ಡರ್ಬನ್: ಇದೇ ಜೂನ್‌ನಲ್ಲಿ ಬ್ರಿಜ್‌ಟೌನ್ ಬಾರ್ಬಡಾಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA T20I) ತಂಡಗಳು ಫೈನಲ್ ಬಳಿಕ ಮೊದಲ ಬಾರಿಗೆ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಅಣಿಯಾಗಿದೆ. ಪಂದ್ಯವನ್ನಾಡಲು ಈಗಾಗಲೇ ಭಾರತ ತಂಡ ಡರ್ಬನ್ ತಲುಪಿದೆ(Team India touchdowns Durban). ಮುಂಗಳವಾರದಿಂದ ಅಭ್ಯಾಸ ಆರಂಭಿಸಿದೆ. ಸರಣಿಯ ಮೊದಲ ಪಂದ್ಯ ನ.8 ರಂದು ನಡೆಯಲಿದೆ. ಆಟಗಾರರು ಡರ್ಬನ್ ತಲುಪಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಅನುಭವಿ ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನಾಡಲು ಈ ಸರಣಿಯಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಐಡೆನ್ ಮಾರ್ಕ್‌ರಮ್ ಜತೆಗೆ ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ಹೈನ್ರಿಚ್ ಕ್ಲಾಸೆನ್. ಟ್ರಿಸ್ಟನ್ ಸ್ಟಬ್ಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲ ಹೊಂದಿದೆ. ಹೀಗಾಗಿ ಯುವ ಆಟಗಾರರನ್ನು ನೆಚ್ಚಿಕೊಂಡ ಸೂರ್ಯಕುಮಾರ್ ಯಾದವ್ ಪಡೆಗೆ ಈ ಸರಣಿ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆ. ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿದ್ದಾರೆ. ಸರಣಿ ಗೆದ್ದರೆ 2026ರ ಟಿ20 ವಿಶ್ವಕಪ್‌ಗೂ ಮುನ್ನ ತಂಡವೊಂದನ್ನು ಕಟ್ಟಿದ ಕೀರ್ತಿ ಲಕ್ಷ್ಮಣ್‌ಗೆ ಸಲ್ಲುತ್ತದೆ.
ಇದನ್ನೂ ಓದಿ Border Gavaskar Trophy: ಭಾರತ ‘ಎ’ ತಂಡಕ್ಕೆ ಕೆ.ಎಲ್ ರಾಹುಲ್ ಸೇರ್ಪಡೆ
ಮುಖಾಮುಖಿ
ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೆ ಒಟ್ಟು 5 ಟಿ20 ಸರಣಿಯನ್ನಾಡಿದೆ. ಈ ಪೈಕಿ 3 ರಲ್ಲಿ ಗೆಲುವು ಒಂದು ಸೋಲು ಮತ್ತು ಒಂದು ಡ್ರಾ ಸಾಧಿಸಿದೆ. ಭಾರತ ತಂಡ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿ ಆಡಿದ್ದು ಕಳೆದ ವರ್ಷ(2023). ಇದು ಮೂರು ಪಂದ್ಯಗಳ ಸರಣಿಯಾಗಿತ್ತು. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಉಳಿದ 2 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿತ್ತು.
ತಂಡಗಳು
ಭಾರತ: ಸೂರ್ಯಕುಮಾರ್ (ನಾಯಕ), ಅಭಿಷೇಕ್ ಶರ್ಮಾ, ಸ್ಯಾಮ್ಸನ್, ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್, ಅಕ್ಷರ್, ರಮಣ್‌ದೀಪ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಶ್‌ದೀಪ್, ವೈಶಾಖ್ ವಿಜಯ್‌ಕುಮಾರ್, ಆವೇಶ್ ಖಾನ್, ಯಶ್ ದಯಾಳ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಬಾರ್ಟ್‌ಮ್ಯಾನ್, ಗೆರಾಲ್ಡ್ ಕೋಟ್ಜೀ, ಡೊನೊವನ್ ಫೆರಿಯೆರಾ, ರೀಜಾ ಹೆಂಡ್ರಿಕ್, ಮಾರ್ಕೊ ಯಾನ್ಸನ್, ಹೈನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್‌ಲಾಲಿ, ಎನ್‌ಖಾಬ ಪೀಟರ್, ರ್‍ಯಾನ್ ರಿಕೆಲ್ಟನ್, ಆ್ಯಂಡಿಲೆ, ಲುಥೊ ಸಿಪಾಮ್ಲ, ಟ್ರಿಸ್ಟನ್ ಸ್ಟಬ್ಸ್.