ಚೆನ್ನೈ: ಬಹುನಿರೀಕ್ಷತ ಭಾರತ ಮತ್ತು ಬಾಂಗ್ಲಾದೇಶ(IND vs BAN) ನಡುವಣ 2ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ(ಸೆ.19) ಆರಂಭಗೊಳ್ಳಲಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ಚೆನ್ನೈ ತಲುಪಿದ್ದು ಅಭ್ಯಾಸ ಕೂಡ ಶುರು ಮಾಡಿದ್ದಾರೆ. ಆದರೆ, ಈ ಪಂದ್ಯ ರದ್ದುಗೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿನ(bangladesh crisis) ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಭಾರತ ತಂಡ ಬಾಂಗ್ಲಾ ವಿರುದ್ಧ ಆಡಬಾರದು ಎಂಬ ಆಗ್ರಹ ಜೋರಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಇಂಡೋ-ಬಾಂಗ್ಲಾ ಟೆಸ್ಟ್(Boycott INDvBAN Test) ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗಲಾರಂಭಿಸಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಕೂಡ ಬೀದಿಗಿಳಿದು ಯಾವುದೇ ಕಾರಣಕ್ಕೂ ಹಿಂದೂಗಳಿಗೆ ಚಿತ್ರಹಿಂಸೆ ನೀಡಿದ ಬಾಂಗ್ಲಾದೇಶದ ವಿರುದ್ಧ ಭಾರತ ಕ್ರಿಕೆಟ್ ಸರಣಿ ಆಡಬಾರದು. ಸರಣಿಯಿಂದ ಹಿಂದೆ ಸರಿದು ಹಿಂದೂಗಳ ಪರ ನಿಲ್ಲುವಂತೆ ಆಗ್ರಹಿಸಿದ್ದಾರೆ.
ಬಾಂಗ್ಲಾದೇಶ(Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಶೇಕ್ ಹಸೀನಾ ಪ್ರಧಾನಿ ಹುದ್ದೆಯಿಂದ ನಿರ್ಗಮನದ ಬಳಿಕ ಮೊಹಮ್ಮದ್ ಯೂನಸ್ ಅಧಿಕಾರ ವಹಿಸಿಕೊಂಡರೂ ಹಿಂದೂಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ. ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗುತ್ತಿದೆ. ಮನೆಗಳಿಗೆ ನುಗ್ಗಿ ಮಹಿಳೆಯರನ್ನ ಅತ್ಯಾಚಾರ ಮಾಡಿದ ಘಟನೆಯೂ ನಡೆದಿದೆ. ಚಿತ್ರಹಿಂಸೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ವೈರಲ್ ಆಗುತ್ತಲೇ ಇದೆ. ಭಾರತದಲ್ಲಿಯೂ ಈ ಘಟನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇದೀಗ ನಮ್ಮವರಿಗೆ ಹಿಂಸೆ ಕೊಡುತ್ತಿರುವ ಬಾಂಗ್ಲಾದೇಶದ ಜತೆ ಕ್ರಿಕೆಟ್ ಆಡುತ್ತಿರುವ ಬಗ್ಗೆ ಸ್ವತಃ ಭಾರತೀಯ ಹಿಂದೂಗಳಿಂದಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಹಿಂದೂ ಸಂಘಟನೆಗಳು ಕೂಡಲೇ ಈ ಸರಣಿ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ IND vs BAN: ಚೆನ್ನೈಗೆ ಬಂದಿಳಿದ ಬಾಂಗ್ಲಾ ತಂಡಕ್ಕೆ ಭರ್ಜರಿ ಸ್ವಾಗತ; ಇಲ್ಲಿದೆ ವಿಡಿಯೊ
ಪಾಪಿಗಳಿಗೆ ಸ್ವಾಗತ….
ಬಾಂಗ್ಲಾದೇಶ ಟೆಸ್ಟ್ ತಂಡ ಭಾನುವಾರ ಚೆನ್ನೈಗೆ ಬಂದಿಳಿದ ವೇಳೆ ಆಟಗಾರರನ್ನು ಶಾಲು, ಹೂವಿನ ಹಾರ ಹಾಕಿ ಭರ್ಜರಿ ಸ್ವಾಗತ ಕೋರಲಾಗಿತ್ತು. ಈ ಘಟನೆ ಬಗ್ಗೆ ಇದೀಗ ಭಾರತೀಯರು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ. ಹಿಂದೂ ವಿರೋಧಿ, ಪಾಪಿಗಳ ದೇಶದ ಆಟಗಾರರಿಗೆ ಈ ರೀತಿಯ ಸತ್ಕಾರ ಬೇಕಿರಲಿಲ್ಲ ಎಂದು ಹೇಳಲಾರಂಭಿಸಿದ್ದಾರೆ.
ಪಂದ್ಯಕ್ಕೆ ಮತ್ತು ತಂಡಕ್ಕೆ ಬಿಗಿ ಭದ್ರತೆ
ಹಿಂದುಗಳ ಮೇಲಿನ ದಾಳಿಯ ನಂತರ ಬಾಂಗ್ಲಾದ ವಿರುದ್ಧ ಭಾರತದಲ್ಲಿ ಹೆಚ್ಚಿನ ಆಕ್ರೋಶವಿದೆ. ಹೀಗಾಗಿ ಬಾಂಗ್ಲಾ ತಂಡಕ್ಕೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ತಂಡಕ್ಕೆ ಸೂಕ್ತ ಭದ್ರತೆ ಒದಗಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಫಾರುಖ್ ಅಹ್ಮದ್ಗೆ ಭರವಸೆ ನೀಡಿದ್ದಾರೆ. ಪಂದ್ಯಕ್ಕೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದ್ವಿತೀಯ ಪಂದ್ಯ ನಡೆಯಲಿರುವ ಉತ್ತರ ಪ್ರದೇಶದ ಕಾನ್ಪುರ ಟೆಸ್ಟ್‌ಗೆ ಭಾರೀ ಬಿಗಿ ಬಂದೋಬಸ್ತ್ ಇರಲಿದೆ ಎಂದು ಸರಣಿ ಆರಂಭಕ್ಕೂ ಮುನ್ನವೇ ತಿಳಿಸಲಾಗಿತ್ತು.