ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಐದನೇ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಸ್ಕಾಟ್ ಬೋಲೆಂಡ್ ಎಸೆದಿದ್ದ ಆಫ್ ಸ್ಟಂಪ್ ಹೊರಗಡೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಅನಗತ್ಯವಾಗಿ ಆಡಲು ಹೋಗಿ ವಿಕೆಟ್ ಒಪ್ಪಿಸಿದರು.
17 ರನ್ ಗಳಿಸಿ ಉತ್ತಮ ಆರಂಭ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ದೀರ್ಘಾವಧಿ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಅದರಲ್ಲಿಯೂ ಈ ಹಿಂದಿನ ಇನಿಂಗ್ಸ್‌ಗಳಲ್ಲಿ ಮಾಡಿದ್ದ ತಪ್ಪುಗಳನ್ನು ಮತ್ತೊಮ್ಮೆ ಸಿಡ್ನಿ ಟೆಸ್ಟ್‌ನಲ್ಲಿಯೂ ಮುಂದುವರಿಸಿದರು. ಸ್ಕಾಟ್ ಬೋಲೆಂಡ್ ಎಸೆದಿದ್ದ ಆಫ್ ಸ್ಟಂಪ್ ಹೊರಗಡೆಯ ಎಸೆತದಲ್ಲಿ ಆಡಲು ಹೋಗಿ ಸ್ಲಿಪ್‌ನಲ್ಲಿ ಬೇ ವೆಬ್‌ಸ್ಟರ್‌ಗೆ ಸುಲಭ ಕ್ಯಾಚಿತ್ತರು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ ನಿರಾಶಾದಾಯಕವಾಗಿತ್ತು. ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದು ಹೊರತುಪಡಿಸಿ ಅವರು ನಿರಂತರವಾಗಿ ವಿಫಲರಾಗುತ್ತಿದ್ದಾರೆ. ಅದರಲ್ಲಿಯೂ ವಿಶೇಷ ಆಫ್ ಸ್ಟಂಪ್ ಹೊರಗಡೆತ ಎಸೆತಗಳಲ್ಲಿ ಎಡವುತ್ತಿದ್ದಾರೆ.
IND vs AUS: ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡದೆ ಇರಲು ಕಾರಣ ತಿಳಿಸಿದ ಜಸ್‌ಪ್ರೀತ್ ಬುಮ್ರಾ!
69 ಎಸೆತಗಳಲ್ಲಿ ಒಂದೂ ಬೌಂಡರಿ ಗಳಿಸದ ಕೊಹ್ಲಿ
ಈ ಪಂದ್ಯದಲ್ಲಿ ಭಾರತ ತಂಡ ವಿರಾಟ್ ಕೊಹ್ಲಿ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ವಿರಾಟ್ ಕೊಹ್ಲಿ 69 ಎಸೆತಗಳನ್ನು ಎದುರಿಸಿದರು. ಅವರ ಸ್ಟ್ರೈಕ್ ರೇಟ್ ಕೇವಲ 24.64 ಇತ್ತು. ಆದರೆ, ತಾವು ಎದುರಿಸಿದ 69 ಎಸೆತಗಳಲ್ಲಿ ಕೊಹ್ಲಿ ಕನಿಷ್ಠ ಒಂದೇ ಒಂದು ಬೌಂಡರಿಯನ್ನು ಗಳಿಸಲು ಸಾಧ್ಯವಾಗಲಿಲ್ಲ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ವಿರಾಟ್ ಕೊಹ್ಲಿ ತಮ್ಮ ಇನಿಂಗ್ಸ್‌ನಲ್ಲಿ 50 ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ನಂತರವೂ ಯಾವುದೇ ಬೌಂಡರಿ ಹೊಡೆಯಲು ಸಾಧ್ಯವಾಗಲಿಲ್ಲ. ಈ ಹಿಂದೆ 2021ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 48 ಎಸೆತಗಳನ್ನು ಆಡಿದ್ದ ವಿರಾಟ್ ಯಾವುದೇ ರನ್ ಗಳಿಸಲು ಸಾಧ್ಯವಾಗಿರಲಿಲ್ಲ.
Sanjay Manjrekar on Virat Kohli's decision. (Star Sports).
— Tanuj Singh (@ImTanujSingh) January 3, 2025
– He said "I think that was right decision by Third Umpire, it was not out". pic.twitter.com/MQOjojcuPt
ಭಾರತದ ಅಗ್ರ ಕ್ರಮಾಂಕ ಮತ್ತೆ ವಿಫಲ
ರೋಹಿತ್ ಶರ್ಮಾ ಈ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ. ಇದರ ಹೊರತಾಗಿಯೂ ಭಾರತ ತಂಡದ ಅಗ್ರ ಕ್ರಮಾಂಕ ವಿಫಲವಾಯಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಓಪನಿಂಗ್ ಮಾಡಿದರು. ಕೇವಲ 4 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರಾಹುಲ್ ಔಟಾದರು. ಮೆಲ್ಬರ್ನ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಯಶಸ್ವಿ ಜೈಸ್ವಾಲ್ ಬ್ಯಾಟ್ ಈ ಇನಿಂಗ್ಸ್‌ನಲ್ಲಿ ಮೌನವಾಗಿಯೇ ಉಳಿಯಿತು. ಅವರು 26 ಎಸೆತಗಳಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ಟ್ರಾವಿಸ್ ಹೆಡ್ ನಂತರ ಈ ಸರಣಿಯಲ್ಲಿ ಎರಡನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದಾರೆ.
ಎರಡು ತ್ವರಿತ ವಿಕೆಟ್‌ಗಳು ಪತನಗೊಂಡ ನಂತರ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಇದ್ದರು. ಆದರೆ ಭೋಜನ ವಿರಾಮದ ಮುನ್ನ ಕೊನೆಯ ಎಸೆತದಲ್ಲಿ ಗಿಲ್ ಔಟಾದರು. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕುಳಿತಿದ್ದ ಗಿಲ್, ರೋಹಿತ್ ಶರ್ಮಾ ಬದಲಿಗೆ ಮರಳಿದ್ದಾರೆ. ಗಿಲ್ 20 ರನ್ ಗಳಿಸಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಕೂಡ ಪೆವಿಲಿಯನ್‌ಗೆ ಮರಳಿದರು.
ಈ ಸುದ್ದಿಯನ್ನು ಓದಿ: IND vs AUS: ತಪ್ಪು ತಿದ್ದಿಕೊಳ್ಳದ ಪತಿ ವಿರಾಟ್ ಕೊಹ್ಲಿ ವಿರುದ್ಧ ಅನುಷ್ಕಾ ಶರ್ಮಾ ಗರಂ!