನಾಯಕ ರೋಹಿತ್ ಶರ್ಮಾ (3) ಹಾಗೂ ಕೆಎಲ್ ರಾಹುಲ್ (24 ರನ್) ಅವರ ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆ ಮೂಲಕ ಮೂರನೇ ವಿಕೆಟ್‌ಗೆ ಜೊತೆಯಾಗಿದ್ದ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ 102 ರನ್‌ಗಳ ಜೊತೆಯಾಟದ ಮೂಲಕ ಭಾರತ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು ಹಾಗೂ ದೊಡ್ಡ ಮೊತ್ತದ ಭರವಸೆಯನ್ನು ಮೂಡಿಸಿದ್ದರು. ಆದರೆ 118 ಎಸೆತಗಳಲ್ಲಿ 82 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ರನ್‌ಔಟ್ ಆದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು.
Stumps on Day 2 in Melbourne!#TeamIndia move to 164/5, trail by 310 runs
— BCCI (@BCCI) December 27, 2024
Updates ▶️ https://t.co/njfhCncRdL#AUSvIND pic.twitter.com/9ZADNv5SZf
6 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಭಾರತ
ಯಶಸ್ವಿ ಜೈಸ್ವಾಲ್ ಶತಕದ ಜತೆಯಾಟವಾಡಿದ ವಿರಾಟ್ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ಮೂಲಕ 36 ರನ್ ಗಳಿಸಿದ್ದರು. ಆದರೆ, ಸ್ಕಾಟ್ ಬೋಲೆಂಡ್ ಎಸೆದ ಆಫ್ ಸ್ಟಂಪ್ ಹೊರಗಡೆಯ ಎಸೆತವನ್ನು ಅನಗತ್ಯವಾಗಿ ಕೆಣಕಲು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕೇರಿಗೆ ಕ್ಯಾಚಿತ್ತರು. ಇವರ ಬೆನ್ನಲ್ಲೆ ಆಕಾಶ್ ದೀಪ್ ಕೂಡ ಶಾರ್ಟ್ ಲೆಗ್‌ನಲ್ಲಿ ಕ್ಯಾಚ್ ಕೊಟ್ಟರು. ದಿನದ ಬಹುತೇಕ ಅವಧಿಯಲ್ಲಿ ಉತ್ತಮವಾಗಿ ಆಡಿದ್ದ ಭಾರತ, ಕೊನೆಯ ಸೆಷನ್‌ನಲ್ಲಿ ಕೇವಲ 6 ರನ್ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕೈಚೆಲ್ಲಿಕೊಂಡಿತು.
ಸ್ಟೀವನ್ ಸ್ಮಿತ್ ಭರ್ಜರಿ ಶತಕ
ಇದಕ್ಕೂ ಮುನ್ನ 6 ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ, ಸ್ಟೀವನ್ ಸ್ಮಿತ್ ಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 122.4 ರನ್‌ಗಳಿಗೆ 474 ರನ್‌ಗಳನ್ನು ಕಲೆ ಹಾಕಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ತಂಡದ ಪರ ಅತ್ಯುತ್ತಮ ಬ್ಯಾಟ್ ಮಾಡಿದ ಸ್ಟೀವನ್ ಸ್ಮಿತ್ ತಮ್ಮ ವೃತ್ತಿ ಜೀವನದ 34ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು.
What a thrilling session that was!
— cricket.com.au (@cricketcomau) December 27, 2024
Steve Smith moved his name further up the record ranks with his 11th Test ton against India. #AUSvIND
68 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ್ದ ಸ್ಟೀವನ್ ಸ್ಮಿತ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು. ಅವರು ಆಡಿದ 197 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 140 ರನ್‌ಗಳನ್ನು ಕಲೆ ಹಾಕಿ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು. ಶತಕ ಸಿಡಿಸಿದ ಜೊತೆಗೆ ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಸ್ಮಿತ್ ಮುರಿಯದ ಏಳನೇ ವಿಕೆಟ್‌ಗೆ 112 ರನ್‌ಗಳನ್ನು ಕಲೆ ಹಾಕಿದ್ದರು. ನಾಯಕ ಪ್ಯಾಟ್ ಕಮಿನ್ಸ್ 49 ರನ್ ಗಳಿಸಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಕಿತ್ತರು.
ಸ್ಕೋರ್ ವಿವರ (ಎರಡನೇ ದಿನದಾಟದ ಅಂತ್ಯಕ್ಕೆ)
ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 122.4 ಓವರ್‌ಗಳಿಗೆ 474-10 (ಮಾರ್ನಸ್ ಲಾಬುಶೇನ್ 72, ಸ್ಯಾಮ್ ಕೋನ್‌ಸ್ಟಸ್ 60, ಉಸ್ಮಾನ್ ಖವಾಜ 57, ಸ್ಟೀವನ್ ಸ್ಮಿತ್ 140, ಪ್ಯಾಟ್ ಕಮಿನ್ಸ್ 49; ಜಸ್‌ಪ್ರೀತ್ ಬುಮ್ರಾ 99 ಕ್ಕೆ 4, ರವೀಂದ್ರ ಜಡೇಜಾ ಕ್ಕೆ 78 3)
ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 46 ಓವರ್‌ಗಳಿಗೆ 164ಕ್ಕೆ 5 (ಯಶಸ್ವಿ ಜೈಸ್ವಾಲ್ 84, ವಿರಾಟ್ ಕೊಹ್ಲಿ 36, ಕೆಎಲ್ ರಾಹುಲ್ 24 ; ಪ್ಯಾಟ್ ಕಮಿನ್ಸ್ 57ಕ್ಕೆ 2, ಸ್ಕಾಟ್ ಬೋಲೆಂಡ್ 24ಕ್ಕೆ 2)
ಈ ಸುದ್ದಿಯನ್ನು ಓದಿ: IND vs AUS: ‘ದಯವಿಟ್ಟು ವಿದಾಯ ಹೇಳಿ’-ರೋಹಿತ್ ಶರ್ಮಾಗೆ ಫ್ಯಾನ್ಸ್ ಆಗ್ರಹ!