ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಿತೀಶ್ ರೆಡ್ಡಿ ಆಡಿದ ಕೇವಲ ಮೂರು ಪಂದ್ಯಗಳ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸೀಮ್ ಬೌಲಿಂಗ್ ಹಾಗೂ ಕ್ಲಾಸಿಕ್ ಬ್ಯಾಟಿಂಗ್‌ನಿಂದ ಆಂಧ್ರ ಮೂಲದ ನಿತೀಶ್ ರೆಡ್ಡಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಫೀಲ್ಡಿಂಗ್‌ನಲ್ಲಿಯೂ ನಿತೀಶ್ ರೆಡ್ಡಿ ಎಲ್ಲರನ್ನು ಸೆಳೆದಿದ್ದಾರೆ.
ಭಾರತದ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಾಯಕ ಪ್ಯಾಟ್ ಕಮಿನ್ಸ್ ಅವರ ಬ್ಯಾಟಿಂಗ್ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮೊದಲನೇ ದಿನದಾಟದಲ್ಲಿ ಆತಿಥೃಯರು 6 ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳನ್ನು ಕಲೆ ಹಾಕಿದರು. ಎರಡನೇ ದಿನದ ಆಟ ಆರಂಭವಾದಾಗ ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮಿನ್ಸ್ ಮತ್ತೊಮ್ಮೆ ಮುನ್ನಡೆ ಸಾಧಿಸಿದರು.
IND vs AUS: ವಿರಾಟ್ ಕೊಹ್ಲಿ-ಸ್ಯಾಮ್ ಕೋನ್‌ಸ್ಟಸ್ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್
ಈ ವೇಳೆ ಸ್ಟೀವ್ ಸ್ಮಿತ್ ತಮ್ಮ 34ನೇ ಟೆಸ್ಟ್ ಶತಕವನ್ನು ಪೂರೈಸಿದರು. ಸ್ಟೀವನ್ ಸ್ಮಿತ್ ತನ್ನ ಶತಕವನ್ನು ಪೂರ್ಣಗೊಳಿಸಿದ ತಕ್ಷಣ, ಕಮಿನ್ಸ್ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಕೈ ಹಾಕಿದರು. ಅದರಂತೆ ಅವರು ಆಡಿದ 63 ಎಸೆತಗಳಲ್ಲಿ 49 ರನ್‌ಗಳನ್ನು ಕಲೆ ಹಾಕಿದರು. ಆದರೆ, ಅರ್ಧಶತಕದಂಚಿನಲ್ಲಿ ಪ್ಯಾಟ್ ಕಮಿನ್ಸ್ ವಿಕೆಟ್ ಒಪ್ಪಿಸಿದರು. ಆ ಮೂಲಕ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕವನ್ನು ವಂಚಿತರಾದರು.
ಅದ್ಭುತ ಕ್ಯಾಚ್ ಪಡೆದ ನಿತೀಶ್ ರೆಡ್ಡಿ
49 ರನ್ ಗಳಿಸಿದ್ದಾಗ ಪ್ಯಾಟ್ ಕಮಿನ್ಸ್, ರವೀಂದ್ರ ಜಡೇಜಾ ಎಸೆತದಲ್ಲಿ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಹಾಕಿದ್ದರು. ಆದರೆ, ಕಮಿನ್ಸ್ ನಿರೀಕ್ಷೆ ಮಾಡಿದ್ದಷ್ಟು ಚೆಂಡು ಬ್ಯಾಟ್‌ಗೆ ಸಿಗಲಿಲ್ಲ. ಈ ವೇಳೆ ಚೆಂಡು ಲಾಂಗ್ ಕಡೆ ಗಾಳಿಯಲ್ಲಿ ಹಾರುತ್ತಿತ್ತು ಹಾಗೂ ಇದನ್ನು ಗಮನಿಸಿದ ನಿತೀಶ್ ರೆಡ್ಡಿ ಓಡಿ ಬಂದ ನಿತೀಶ್ ರೆಡ್ಡಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ನಿತೀಶ್ ರೆಡ್ಡಿ ಅವರ ಕ್ಯಾಚ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸಿದರು.
What a catch by #NitishKumarReddy! 👏#RavindraJadeja delivers the first wicket of the morning for #TeamIndia! ☝#AUSvINDOnStar 👉 4th Test, Day 2 | LIVE NOW! | #ToughestRivalry #BorderGavaskarTrophy pic.twitter.com/8Zb8nfDnxj
— Star Sports (@StarSportsIndia) December 27, 2024
474 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್
ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ಬೆಳಿಗ್ಗೆ 311 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ ತಂಡ, ಸ್ಟೀವನ್ ಸ್ಮಿತ್ ಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 122.4 ರನ್‌ಗಳಿಗೆ 474 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್ ಆಯಿತು. ಆಸ್ಟ್ರೇಲಿಯಾ ತಂಡದ ಪರ ಅತ್ಯುತ್ತಮ ಬ್ಯಾಟ್ ಮಾಡಿದ ಸ್ಟೀವನ್ ಸ್ಮಿತ್ ತಮ್ಮ ವೃತ್ತಿ ಜೀವನದ 34ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಸ್ಮಿತ್ 140 ರನ್ ಗಳಿಸಿದರೆ, ಮಾರ್ನಸ್ ಲಾಬುಶೇನ್ 72 ರನ್, ಸ್ಯಾಮ್ ಕೋನ್‌ಸ್ಟಸ್ 60 ರನ್, ಉಸ್ಮಾನ್ ಖವಾಜ 57 ರನ್‌ಗಳನ್ನು ಕಲೆ ಹಾಕಿದರು.
ಈ ಸುದ್ದಿಯನ್ನು ಓದಿ: IND vs AUS: ಸ್ಟೀವನ್ ಸ್ಮಿತ್ ಭರ್ಜರಿ ಶತಕ, 474 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್!