Thursday, 12th December 2024

ಫುಟ್‌ಬಾಲ್‌: ಭಾರತ – ಆಫ್ಘಾನಿಸ್ತಾನ್ ನಡುವಿನ ಪಂದ್ಯ ಡ್ರಾ

ದೋಹಾ: ಮುನ್ನಡೆ ಉಳಿಸಿಕೊಳ್ಳಲಾಗದ ಹತಾಶೆಯಲ್ಲಿ ಭಾರತ ಫುಟ್‌ಬಾಲ್‌ ತಂಡವು ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಡ್ರಾ ಸಾಧಿಸಿತು. ಆದರೆ, ಏಷ್ಯಾಕಪ್ ಅರ್ಹತೆಯ ಮೂರನೇ ಸುತ್ತಿನಲ್ಲಿ ಆಡಲು ಅವಕಾಶ ಗಳಿಸಿತು.

ಮಂಗಳವಾರ ಜಸ್ಸಿಮ್‌ ಬಿನ್ ಹಮದ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದವು. ಪಂದ್ಯದ 75ನೇ ನಿಮಿಷದಲ್ಲಿ ಅಫ್ಗಾನಿಸ್ತಾನದ ಒವಾಯಿಸ್ ಅಜೀಜಿ ಭಾರತಕ್ಕೆ ‘ಉಡುಗೊರೆ ಗೋಲು’ ನೀಡಿದರು.

ಆದರೆ 82ನೇ ನಿಮಿಷದಲ್ಲಿ ಜಾಮನಿ ಗಳಿಸಿದ ಗೋಲಿನ ಬಲದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. 2019ರಲ್ಲಿ ನಡೆದ ಪಂದ್ಯದಲ್ಲೂ ಉಭಯ ತಂಡಗಳು 1-1ರಿಂದ ಡ್ರಾ ಸಾಧಿಸಿದ್ದವು.

ಏಳು ಪಾಯಿಂಟ್ಸ್ ಕಲೆ ಹಾಕಿದ ಸುನಿಲ್ ಚೆಟ್ರಿ ನಾಯಕತ್ವದ ಭಾರತ ‘ಇ’ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿತು. ಕತಾರ್ ಮತ್ತು ಒಮನ್ ಮೊದಲೆರಡು ಸ್ಥಾನಗಳಲ್ಲಿವೆ. ಅಫ್ಗಾನಿಸ್ತಾನದ ನಾಲ್ಕನೇ ಸ್ಥಾನದಲ್ಲಿದೆ.