Wednesday, 8th January 2025

IND vs AUS: ಅಭ್ಯಾಸದಲ್ಲೂ ರೋಹಿತ್‌ ವಿಫಲ; ಪಡಿಕ್ಕಲ್‌ ಎಸೆತಕ್ಕೆ ಕ್ಲೀನ್‌ ಬೌಲ್ಡ್‌; ಇಲ್ಲಿದೆ ವಿಡಿಯೊ

ಮೆಲ್ಬರ್ನ್‌: ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ಟೀಮ್‌ ಇಂಡಿಯಾ(IND vs AUS) ನಾಯಕ ರೋಹಿತ್‌ ಶರ್ಮ(Rohit Sharma) ಅವರು ನೆಟ್ಸ್‌ ಅಭ್ಯಾಸದ ವೇಳೆಯೂ ಘೋರ ವೈಫಲ್ಯ ಕಂಡಿದ್ದಾರೆ. ಪಾರ್ಟ್‌ ಟೈಮ್‌ ಬೌಲರ್‌ ದೇವದತ್ತ ಪಡಿಕ್ಕಲ್‌(Devdutt Padikkal) ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಟ್‌ ಆಗಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್‌(Video Viral) ಆಗುತ್ತಿದೆ.

ಥ್ರೋಡೌನ್ ಪರಿಣತ ದಯಾನಂದ ಗಾಂಧಿ ಭಾನುವಾರ ಅಭ್ಯಾಸದ ವೇಳೆ ಎಸೆದ ಚೆಂಡನ್ನು ಆಡುವಾಗ ರೋಹಿತ್ ಮೊಣಕಾಲಿಗೆ ಬಡಿದು ಗಾಯಗೊಂಡಿದ್ದರು. ವೇಗಿ ಆಕಾಶ್ ದೀಪ್‌ ಕೈಗೂ ಗಾಯವಾಗಿತ್ತು. ರೋಹಿತ್ ಅವರ ಕಾಲಿಗೆ ಐಸ್‌ಪ್ಯಾಕ್ ಇಟ್ಟು ನೋವು ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ಅಭ್ಯಾಸದ ವೇಳೆ ಪಡಿಕ್ಕಲ್‌ ಸ್ಪಿನ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ರಾಹುಲ್‌ ಮತ್ತು ಜೈಸ್ವಾಲ್‌ ಆರಂಭಿಕರಾಗಿ ಆಡುತ್ತಿರುವ ಕಾರಣ ರೋಹಿತ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ. ಇದು ಕೂಡ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ಕಾರಣವಿರಬಹುದು.

ಪ್ರಾಕ್ಟೀಸ್‌ ಪಿಚ್‌ ಬಗ್ಗೆ ಭಾರತ ತಂಡ ಅತೃಪ್ತಿ ವ್ಯಕ್ತಪಡಿಸಿದ ಬೆನ್ನಲ್ಲೇ, ಎಂಸಿಜಿ ಕ್ಯುರೇಟರ್ ಮ್ಯಾಟ್ ಪೇಜ್ ಅವರು ತಾಲೀಮಿಗೆ ನೀಡಲಾಗಿದ್ದ ಪಿಚ್‌ ಗುಣಮಟ್ಟ ಸಮರ್ಥಿಸಿಕೊಂಡಿದ್ದು, ‘ಶಿಷ್ಟಾಚಾರ ಅನುಸರಿಸಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ IND vs AUS: ದಾಖಲೆ ಸನಿಹ ಬುಮ್ರಾ, ಸ್ಮಿತ್‌

‘ಪಂದ್ಯಕ್ಕೆ ಮೂರು ದಿನ ಮೊದಲು ಪಿಚ್‌ ಸಿದ್ಧಪಡಿಸುವುದು ಸಂಪ್ರದಾಯ. ಪ್ರವಾಸಿ ತಂಡ ಅದಕ್ಕೆ ಮೊದಲೇ ಬಂದರೆ, ಅವರು ಈಗಾಗಲೇ ಇರುವ ಪಿಚ್‌ನಲ್ಲಿ ಆಡಬೇಕಾಗುತ್ತದೆ’ ಎಂದು ಪೇಜ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ತಂಡ ಇಲ್ಲಿಯವರೆಗೂ ಆಡಿದ 14 ಟೆಸ್ಟ್‌ ಪಂದ್ಯಗಳಿಂದ ಕೇವಲ 4ರಲ್ಲಿ ಗೆದ್ದಿದ್ದು, ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. 1948ರಲ್ಲಿ ಮೊಟ್ಟ ಮೊದಲ ಬಾರಿ ಭಾರತ ತಂಡ ಎಂಸಿಜಿನಲ್ಲಿ ಟೆಸ್ಟ್‌ ಆಡಿತ್ತು. ಈ ವೇಳೆ ಡೊನಾಲ್ಡ್‌ ಬ್ರಾಡ್‌ಮನ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಲಾಲ್‌ ಅಮರನಾಥ್‌ ಅವರ ನಾಯಕತ್ವದ ಭಾರತ 233 ರನ್‌ಗಳಿಂದ ಸೋಲು ಅನುಭವಿಸಿತ್ತು. 2014ರ ಬಳಿಕ ಭಾರತ ಎಂಸಿಜಿಯಲ್ಲಿ ಸೋತಿಲ್ಲ. ಒಂದರಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯಿಸಿದೆ.