ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Playoffs: ಪ್ಲೇ-ಆಫ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಗಾಯದ ಭೀತಿ; ಸ್ಟಾರ್‌ ಆಟಗಾರನಿಗೆ ಗಾಯ

Injury scare for RCB: ಪ್ಲೇ ಆಫ್‌ ಪಂದ್ಯದ ವೇಳೆ ಚೇತರಿಕೆ ಕಾಣುವ ನಿಟ್ಟಿನಲ್ಲಿ ಡೇವಿಡ್‌ಗೆ ಲಕ್ನೋ ವಿರುದ್ಧದ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕವಾಗಿದೆ. ಡೇವಿಡ್‌ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಹಲವು ಪಂದ್ಯಗಳಲ್ಲಿ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿದ ವೇಳೆ ಏಕಾಂಗಿ ಬ್ಯಾಟಿಂಗ್‌ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಪ್ಲೇ-ಆಫ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಗಾಯದ ಭೀತಿ

Profile Abhilash BC May 24, 2025 10:55 AM

ಬೆಂಗಳೂರು: ಪ್ಲೇ-ಆಫ್‌(IPL 2025 Playoffs) ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಗಾಯದ ಭೀತಿ(Injury scare for RCB) ಎದುರಾಗಿದೆ. ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜೋಶ್ ಹ್ಯಾಜಲ್‌ವುಡ್‌ ಇನ್ನೂ ತಂಡಕ್ಕೆ ಆಗಮಿಸಿಲ್ಲ. ಇದರ ಬೆನ್ನಲ್ಲೇ ತಂಡದ ಬಿಗ್‌ ಹಿಟ್ಟರ್‌ ಟಿಮ್‌ ಡೇವಿಡ್‌(Tim David) ಕೂಡ ಗಾಯಗೊಂಡಿದ್ದು ಪ್ಲೇ ಆಫ್‌ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಉಭಯ ಆಟಗಾರರು ಮಹತ್ವದ ಪಂದ್ಯಕ್ಕೆ ಅಲಭ್ಯರಾದರೆ ಆರ್‌ಸಿಬಿಗೆ ಭಾರೀ ಹೊಡೆತ ಬೀಳಲಿದೆ.

ಶುಕ್ರವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಡಿಟ್‌ ಡೇವಿಡ್‌ ಪಂದ್ಯದ ಕೊನೆಯ ಓವರ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದಿದ್ದರು. ಆ ಬಳಿಕ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಅವರು ರನ್​ ಓಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ದೊಡ್ಡ ಹೊಡೆತಕ್ಕೆ ಯತ್ನಿಸಿ 5 ಎಸೆತಗಳಲ್ಲಿ ಕೇವಲ 1 ರನ್​ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಪ್ಲೇ ಆಫ್‌ ಪಂದ್ಯದ ವೇಳೆ ಚೇತರಿಕೆ ಕಾಣುವ ನಿಟ್ಟಿನಲ್ಲಿ ಡೇವಿಡ್‌ಗೆ ಲಕ್ನೋ ವಿರುದ್ಧದ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕವಾಗಿದೆ. ಡೇವಿಡ್‌ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಹಲವು ಪಂದ್ಯಗಳಲ್ಲಿ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿದ ವೇಳೆ ಏಕಾಂಗಿ ಬ್ಯಾಟಿಂಗ್‌ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರ ಸೇವೆ ಕಳೆದುಕೊಂಡರೆ ತಂಡಕ್ಕೆ ಭಾರೀ ನಷ್ಟ ಸಂಭವಿಸಲಿದೆ.



ಇದನ್ನೂ ಓದಿ IPL 2025: ಒಂದು ಪಂದ್ಯ ಬಾಕಿ; ಆರ್‌ಸಿಬಿಗೆ ಟಾಪ್‌-2ನಲ್ಲಿ ಸ್ಥಾನ ಪಡೆಯುವ ಅವಕಾಶ ಇದೆಯೇ?

ಇನ್ನೊಂದೆಡೆ 34 ವರ್ಷದ ಹ್ಯಾಜಲ್‌ವುಡ್ ಫಿಟ್‌ನೆಸ್‌ಗಾಗಿ ಬ್ರಿಸ್ಬೇನ್‌ನಲ್ಲಿ ಪುನರ್ವಸತಿಗೆ ಒಳಗಾಗಿದ್ದಾರೆ. ಅವರಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಇದುವರೆಗೂ ಆಡುವ ಗ್ರೀನ್‌ ಸಿಗ್ನಲ್‌ ನೀಡಿಲ್ಲ. ಹಾಲಿ ಆವೃತ್ತಿಯಲ್ಲಿ ಹ್ಯಾಜಲ್‌ವುಡ್‌ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ 18 ವಿಕೆಟ್‌ ಕಿತ್ತು, ಅತಿ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.