ಮೆಲ್ಬರ್ನ್: ಒಂದೂವರೆ ವರ್ಷದ ಬಳಿಕ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್, ಇದೀಗ ಭಾರತದ ಎದುರು 2025-25ರ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ತಮ್ಮ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಭಾರತದ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯನ್ನು ಸ್ಟೀವನ್ ಸ್ಮಿತ್ ಬರೆದಿದ್ದಾರೆ.
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸ್ಟೀವನ್ ಸ್ಮಿತ್ 197 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 140 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 34ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಸುನೀಲ್ ಗವಾಸ್ಕರ್, ಯೂನಿಸ್ ಖಾನ್, ಮಹೀಲಾ ಜಯವರ್ಧನೆ ಹಾಗೂ ಬ್ರಿಯಾನ್ ಲಾರಾ ಅವರ ಜೊತೆ ಜಂಟಿ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಮಾಜಿ ನಾಯಕ ಬ್ರಿಯಾನ್ ಲಾರಾ( 41).
IND vs AUS: ಎರಡನೇ ದಿನವೂ ಹಿನ್ನಡೆ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಸಂಕಷ್ಟ!
ಇತಿಹಾಸ ಬರೆದ ಸ್ಟೀವನ್ ಸ್ಮಿತ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎದುರು ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರನ್ನು ಸ್ಟೀವನ್ ಸ್ಮಿತ್ ಹಿಂದಿಕ್ಕಿದ್ದಾರೆ. ಜೋ ರೂಟ್ ಭಾರತದ ಎದುರು 10 ಶತಕಗಳನ್ನು ಸಿಡಿಸಿದ್ದರೆ, ಸ್ಟೀವನ್ ಸ್ಮಿತ್ ಅವರು 11 ಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಆಡಿದ 43 ಇನಿಂಗ್ಸ್‌ಗಳಿಂದ 11 ಶತಕಗಳನ್ನು ಸಿಡಿಸಿದ್ದಾರೆ.
STEVEN PETER DEVEREUX SMITH IS BACK WITH A BANG 🥶 pic.twitter.com/gW1KQV5OIE
— Johns. (@CricCrazyJohns) December 15, 2024
ಭಾರತದ ಎದುರು ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು
ಸ್ಟೀವನ್ ಸ್ಮಿತ್: 11 ಶತಕಗಳು (43 ಇನಿಂಗ್ಸ್‌ಗಳು)
ಜೋ ರೂಟ್: 10 ಶತಕಗಳು (55 ಇನಿಂಗ್ಸ್‌ಗಳು)
ಗ್ಯಾರಿ ಸೋಬರ್ಸ್: 8 ಶತಕಗಳು (30 ಇನಿಂಗ್ಸ್‌ಗಳು)
ವಿವಿಯನ್ ರಿಚರ್ಡ್ಸ್: 8 ಶತಕಗಳು (41 ಇನಿಂಗ್ಸ್‌ಗಳು)
ರಿಕಿ ಪಾಂಟಿಂಗ್: 8 ಶತಕಗಳು (51 ಇನಿಂಗ್ಸ್‌ಗಳು)
ಭಾರತದ ಎದುರು 16 ಶತಕಗಳನ್ನು ಸಿಡಿಸಿರುವ ಸ್ಟೀವನ್ ಸ್ಮಿತ್
ಭಾರತದ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸ್ಟೀವನ್ ಸ್ಮಿತ್ ಮೂರನೇ ಟೆಸ್ಟ್‌ನಲ್ಲಿ ಬರೆದಿದ್ದರು. ಆ ಮೂಲಕ ಟೀಮ್ ಇಂಡಿಯಾ ಎದುರು 14 ಶತಕಗಳನ್ನು ಸಿಡಿಸಿದ್ದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸ್ಟಿತ್ ಮುರಿದಿದ್ದರು. ಸದ್ಯ ಭಾರತದ ಎದುರು ಮೂರೂ ಸ್ವರೂಪದಲ್ಲಿ ಸ್ಟೀವನ್ ಸ್ಮಿತ್ 16 ಶತಕಗಳನ್ನು ಸಿಡಿಸಿದ್ದಾರೆ. 11 ಶತಕಗಳು ಟೆಸ್ಟ್ ಕ್ರಿಕೆಟ್‌ನಿಂದ ಮೂಡಿಬಂದಿದ್ದರೆ, ಇನ್ನುಳಿದ ಐದು ಶತಕಗಳು ಏಕದಿನ ಕ್ರಿಕೆಟ್‌ನಿಂದ ಮೂಡಿ ಬಂದಿವೆ.
ಈ ಸುದ್ದಿಯನ್ನು ಓದಿ: IND vs AUS: ಸ್ಟೀವನ್ ಸ್ಮಿತ್ ಭರ್ಜರಿ ಶತಕ, 474 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್!