Thursday, 26th December 2024

IND vs AUS: ಅರ್ಧಶತಕ ಸಿಡಿಸಿ ಡಾನ್‌ ಬ್ರಾಡ್ಮನ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಸ್ಟೀವನ್‌ ಸ್ಮಿತ್‌!

IND vs AUS: Steve Smith joins Don Bradman in elite club with 10th 50 plus score in MCG Tests

ಮೆಲ್ಬರ್ನ್‌: ಭಾರತ ವಿರುದ್ಧ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ (IND vs AUS) ಮೊದಲನೇ ದಿನ ಅರ್ಧಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ ರನ್‌ಗಳನ್ನು 10ಕ್ಕಿಂತ ಹೆಚ್ಚು ಬಾರಿ ಗಳಿಸಿದ ದಿಗ್ಗಜ ಡಾನ್‌ ಬ್ರಾಡ್ಮನ್‌ ಒಳಗೊಂಡ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸ್ಟೀವನ್‌ ಸ್ಮತ್‌ ಸೇರ್ಪಡೆಯಾಗಿದ್ದಾರೆ.

ಡಾನ್‌ ಬ್ರಾಡ್ಮನ್‌, ಗ್ರೇಗ್‌ ಚಾಪೆಲ್‌ ಹಾಗೂ ರಿಕಿ ಪಾಂಟಿಂಗ್‌ ಅವರು ಎಂಸಿಜಿಯಲ್ಲಿ 10ಕ್ಕಿಂತ ಹೆಚ್ಚು ಬಾರಿ 50+ ರನ್‌ಗಳನ್ನು ಗಳಿಸಿದ್ದಾರೆ. ಇದೀಗ ಈ ಸಾಲಿಗೆ 35ರ ವಯಸ್ಸಿನ ಸ್ಮಿತ್‌ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಗ್ರೇಗ್‌ ಚಾಪೆಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 17 ಟೆಸ್ಟ್‌ ಪಂದ್ಯಗಳಿಂದ 13 ಅರ್ಧಶತಕಗಳನ್ನು ಸಿಡಿಸಿದ್ದಾರೆ., ಬ್ರಾಡ್ಮನ್‌ ಮತ್ತು ಪಾಂಟಿಂಗ್‌ ಅವರು ಕ್ರಮವಾಗಿ 12 ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

Sam Konstas: ರಿವರ್ಸ್‌ ಸ್ಕೂಪ್‌ ಮೂಲಕ ಸಿಕ್ಸರ್‌, 3 ವರ್ಷಗಳ ಬಳಿಕ ಸಿಕ್ಸ್‌ ಹೊಡೆಸಿಕೊಂಡ ಬುಮ್ರಾ! ವಿಡಿಯೊ

ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ 50ಕ್ಕಿಂತ ಅಧಿಕ ರನ್‌ ಗಳಿಸಿದವರು

ಗ್ರೇಗ್‌ ಚಾಪೆಲ್‌-17 ಟೆಸ್ಟ್‌ ಪಂದ್ಯಗಳಿಂದ 13 ಅರ್ಧಶತಕಗಳು
ಡಾನ್‌ ಬ್ರಾಡ್ಮನ್‌- 11 ಟೆಸ್ಟ್‌ ಪಂದ್ಯಗಳಿಂದ 12 ಅರ್ಧಶತಕಗಳು
ರಿಕಿ ಪಾಂಟಿಂಗ್‌- 15 ಟೆಸ್ಟ್‌ ಪಂದ್ಯಗಳಿಂದ 11 ಅರ್ಧಶತಕಗಳು
ಸ್ಟೀವನ್‌ ಸ್ಮಿತ್-‌ 12 ಟೆಸ್ಟ್‌ ಪಂದ್ಯಗಳಿಂದ 10 ಅರ್ಧಶತಕಗಳು

ಮತ್ತೊಂದು ಶತಕದ ಸನಿಹದಲ್ಲಿ ಸ್ಟೀವನ್‌ ಸ್ಮಿತ್‌

ಆಸ್ಟ್ರೇಲಿಯಾ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಸ್ಮಿತ್‌, ಇದೀಗ ಪ್ರಸಕ್ತ ಸರಣಿಯಲ್ಲಿ ಮತ್ತೊಂದು ಶತಕದ ಸನಿಹದಲ್ಲಿದ್ದಾರೆ. ಸ್ಟೀವನ್‌ ಸ್ಮಿತ್‌ ಬಳಿಕ ಆಸ್ಟ್ರೇಲಿಯಾ ಪರ ಅಲಾನ್‌ ಬಾರ್ಡರ್‌ ಹಾಗೂ ರಿಕಿ ಪಾಂಟಿಂಗ್‌ 9000 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಸರಣಿಯ ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸ್ಟೀವನ್‌ ಸ್ಮಿತ್‌ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿ ಬರಲಿಲ್ಲ.

ಆದರೆ, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಬಲಗೈ ಬ್ಯಾಟ್ಸ್‌ಮನ್‌ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅವರು 190 ಎಸೆತಗಳಿಂದ 12 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಜಸ್‌ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದ್ದರು. ಈದರ ಜೊತೆಗೆ ನಾಲ್ಕನೇ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಅವರ ಜೊತೆಗೆ ಸ್ಟೀವನ್‌ ಸ್ಮಿತ್‌ 241 ರನ್‌ಗಳ ಜೊತೆಯಾಟವನ್ನು ಆಡಿದ್ದರು.

ಮೊದಲನೇ ದಿನ ಆಸ್ಟ್ರೇಲಿಯಾ ಪ್ರಾಬಲ್ಯ

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ಮೊದಲನೇ ದಿನ ಪ್ರಾಬಲ್ಯ ಸಾಧಿಸಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 86 ಓವರ್‌ಗಳಿಗೆ ಆರು ವಿಕೆಟ್‌ಗಳ ನಷ್ಟಕ್ಕೆ 311 ರನ್‌ಗಳನ್ನು ಕಲೆ ಹಾಕಿದೆ. ಕ್ರೀಸ್‌ನಲ್ಲಿ ಸ್ಟೀವನ್‌ ಸ್ಮಿತ್‌ (68) ಹಾಗೂ ಪ್ಯಾಟ್‌ ಕಮಿನ್ಸ್‌ (8) ಅವರು ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS 4th Test Day-1 Highlights: ಮೊದಲನೇ ದಿನ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ!