ಮೆಲ್ಬರ್ನ್ : ಬಾಕ್ಸಿಂಗ್ ಡೇ ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನ (IND vs AUS) ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಔಟ್ ಆದರು. 71ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಬಲವಾದ ಅಪೀಲ್ ಇತ್ತು. ಅಂಪೈರ್ ಔಟ್ ನೀಡಲಿಲ್ಲ ಆದರೆ, ನಾಯಕ ಪ್ಯಾಟ್ ಕಮಿನ್ಸ್ ಡಿಆರ್‌ಎಸ್ ತೆಗೆದುಕೊಂಡರು. ವಿಡಿಯೊ ರೀಪ್ಲೇಗಳನ್ನು ಬಹಳ ಹೊತ್ತು ನೋಡಿದ ನಂತರ ಮೂರನೇ ಅಂಪೈರ್ ಸ್ನಿಕ್ಕೋಮೀಟರ್ ಅನ್ನು ಪರಿಶೀಲಿಸಿದರು. ಚೆಂಡು ಎಲ್ಲಿಯೂ ಬ್ಯಾಟ್ ಅಥವಾ ಗ್ಲೌಸ್‌ಗೆ ತಾಗಿರುವುದು ಕಂಡು ಬಂದಿರಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸಿತ್ತು.
ಸ್ನಿಕೋ ಮೀಟರ್‌ನಲ್ಲಿ ಯಾವುದೇ ಚಲನೆ ಇಲ್ಲದಿದ್ದರೂ, ಮೂರನೇ ಅಂಪೈರ್ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಸ್ನಿಕೋ ಮೀಟರ್‌ನಲ್ಲಿ ಏನೂ ಕಾಣಿಸದ ನಂತರ, ಅಂಪೈರ್ ಮತ್ತೊಮ್ಮೆ ವಿಡಿಯೊವನ್ನು ಮರು ಪರಿಶೀಲಿಸಿದರು ಹಾಗೂ ಚೆಂಡಿನ ಲೈನ್ ಬದಲಾಗಿದೆ ಎಂದರು. ಈ ಕಾರಣಕ್ಕಾಗಿ ಅವರು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ನಿರ್ಧರಿಸಿದರು. ಈ ವೇಳೆ ಯುವ ಬ್ಯಾಟ್ಸ್‌ಮನ್‌ಗೆ ಅಚ್ಚರಿಯಾಯಿತು. ಫೀಲ್ಡ್ ಅಂಪೈರ್ ಜೊತೆ ಮಾತುಕತೆ ನಡೆಸಿ ಅಸಮಾಧಾನವನ್ನು ವ್ಯಕ್ತಪಡಿಸಿದರು ಹಾಗೂ ಪೆವಿಲಿಯನ್‌ಗೆ ಹಿಂತಿರುಗಿದರು.
Third Umpire giving the decision on Yashasvi Jaiswal. pic.twitter.com/HVYzaNkLlf
— Mufaddal Vohra (@mufaddal_vohra) December 30, 2024
ವಿಡಿಯೊ ರೀಪ್ಲೇಗಳನ್ನು ನೋಡಿದ ನಂತರ, ಚೆಂಡಿನ ಚಲನೆಯ ದಿಕ್ಕು ಬದಲಾಗಿದೆ ಎಂದು ಗೋಚರಿಸುತ್ತಿತ್ತು. ಇದರಿಂದಾಗಿ ಮೂರನೇ ಅಂಪೈರ್ ಔಟ್ ತೀರ್ಪನ್ನು ನೀಡಲು ನಿರ್ಧರಿಸಿದರು. ಸಾಮಾನ್ಯವಾಗಿ ಕಾಟ್ ಬಿಹೈಂಡ್‌ಗೆ ಸಂಬಂಧಿಸಿದ ಗೊಂದಲ ಸನ್ನಿವೇಶ ಎದುರಾದಾಗ ಸ್ನಿಕೋಮೀಟರ್ ಅನ್ನು ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ ಮೂರನೇ ಅಂಪೈರ್ ಸ್ನಿಕೋ ಮೀಟರ್ ಅನ್ನು ನಿರ್ಲಕ್ಷಿಸಿ ತೀರ್ಪನ್ನು ನೀಡಿದರು. ಹೀಗಾಗಿ ಮೂರನೇ ಅಂಪೈರ್‌ನ ಈ ಅಚ್ಚರಿ ನಿರ್ಧಾರ ವಿವಾದವನ್ನು ಹುಟ್ಟು ಹಾಕಿದೆ.
#TeamIndia fought hard
— BCCI (@BCCI) December 30, 2024
Australia win the match
Scorecard ▶️ https://t.co/njfhCncRdL#AUSvIND pic.twitter.com/n0W1symPkM
ಎರಡನೇ ಬಾರಿ ಶತಕವಂಚಿತರಾದ ಜೈಸ್ವಾಲ್
ಯಶಸ್ವಿ ಜೈಸ್ವಾಲ್ ಪ್ರಥಮ ಇನಿಂಗ್ಸ್‌ನಲ್ಲಿಯೂ ಶತಕ ಸಿಡಿಸುವ ಅವಕಾಶವನ್ನಯ ಕೈ ಚೆಲ್ಲಿಕೊಂಡಿದ್ದರು. ಈ ವೇಳೆ 82 ರನ್ ಗಳಿಸಿ ರನ್ ಔಟ್ ಆಗಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿಯೂ ಒತ್ತಡದ ಸನ್ನಿವೇಶದಲ್ಲಿ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಈ ಇನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 84 ರನ್‌ಗಳು ಬಂದವು. 208 ಎಸೆತಗಳಲ್ಲಿ ಅವರು 8 ಬೌಂಡರಿಗಳನ್ನು ಬಾರಿಸಿದರು. ಆದರೆ, ಈ ಬಾರಿ ವಿವಾದಾತ್ಮಕ ನಿರ್ಧಾರದಿಂದ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಭಾರತಕ್ಕೆ ಗೆಲ್ಲಲು 340 ರನ್‌ಗಳ ಗುರಿ ಇತ್ತು. ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ವೈಯಕ್ತಿಕ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
ಭಾರತ ತಂಡಕ್ಕೆ ಹೀನಾಯ ಸೋಲು
ಐದನೇ ದಿನವಾದ ಸೋಮವಾರ ಆಸ್ಟ್ರೇಲಿಯಾ ನೀಡಿದ್ದ 340 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ನಿಂದ ವೈಯಕ್ತಿಕ ಎರಡಂಕಿ ಮೂಡಿ ಬಂದಿಲ್ಲ. ಭಾರತ ತಂಡ ಅಂತಿಮವಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ 79.1 ಓವರ್‌ಗಳಿಗೆ 155 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 184 ರನ್‌ಗಳಿಂದ ಸೋಲು ಅನುಭವಿಸಿತು.
ಈ ಸುದ್ದಿಯನ್ನು ಓದಿ: IND vs AUS: ಬ್ಯಾಟಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ, ಆಸ್ಟ್ರೇಲಿಯಾಗೆ ಭರ್ಜರಿ ಜಯ!