ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ (IND vs AUS) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ನಿರಾಶಾದಾಯಕ ಆರಂಭ ಕಂಡಿದೆ. ಮತ್ತೊಮ್ಮೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿತು. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಕಳೆದ ಪಂದ್ಯಗಳಲ್ಲಿ ಮಾಡಿದ್ದ ಅದೇ ತಪ್ಪನ್ನು ಎಸಗಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಲ್ಲದೆ ವಿಶೇಷವಾಗಿ ತಮ್ಮ ಪತಿಯ ವಿರುದ್ಧ ಅನುಷ್ಕಾ ಶರ್ಮಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಅದರಲ್ಲಿಯೂ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಹೇಗೆ ಔಟ್ ಮಾಡಬೇಕೆಂಬ ಉಪಾಯವನ್ನು ಆಸೀಸ್ ಬೌಲರ್‌ಗಳು ಕರಗತಿ ಮಾಡಿಕೊಂಡಿದ್ದಾರೆ. ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಆಫ್ ಸ್ಟಂಪ್ ಹೊರಗಡೆಯ ಎಸೆತಗಳಿಗೆ ವಿರಾಟ್ ಕೊಹ್ಲಿ ಅತಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ಆಫ್ ಸ್ಟಂಪ್ ಹೊರಗಡೆಯ ಎಸೆತಗಳನ್ನು ಬಹಳಷ್ಟು ಎಚ್ಚರಿಕೆಯಿಂದ ಆಡಿದ್ದರು ಹಾಗೂ 69 ಎಸೆತಗಳಲ್ಲಿ 17 ರನ್ ಗಳಿಸಿ ವಿರಾಟ್ ಕೊಹ್ಲಿ ತಾಳ್ಮೆಯ ಆಟವನ್ನು ಪ್ರದರ್ಶಿಸಿದ್ದರು. ಆದರೆ, ಸ್ಕಾಟ್ ಬೋಲೆಂಡ್ ಎಸೆದಿದ್ದ ಆಫ್ ಸ್ಟಂಪ್ ಹೊರಗಡೆಯ ಎಸೆತವನ್ನು ಫ್ರಂಟ್ ಫುಟ್‌ನಲ್ಲಿ ಡಿಫೆನ್ಸ್ ಮಾಡಲು ಪ್ರಯತ್ನಿಸಿ ಸ್ಲಿಪ್‌ನಲ್ಲಿ ಬೇ ವೆಬ್‌ಸ್ಟರ್‌ಗೆ ಕ್ಯಾಚಿತ್ತರು. ಆ ಮೂಲಕ ಮತ್ತೊಮ್ಮೆ ನೆರೆದಿದ್ದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬೇಸರ ಮೂಡಿಸಿದರು.
IND vs AUS: ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡದೆ ಇರಲು ಕಾರಣ ತಿಳಿಸಿದ ಜಸ್‌ಪ್ರೀತ್ ಬುಮ್ರಾ!
ವಿರಾಟ್ ಕೊಹ್ಲಿ ವಿರುದ್ಧ ಅನುಷ್ಕಾ ಶರ್ಮಾ ಗರಂ
ವಿರಾಟ್ ಕೊಹ್ಲಿ ಆರಂಭದಲ್ಲಿಯೇ ಸ್ಲಿಪ್‌ನಲ್ಲಿ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ಕೊಟ್ಟಿದ್ದರು. ಆದರೆ, ಎರಡನೇ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್ ಕೈಗೆ ಸೇರಿದ್ದ ಚೆಂಡು ಮತ್ತೆ ಗಾಳಿಗೆ ಹಾರಿತ್ತು. ಈ ವೇಳೆ ಗಲ್ಲಿಯಲ್ಲಿ ನಿಂತಿದ್ದ ಮಾರ್ನಸ್ ಲಾಬುಶೇನ್ ಅವರು ಎರಡನೇ ಪ್ರಯತ್ನದಲ್ಲಿ ಕ್ಯಾಚ್ ಅನ್ನು ಪಡೆದಿದ್ದರು. ಈ ವೇಳೆ ಗೊಂದಲಕ್ಕೆ ಒಳಗಾಗಿದ್ದ ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ಗೆ ಸಲಹೆ ಕೇಳಿದ್ದರು. ವಿಡಿಯೊ ರಿಪ್ಲೇ ನೋಡಿದ್ದ ಥರ್ಡ್ ಅಂಪೈರ್ ನಾಟ್‌ಔಟ್ ಕೊಟ್ಟಿದ್ದರು. ಇದರಿಂದ ಸ್ಟೀವನ್ ಸ್ಮಿತ್ ಬೇಸರ ವ್ಯಕ್ತಪಡಿಸಿದ್ದರು. ಆ ಮೂಲಕ ಕ ಸ್ಟಾಟ್ ಬೋಲೆಂಡ್ ಎಸೆತದಲ್ಲಿ ಒಂದು ಜೀವದಾನ ಪಡೆದಿದ್ದರು.
ಆದರೆ, ಎರಡನೇ ಬಾರಿ ಸ್ಕಾಟ್ ಬೋಲೆಂಡ್ ಎಸೆದಿದ್ದ ಆಫ್ ಸ್ಟಂಪ್ ಹೊರಗಡೆಯ ಎಸೆತವನ್ನು ಕೆಣಕಲು ಹೋಗಿ ವಿರಾಟ್ ಕೊಹ್ಲಿ ಸ್ಲಿಪ್‌ನಲ್ಲಿ ಡೆಬ್ಯೂಂಟಟ್ ವೆಬ್‌ಸ್ಟರ್‌ಗೆ ಕ್ಯಾಚ್ ಕೊಟ್ಟಿದ್ದರು. ಇದಕ್ಕೂ ಮುನ್ನ ಮೊದಲ ಬಾರಿ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟಿದ್ದ ವಿರಾಟ್ ಕೊಹ್ಲಿ ವಿರುದ್ಧ ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Just missed a beat there! 🥶
— Star Sports (@StarSportsIndia) January 3, 2025
ICYMI, #ViratKohli was dropped by #SteveSmith on the very first ball he faced!#AUSvINDOnStar 👉 5th Test, Day 1 LIVE NOW! | #ToughestRivalry #BorderGavaskarTrophy pic.twitter.com/iLhCzXCYST
ಸ್ಟಾಟ್ ಬೋಲೆಂಡ್‌ಗೆ 4 ವಿಕೆಟ್ ಔಟ್ ಆಗಿರುವ ಕೊಹ್ಲಿ
ವಿರಾಟ್ ಕೊಹ್ಲಿ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಆರು ಇನಿಂಗ್ಸ್‌ಗಳ ಪೈಕಿ ಸ್ಕಾಟ್ ಬೋಲೆಂಡ್‌ಗೆ 4 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಬೋಲೆಂಡ್‌ಗೆ ವಿರಾಟ್ ಕೊಹ್ಲಿ ಕೇವಲ 32 ರನ್‌ಗಳನ್ನು ಗಳಿಸಿದ್ದಾರೆ ಅಷ್ಟೆ.ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಅತ್ಯಂತ ವಿಶ್ವಾಸದಲ್ಲಿ ಕಂಡರೂ ಅವರು ಆಫ್ ಸ್ಟಂಪ್ ಹೊರಗಡೆಯ ಎಸೆತಗಳಲ್ಲಿ ಪದೇ-ಪದೆ ಎಡವುತ್ತಿದ್ದಾರೆ. ಇದು ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ಬಿಸಿಯಾಗಿದೆ.
ಭಾರತ ತಂಡಕ್ಕೆ ಆರಂಭಿಕ ಆಘಾತ
ಭಾರತ ತಂಡ ಟೀ ವಿರಾಮದ ಹೊತ್ತಿಗೆ 50 ಓವರ್‌ಗಳಿಗೆ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 107 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಟೀಮ್ ಇಂಡಿಯಾ ಸಿಡ್ನಿ ಟೆಸ್ಟ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಕ್ರೀಸ್‌ನಲ್ಲಿ ರಿಷಭ್ ಪಂತ್ (32) ಹಾಗೂ ರವೀಂದ್ರ ಜಡೇಜಾ (11) ಇದ್ದಾರೆ. ಶುಭಮನ್ ಗಿಲ್ 20 ರನ್, ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ಔಟ್ ಆಗಿದ್ದರು. ಕೆಎಲ್ ರಾಹುಲ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಈ ಸುದ್ದಿಯನ್ನು ಓದಿ: IND vs AUS: ರೋಹಿತ್ ಶರ್ಮಾ ಔಟ್, 5ನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ!