ಆಕ್ಲೆಂಡ್: ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಪ್ರವಾಸಿ ನ್ಯೂಜಿಲ್ಯಾಂಡ್(IND vs NZ) ತನ್ನ ತಂಡವನ್ನು(New Zealand Test squad) ಪ್ರಕಟಿಸಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮಾರ್ಕ್ ಚಾಪ್ಮನ್ ಮೊದಲ ಪಂದ್ಯದಲ್ಲಿ ವಿಲಿಯಮ್ಸನ್ ಸ್ಥಾನ ತುಂಬಲಿದ್ದಾರೆ. ದ್ವಿತೀಯ ಟೆಸ್ಟ್ ವೇಳೆಗೆ ವಿಲಿಯಮ್ಸನ್ ತಂಡ ಸೇರಲಿದ್ದಾರೆ ಎಂದು ಕಿವೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ 19 ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟಾಮ್ ಲ್ಯಾಥಮ್ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಡೆವೊನ್ ಕಾನ್ವೆ, ಮ್ಯಾಟ್ ಹೆನ್ರಿ, ಡೆರಿಲ್ ಮಿಚೆಲ್ ಮುಂತಾದ ಅನುಭವಿ ಆಟಗಾರು ತಂಡದಲ್ಲಿದ್ದಾರೆ.
ಮೈಕಲ್ ಬ್ರೇಸ್ವೆಲ್ ಮೊದಲನೇ ಪಂದ್ಯಕ್ಕೆ ಮಾತ್ರ ಲಭ್ಯರಾಗಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು ಬಳಿಕ ತವರಿಗೆ ಹಿಂತಿರುಗಲಿದ್ದಾರೆ. ಅಂತಿಮ ಎರಡು ಪಂದ್ಯಗಳಿಗೆ ಐಶ್ ಸೋಧಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ತಂಡ ಈ ವಾರದ ಅತ್ಯಂಕ್ಕೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಸೆ ಜೀವಂತವರಿಸಿಕೊಳ್ಳಬೇಕಿದ್ದರೆ ನ್ಯೂಜಿಲ್ಯಾಂಡ್ಗೆ ಈ ಸರಣಿಯಲ್ಲಿ ಗೆಲುವು ಅತ್ಯಗತ್ಯ. ಸದ್ಯ ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರಷ್ಟೇ ಕಿವೀಸ್ಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪುವ ಅವಕಾಶ ಸಿಗಬಹುದು. ಅಗ್ರ ಸ್ಥಾನಿಯಾಗಿರುವ ಭಾರತಕ್ಕೂ ಫೈನಲ್ ಸ್ಥಾನ ಖಾತ್ರಿಪಡಿಸಬೇಕಿದ್ದರೆ ಸರಣಿ ಗೆಲುವು ಹೀಗಾಗಿ ಈ ಟೆಸ್ಟ್ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.
ಇದನ್ನೂ ಓದಿ IND vs BAN: ಸೂರ್ಯಕುಮಾರ್ ಸಿಕ್ಸರ್ ಏಟಿಗೆ ಜಾಸ್ ಬಟ್ಲರ್ ದಾಖಲೆ ಪತನ
ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್,ವಿಲ್ ಓರೊರ್ಕ್,ಅಜಾಜ್ ಪಟೇಲ್,ಗ್ಲೆನ್ ಪಿಲಿಪ್ಸ್,ರಚಿನ್ ರವೀಂದ್ರ,ಮಿಚೆಲ್ ಸ್ಯಾಂಟ್ನರ್,ಬೆನ್ ಸೀರ್ಸ್,ಟಿಮ್ ಸೌಥಿ,ವಿಲ್ ಯಂಗ್,ಮೈಕಲ್ ಬ್ರೇಸ್ವೆಲ್ (ಮೊದಲ ಟೆಸ್ಟ್),ಐಶ್ ಸೋಧಿ (2ನೇ ಹಾಗೂ 3ನೇ ಟೆಸ್ಟ್), ಮಾರ್ಕ್ ಚಾಪ್ಮನ್.
ಸರಣಿ ವೇಳಾಪಟ್ಟಿ
ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು
ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ
ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ