Tuesday, 7th January 2025

INDW vs IREW: ಐರ್ಲೆಂಡ್‌ ವಿರುದ್ಧದ ಒಡಿಐ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ!

INDW vs IREW: Harmanpreet Kaur rested as India announce squad for Ireland ODIs

ನವದೆಹಲಿ: ಐರ್ಲೆಂಡ್‌ ವಿರುದ್ದದ ಮೂರು ಪಂದ್ಯಗಳ ಮಹಿಳಾ ಏಕದಿನ ಸರಣಿಗೆ (INDW vs IREW) 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಫಾಸ್ಟ್‌ ಬೌಲರ್‌ ರೇಣುಕಾ ಸಿಂಗ್‌ ಠಾಕೂರ್‌ ಅವರು ಈ ಸರಣಿಗೆ ವಿಶ್ರಾಂತಿಯನ್ನು ಪಡದುಕೊಂಡಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ಅವರ ಅನುಪಸ್ಥಿತಿಯಲ್ಲಿ ಭಾರತ ಮಹಿಳಾ ತಂಡವನ್ನು ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ ಮುನ್ನಡೆಸಲಿದ್ದಾರೆ. ಇವರಿಗೆ ಉಪ ನಾಯಕಿಯಾಗಿ ದೀಪ್ತಿ ಶರ್ಮಾ ಅವರು ಕಾಣಿಸಿಕೊಳ್ಳಲಿದ್ದಾರೆ. ಜನವರಿ 10 ರಂದು ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಮೂರೂ ಪಂದ್ಯಗಳನ್ನು ರಾಜ್‌ಕೋಟ್‌ನ ನಿರಂಜನ್‌ ಶಾ ಸ್ಟೇಡಿಯಂನಲ್ಲಿ ನಡೆಯಲಿವೆ.

ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಪದಾರ್ಪಣೆ ಸರಣಿಯಲ್ಲಿ ಗಮನ ಸೆಳೆದಿದ್ದ ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಅವರು ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿಗೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಂಡೀಸ್‌ ಎದುರು 24ರ ವಯಸ್ಸಿನ ಪ್ರತೀಕಾ ರಾವಲ್‌ ಅವರು 44.66ರ ಸರಾಸರಿಯಲ್ಲಿ 134 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ ತೇಜಲ್‌ ಹಸಬ್ನೀಸ್‌ ಅವರು ಕೂಡ ಈ ಸರಣಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

INDW vs WIW: ರೇಣುಕಾ ಸಿಂಗ್‌ ಮಾರಕ ದಾಳಿಗೆ ವಿಂಡೀಸ್‌ ತತ್ತರ, ತವರಿನಲ್ಲಿ ಭಾರತಕ್ಕೆ ದಾಖಲೆಯ ಜಯ!

ಆಲ್‌ರೌಂಡರ್‌ ರಾಘ್ವೀ ಬಿಸ್ಟ್‌ ಅವರು ಕೂಡ ಐರ್ಲೆಂಡ್‌ ಏಕದಿನ ಸರಣಿಯಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ಭಾರತದ ಪರ ಕೇವಲ ಎರಡು ಟಿ20ಐ ಪಂದ್ಯಗಳನ್ನು ಮಾತ್ರ ಅವರು ಆಡಿದ್ದಾರೆ. ಭಾರತ ತಂಡಕ್ಕೆ ಇದೇ ಮೊಟ್ಟ ಮೊದಲ ಬಾರಿ ಆಯ್ಕೆಯಾಗಿರುವ ಸಯಾಲಿ ಸಾತ್ಘಾರೆ ಅವರು ಕೂಡ ಏಕದಿನ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ವೆಸ್ಟ್‌ ವಿರುದ್ಧ ಮಹಿಳಾ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಬಳಿಕ ಭಾರತ ತಂಡ ಇದೀಗ ಐರ್ಲೆಂಡ್‌ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಬಳಿಕ ಭಾರತ ಮಹಿಳಾ ತಂಡಕ್ಕೆ ಕೊನೆಯ ತವರು ಸರಣಿಯಾಗಿದೆ. ಇದಾದ ಬಳಿಕ ಜೂನ್‌ ಅಂತ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದೆ.

ಐರ್ಲೆಂಡ್‌ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗೆ ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನಾ (ನಾಯಕಿ), ದೀಪ್ತಿ ಶರ್ಮಾ (ಉಪ ನಾಯಕಿ), ಪ್ರತೀಕಾ ರಾವಲ್‌, ಹರ್ಲೀನ್‌ ಡಿಯೋಲ್‌, ಜೆಮಿಮಾ ರೊಡ್ರಿಗಸ್‌, ಉಮಾ ಚೆಟ್ರಿ (ವಿ.ಕೆ), ರಿಚಾ ಘೋಷ್‌ (ವಿ.ಕೀ), ತೇಜಲ್‌ ಹಸಾಬ್ನೀಸ್‌, ರಾಘ್ವಿ ಬಿಸ್ಟ್‌, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕಾನ್ವೇರ್‌, ಟಿಟಾಸ್‌ ಸಧು, ಸೈಮಾ ಠಾಕೂರ್‌, ಸಯಾಲಿ ಸಾತ್ಘಾರೆ.

Leave a Reply

Your email address will not be published. Required fields are marked *