Monday, 25th November 2024

IND vs SA: ಟಿ20ಐ ಸರಣಿಯ ಸಂಪೂರ್ಣ ವೇಳಾಪಟ್ಟಿ, ಆಟಗಾರರು, ನೇರ ಪ್ರಸಾರದ ವಿವರ!

IND vs SA T20I Series 2024: Full Schedule, Fixtures, Squads, Time Table, telecast, other details

ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿದ ಬಳಿಕ ಭಾರತ ತಂಡ, ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (IND vs SA) ಅವರದೇ ನೆಲದಲ್ಲಿ ನಾಲ್ಕು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಟಿ20ಐ ಸರಣಿಯು ನವೆಂಬರ್‌ 8 ರಂದು ಮೊದಲನೇ ಪಂದ್ಯದ ಮೂಲಕ ಆರಂಭವಾಗಲಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕೊನೆಯ ಬಾರಿ ಉಭಯ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತ ತಂಡ ಎರಡನೇ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು.

ಅಂದ ಹಾಗೆ ಇದೀಗ ಟಿ20 ಸರಣಿಯಲ್ಲಿ ಸಂಪೂರ್ಣ ಯುವ ಆಟಗಾರರು ಭಾರತದ ಪರ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ನಾಲ್ಕು ಪಂದ್ಯಗಳು ಕೂಡ ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಡರ್ಬನ್‌ನಲ್ಲಿ ಮೊದಲನೇ ಪಂದ್ಯ, ಜಿಕೆಬರಾ, ಸೆಂಚೂರಿಯನ್‌ ಹಾಗೂ ಜೋಹನ್ಸ್‌ಬರ್ಗ್‌ನಲ್ಲಿ ಕ್ರಮವಾಗಿ 2, 3 ಮತ್ತು 4ನೇ ಟಿ20ಐ ಪಂದ್ಯಗಳು ನಟಡೆಯಲಿವೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಬಹುತೇಕ ಹಿರಿಯ ಆಟಗಾರರು ಆಡಲಿದ್ದಾರೆ. ಟಿ20 ವಿಶ್ವಕಪ್‌ ಆಡಿದ್ದ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಅರ್ಷದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌ ಆಡುತ್ತಿದ್ದಾರೆ. ಇನ್ನುಳಿದಂತೆ ಐಪಿಎಲ್‌ ಸೇರಿದಂತೆ ದೇಶಿ ಕ್ರಿಕೆಟ್‌ ಸ್ಟಾರ್‌ಗಳು ಆಡಲಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20ಐ ಸರಣಿಯ ಸಂಪೂರ್ಣ ವಿವರ

ಮೊದಲನೇ ಟಿ20ಐ ಪಂದ್ಯ: ಡಬರ್ನ್‌ (ಭಾರತೀಯ ಕಾಲಮಾನ ರಾತ್ರಿ 8: 30ಕ್ಕೆ ಆರಂಭ)
ಎರಡನೇ ಟಿ20ಐ ಪಂದ್ಯ: ಜಿಕಬೆರಾ (ಭಾರತೀಯ ಕಾಲಮಾನ ರಾತ್ರಿ 07: 30ಕ್ಕೆ ಆರಂಭ)
ಮೂರನೇ ಟಿ20ಐ ಪಂದ್ಯ: ಸೆಂಚೂರಿಯನ್‌ (ಭಾರತೀಯ ಕಾಲಮಾನ 08: 30ಕ್ಕೆ ಆರಂಭ)
ನಾಲ್ಕನೇ ಟಿ20ಐ ಪಂದ್ಯ: ಜೋಹನ್ಸ್‌ಬರ್ಗ್‌ (ಭಾರತೀಯ ಕಾಲಮಾನ ರಾತ್ರಿ 08: 30ಕ್ಕೆ ಆರಂಭ)

ಟಿ20ಐ ಸರಣಿಯ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಆವೇಶ್ ಖಾನ್ , ಯಶ್ ದಯಾಳ್

ಟಿ20ಐ ಸರಣಿಯ ದಕ್ಷಿಣ ಆಫ್ರಿಕಾ ತಂಡ

ಏಡೆನ್ ಮಾರ್ಕ್ರ ಮ್ (ನಾಯಕ), ಒಟ್ನೀಲ್ ಬಾರ್ಟ್‌ಮನ್‌, ಜೆರಾಲ್ಡ್ ಕೊಯೆಡ್ಜೀ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯೆನ್ಸೆನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಎಂಪಾಂಗ್ವಾನಾ, ಎನ್‌ಕಾಬ ಪೀಟರ್, ರಿಯಾನ್ ರಿಕಲ್ಟನ್‌, ಆಂಡಿಲೆ
ಸಿಮೆಲೇನ್‌, ಲುಥೋ ಸಿಂಪಾಮ್ಲಾ (3 ಮತ್ತು 4ನೇ ಪಂದ್ಯ), ಟ್ರಿಸ್ಟನ್‌ ಸ್ಟಬ್ಸ್‌

ಭಾರತ vs ದಕ್ಷಿಣ ಆಫ್ರಿಕಾ ಟಿ20ಐ ಸರಣಿಯ ನೇರ ಪ್ರಸಾರ ಮತ್ತು ಲೈವ್‌ ಸ್ಟ್ರೀಮಿಂಗ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20ಐ ಸರಣಿಯ ಪಂದ್ಯಗಳು ಸ್ಪೋರ್ಟ್ಸ್‌ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿವೆ ಮತ್ತು ಪಂದ್ಯಗಳು ಜಿಯೋ ಸಿನಿಮಾ ಅಪ್ಲಿಕೇಷನ್‌ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ನಲ್ಲಿಯೂ ವೀಕ್ಷಿಸಬಹುದಾಗಿದೆ.

ಈ ಸುದ್ದಿಯನ್ನು ಓದಿ: IND vs SA: ಸಂಜು-ಅಭಿಷೇಕ್‌ ಓಪನರ್ಸ್‌, ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI