Thursday, 19th September 2024

IND vs BAN: ಚೆಪಾಕ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?

IND vs BAN

ಚೆನ್ನೈ: ಬಹುನಿರೀಕ್ಷಿತ ಭಾರತ(IND vs BAN) ಮತ್ತು ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್‌(IND vs BAN First Test) ಪಂದ್ಯ ನಾಳೆಯಿಂದ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ(M.A. Chidambaram Stadium) ನಡೆಯಲಿದೆ. ಈ ಸ್ಟೇಡಿಯಂನಲ್ಲಿ ಭಾರತ ತಂಡದ ಮತ್ತು ಆಟಗಾರರ ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.

ಪಂದ್ಯಗಳು

ಭಾರತ ತಂಡ ಚೆನ್ನೈಯ ಚೆಪಾಕ್‌ನಲ್ಲಿ(Chepauk) ಇದುವರೆಗೆ 34 ಪಂದ್ಯಗಳನ್ನು ಆಡಿದೆ. ಈ ಪೈಕಿ 15 ಗೆಲುವು ಮತ್ತು 7 ಪಂದ್ಯದಲ್ಲಿ ಸೋಲು ಕಂಡಿದೆ. 11 ಪಂದ್ಯ ಡ್ರಾಗೊಂಡಿದೆ. 1 ಪಂದ್ಯ ಟೈಗೊಂಡಿದೆ. ಭಾರತ ಇಲ್ಲಿ ಕೊನೆಯ ಪಂದ್ಯ ಆಡಿದ್ದು 2021ರಲ್ಲಿ ಇಂಗ್ಲೆಂಡ್‌ ವಿರುದ್ಧ. 482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಭಾರತೀಯ ಸ್ಪಿನ್ನರ್ ಗಳ ಜಾಲಕ್ಕೆ ತುತ್ತಾಗಿ ಕೇವಲ 164 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 317 ರನ್ ಅಂತರದ ಸೋಲನುಭವಿಸಿತ್ತು. ಇಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತ 7ವಿಕೆಟ್‌ಗೆ 759 ರನ್‌. ಇದು 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ದಾಖಲಾಗಿತ್ತು.

1952ರಲ್ಲಿ ಮೊದಲ ಗೆಲುವು

ಚಿದಂಬರಂ ಸ್ಟೇಡಿಯಂನಲ್ಲಿ ಭಾರತವು ತನ್ನ ಮೊದಲ ಟೆಸ್ಟ್ ಗೆಲುವು ಸಾಧಿಸಿದ್ದು 1952ರಲ್ಲಿ. ಪ್ರವಾಸಿ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಮತ್ತು ಎಂಟು ರನ್‌ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ವಿನೂ ಮಂಕಡ್ 8 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 266 ರನ್‌ಗಳಿಗೆ ಕುಸಿದರೆ, ಭಾರತ 9 ವಿಕೆಟ್‌ಗೆ 457 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 183 ರನ್‌ಗಳಿಗೆ ಆಲೌಟಾಗಿ ಸೋಲು ಕಂಡಿತ್ತು.

ಇದನ್ನೂ ಓದಿ IND vs BAN: ನಾಳೆಯಿಂದ ಭಾರತ-ಬಾಂಗ್ಲಾ ಟೆಸ್ಟ್‌

ಅತ್ಯಧಿಕ ರನ್‌

ಈ ಸ್ಟೇಡಿಯಂನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಮಾಜಿ ದಿಗ್ಗಜ ಆಟಗಾರ ಸುನೀಲ್‌ ಗವಾಸ್ಕರ್‌ ಹೆಸರಿನಲ್ಲಿದೆ. ಅವರು 12 ಪಂದ್ಯಗಳಿಂದ 1018 ರನ್‌ ಬಾರಿಸಿದ್ದಾರೆ. ಅಜೇಯ 236 ರನ್‌ ಗರಿಷ್ಠ ವೈಯಕ್ತಿಕ ಗಳಿಕೆಯಾಗಿದೆ. ಸಚಿನ್‌ ತೆಂಡೂಲ್ಕರ್‌ 10 ಪಂದ್ಯಗಳಿಂದ 970 ರನ್‌ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಪ್ರಸಕ್ತ ಆಡುತ್ತಿರುವ ಆಟಗಾರರ

ಅತ್ಯಧಿಕ ವಿಕೆಟ್‌

ಈ ಮೈದಾನದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಕನ್ನಡಿಗ ಅನಿಲ್‌ ಕುಂಬ್ಳೆ ಹೆಸರಿನಲ್ಲಿ. ಕುಂಬ್ಳೆ 8 ಪಂದ್ಯಗಳಿಂದ 48 ವಿಕೆಟ್‌ ಕಿತ್ತಿದ್ದಾರೆ. 42 ವಿಕೆಟ್‌ ಕಿತ್ತ ಹರ್ಭಜನ್‌ಗೆ ದ್ವಿತೀಯ ಸ್ಥಾನ. ಪ್ರಸ್ತುತ ತಂಡದಲ್ಲಿ ಆಡುತ್ತಿರುವ ಆರ್‌.ಅಶ್ವಿನ್‌ 30 ವಿಕೆಟ್‌ ಕಿತ್ತಿದ್ದಾರೆ.