Wednesday, 25th December 2024

Champions Trophy schedule: ಫೆ 23ಕ್ಕೆ ಭಾರತ-ಪಾಕ್‌ ಪಂದ್ಯ, ಚಾಂಪಿಯನ್ಸ್‌ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ!

India vs Pakistan on February 23 as ICC announces full schedule for the Champions Trophy 2025

ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy schedule) ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮಂಗಳವಾರ ಪ್ರಕಟಿಸಿದೆ. ಅಲ್ಲದೆ ಭಾರತ ತಂಡದ ಹೈಬ್ರಿಡ್‌ ಮಾಡೆಲ್‌ ಪಂದ್ಯಗಳು ಯುಎಇಯ ದುಬೈನಲ್ಲಿ ನಡೆಯಲಿವೆ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೂಡ ಒಪ್ಪಿಗೆ ನೀಡಿದೆ.

ಮುಂದಿನ ವರ್ಷ ಫೆಬ್ರವರಿ 23 ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಒಂದು ವೇಳೆ ಈ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ಗೆ ತಲುಪಿದರೆ ಫೈನಲ್‌ ಪಂದ್ಯ ದುಬೈನಲ್ಲಿ ನಡೆಯಲಿದೆ. ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಣ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿಯು ಆರಂಭಗೊಂಡು ಮಾರ್ಚ್‌ 9 ರಂದು ಫೈನಲ್‌ ಮೂಲಕ ಅಂತ್ಯವಾಗಲಿದೆ. ಒಟ್ಟು 8 ತಂಡಗಳ ನಡುವೆ 15 ಪಂದ್ಯಗಳು ಜರುಗಲಿವೆ. ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 02:30ಕ್ಕೆ ಆರಂಭವಾಗಲಿದ್ದು, ಪಂದ್ಯಗಳನ್ನು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.

ಹೈಬ್ರಿಡ್‌ ಮಾಡೆಲ್‌ ಚಾಂಪಿಯನ್ಸ್‌ ಟ್ರೋಫಿ

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆಸಲು ಐಸಿಸಿ ಒಪ್ಪಿದೆ ಸೂಚಿಸಿದೆ. ರಾಜಕೀಯ ಕಾರಣಗಳಿಂದಾಗಿ ಭಾರತ ತಂಡ, ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಸಿಸಿಐ ಭಾರತದ ಪಂದ್ಯಗಳನ್ನು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆಸನಬೇಕೆಂದು ಐಸಿಸಿಗೆ ಮನವಿ ಮಾಡಿತ್ತು. ಅದರಂತೆ ಐಸಿಸಿ ಹಾಗೂ ಪಿಸಿಬಿ ಒಪ್ಪಿಗೆ ಸೂಚಿಸಿತ್ತು. ಭಾರತ ತಂಡ ಫೈನಲ್‌ಗೆ ತಲುಪಿದರೆ ಪ್ರಶಸ್ತಿ ಸುತ್ತಿನ ಪಂದ್ಯ ದುಬೈನಲ್ಲಿ ನಡೆಯಲಿದೆ, ಇಲ್ಲವಾದಲ್ಲಿ ಲಾಹೋರ್‌ನಲ್ಲಿ ನಡೆಯಲಿದೆ.

ಚಾಂಪಿಯನ್ಸ್‌ ಟ್ರೋಫಿ ಗುಂಪುಗಳು

ಮೊದಲನೇ ಗುಂಪು: ಬಾಂಗ್ಲಾದೇಶ, ಭಾರತ, ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ
ಎರಡನೇ ಗುಂಪು: ಅಫಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ

19 ಫೆಬ್ರವರಿ – ಪಾಕಿಸ್ತಾನ vs ನ್ಯೂಜಿಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ

20 ಫೆಬ್ರವರಿ – ಬಾಂಗ್ಲಾದೇಶ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

21 ಫೆಬ್ರವರಿ – ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ನ್ಯಾಷನಲ್ ಸ್ಟೇಡಿಯಂ, ಕರಾಚಿ

22 ಫೆಬ್ರವರಿ – ಆಸ್ಟ್ರೇಲಿಯಾ vs ಇಂಗ್ಲೆಂಡ್, ಗಡಾಫಿ ಸ್ಟೇಡಿಯಂ, ಲಾಹೋರ್

23 ಫೆಬ್ರವರಿ – ಪಾಕಿಸ್ತಾನ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

24 ಫೆಬ್ರವರಿ – ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ

25 ಫೆಬ್ರವರಿ – ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ

26 ಫೆಬ್ರವರಿ – ಅಫ್ಘಾನಿಸ್ತಾನ vs ಇಂಗ್ಲೆಂಡ್, ಗಡಾಫಿ ಸ್ಟೇಡಿಯಂ, ಲಾಹೋರ್

27 ಫೆಬ್ರವರಿ – ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ

28 ಫೆಬ್ರವರಿ – ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಗಡಾಫಿ ಕ್ರೀಡಾಂಗಣ, ಲಾಹೋರ್

1 ಮಾರ್ಚ್ – ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ

2 ಮಾರ್ಚ್ – ನ್ಯೂಜಿಲೆಂಡ್ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

4 ಮಾರ್ಚ್ – ಸೆಮಿಫೈನಲ್ 1, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ (( ಸೆಮಿಫೈನಲ್ 1-ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ನಡೆಯಲಿದೆ)

5 ಮಾರ್ಚ್ – ಸೆಮಿಫೈನಲ್ 2, ಗಡಾಫಿ ಸ್ಟೇಡಿಯಂ, ಲಾಹೋರ್ (ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ನಡೆಯಲಿದೆ)

9 ಮಾರ್ಚ್ – ಫೈನಲ್‌ – ಗಡಾಫಿ ಕ್ರೀಡಾಂಗಣ, ಲಾಹೋರ್(ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ನಡೆಯಲಿದೆ)

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತದ ಪಂದ್ಯಗಳ ವಿವರ

20 ಫೆಬ್ರವರಿ – ಬಾಂಗ್ಲಾದೇಶ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

23 ಫೆಬ್ರವರಿ – ಪಾಕಿಸ್ತಾನ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

2 ಮಾರ್ಚ್ – ನ್ಯೂಜಿಲೆಂಡ್ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

ಈ ಸುದ್ದಿಯನ್ನು ಓದಿ: England Squad: ಐಸಿಸಿ ಚಾಂಪಿಯನ್ಸ್‌ ಟ್ರೋಫಿ, ಭಾರತದ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ!