ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ದ ನಾಲ್ಕನೇ ಹಾಗೂ ಬಾಕ್ಸಿಗ್ ಡೇ ಟೆಸ್ಟ್ ಪಂದ್ಯದ (IND vs AUS) ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 5 ರನ್‌ಗೆ ಅತ್ಯಂತ ಹೀನಾಯವಾಗಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಜಿ ಬ್ಯಾಟ್ಸ್‌ಮನ್ ಸೈಮನ್ ಕ್ಯಾಟಿಚ್ ಟೀಕಿಸಿದ್ದಾರೆ. ವಿರಾಟ್ ಕೊಹ್ಲಿ ಕಿಂಗ್ ಆಗಿ ಇನ್ನೂ ಉಳಿದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಂದ್ಯದ ಐದನೇ ದಿನದಂದು ವಿರಾಟ್ ಕೊಹ್ಲಿ ಔಟಾದ ಬಗ್ಗೆ ಸೈಮನ್ ಕ್ಯಾಟಿಚ್ ಪ್ರತಿಕ್ರಿಯಿಸಿದ್ದಾರೆ ವಿರಾಟ್ ಕೊಹ್ಲಿ ಕಿಂಗ್ ಕೊಹ್ಲಿಯಾಗಿ ಉಳಿದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕಿಂಗ್ ಎಂಬ ಹೆಸರಿನ ಪ್ರಾಬಲ್ಯವನ್ನು ಜಸ್‌ಪ್ರೀತ್ ಬುಮ್ರಾ ಹೊಂದಿದ್ದಾರೆಂದು ಹೇಳಿದ್ದಾರೆ.
IND vs AUS: ಯಶಸ್ವಿ ಜೈಸ್ವಾಲ್ ಔಟ್? or ನಾಟ್‌ಔಟ್? ವಿವಾದಾತ್ಮಕ ತೀರ್ಪಿಗೆ ಔಟಾದ ಓಪನರ್!
ಸೋಮವಾರ 340 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ವಿರಾಟ್ ಕೊಹ್ಲಿಗೆ ದೊಡ್ಡ ಜವಾಬ್ದಾರಿ ಎದುರಾಗಿತ್ತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಆಸರೆಯಾಗಬೇಕಿತ್ತು. ಆದರೆ, 5 ರನ್ ಗಳಿಸಿದ ಬಳಿಕ ಕಳೆದ ಇನಿಂಗ್ಸ್‌ಗಳಲ್ಲಿ ಮಾಡಿದ್ದ ಅದೇ ತಪ್ಪನ್ನು ಕೊಹ್ಲಿ ಮಾಡಿದರು. ಮಿಚೆಲ್ ಸ್ಟಾರ್ಕ್ ಎಸೆದ ಆಫ್ ಸ್ಟಂಪ್ ಹೊರಗಡೆಯ ಎಸೆತವನ್ನು ಕೆಣಕಲು ಹೋಗಿ ಕೊಹ್ಲಿ ಸ್ಲಿಪ್‌ನಲ್ಲಿ ಉಸ್ಮಾನ್ ಖವಾಜಗೆ ಕ್ಯಾಚಿತ್ತರು.
ವಿರಾಟ್ ಕೊಹ್ಲಿಯಲ್ಲಿ ಕಿಂಗ್ ಸತ್ತಿದ್ದಾನೆಂದು ಸೈಮನ್ ಕ್ಯಾಟಿಚ್
ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಳಿಕ ಅವರು ಮುಂದಿನ 5 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 7, 11, 3, 36 ಮತ್ತು 5 ರನ್‌ಗಳಿಗೆ ಸೀಮಿತರಾಗಿದ್ದರು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿರುವುದು ಕೇವಲ 167 ರನ್‌ಗಳು ಮಾತ್ರ.
🗣️ "Starc has the big fish and that is disastrous for India." – @tommorris32
— SEN Cricket (@SEN_Cricket) December 30, 2024
🗣️ "The king is dead. He trudges off." – Simon Katich
Virat Kohli throws his wicket away right before lunch 🤯#AUSvIND 🏏 | @NufarmAustralia pic.twitter.com/Rmsz1f2NHa
“ವಿರಾಟ್ ಕೊಹ್ಲಿ ಅವರಲ್ಲಿ ಕಿಂಗ್ ಸತ್ತಿದ್ದಾನೆ. ಅವರು ಒದ್ದಾಡಿದ್ದಾರೆ. ಕಿಂಗ್ ಎಂಬ ಹೆಸರನ್ನು ಇದೀಗ ಬುಮ್ರಾ ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಸ್ವತಃ ನಿರಾಶೆಗೊಂಡಂತೆ ಕಾಣುತ್ತಿದ್ದಾರೆ. ಕೊಹ್ಲಿಗೆ ಇದು ದೊಡ್ಡ ಇನಿಂಗ್ಸ್ ಆಗಿರಬಹುದಿತ್ತು. ಆದರೆ, ಅದನ್ನು ಅವರು ಈಡೇರಿಸಲಿಲ್ಲ. ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಸನ್ನಿವೇಶದ ಬಗ್ಗೆ ತುಂಬಾ ಸಂತಸವಾಗಿದೆ,” ಎಂದು ಕಾಮೆಂಟರಿ ವೇಳೆ ತಿಳಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರು ಈ ಸರಣಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಭಾರತ ತಂಡವನ್ನು ಸರಣಿಯಲ್ಲಿ ಜೀವಂತವಾಗಿರಿಸಿದ್ದಾರೆ. ಅವರು ಈ ಸರಣಿಯಲ್ಲಿ ಆಡಿದ ಎಂಟು ಇನಿಂಗ್ಸ್‌ಗಳಿಂದ 12.83ರ ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಲ್ಲಿಯವರೆಗೂ ಬುಮ್ರಾ ಆಡಿದ 44 ಟೆಸ್ಟ್ ಪಂದ್ಯಗಳಿಂದ 203 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Clown kohli: ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಆಸ್ಟ್ರೇಲಿಯಾ ಪತ್ರಿಕೆ!