ಬೆಂಗಳೂರು: ವಿಶ್ವದ ಅತ್ಯಂತ ಫ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನವೆಂಬರ್ 24 ಹಾಗೂ 25 ರಂದು ನಡೆದಿದ್ದ ಮೆಗಾ ಹರಾಜಿನಲ್ಲಿ ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಿದೆ. ಇದೀಗ ಮೆಗಾ ಹರಾಜು ಮುಗಿದ ಕೇವಲ ಒಂದು ದಿನದ ಬೆನ್ನಲ್ಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಒಂದು ಕಡೆ ಮೆಗಾ ಹರಾಜಿನಲ್ಲಿ ವಿಲ್ ಜ್ಯಾಕ್ಸ್, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಹಿಂದೇಟು ಹಾಕಿದ್ದ ಬೆಂಗಳೂರು ಫ್ರಾಚೈಸಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳು ಕಿಡಿಕಾರಿದ್ದರು. ಆದರೆ, ಇದೀಗ ಮತ್ತೊಂದು ಕಾರಣಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎಕ್ಸ್ ಖಾತೆಯಲ್ಲಿ ಪ್ರತ್ಯೇಕವಾಗಿ ಕನ್ನಡ ಪುಟವನ್ನು ತೆರೆದಿತ್ತು. ಇದರ ಬೆನ್ನಲ್ಲೆ ಬೆಂಗಳೂರು ಫ್ರಾಂಚೈಸಿಯು ಎಕ್ಸ್ ಖಾತೆಯಲ್ಲಿ ಹಿಂದೆ ಭಾಷೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುಟವನ್ನು ತೆರೆದಿತ್ತು. ಇದನ್ನು ಗಮನಿಸಿದ ಕನ್ನಡಿಗರು ಹಿಂದೆ ಖಾತೆಯನ್ನು ಅಳಿಸಿ ಎಂದು ಕಿಡಿಕಾರಿದ್ದಾರೆ.
IPL 2025: ಆರ್ಸಿಬಿಗೆ ಸೇರಿದ ಬೆನ್ನಲ್ಲೆ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಲಿಯಾಮ್ ಲಿವಿಂಗ್ಸ್ಟೋನ್!
“ಹಿಂದಿ ಬಳಸೋಕೆ ಒಂದು ನೆಪ ಬೇಕಿತ್ತು ಅದಕ್ಕೆ ಕನ್ನಡಕ್ಕಾಗಿ ಒಂದು ಖಾತೆ ತೆರೆದು ಜೊತೆಗೆ ಹಿಂದಿ ಅಂತ. ವಾವ್! ಈ ಶೋಕಿ ಎಲ್ಲ ಬೇಡ. ಮೊದಲು ಈ ಖಾತೆ ಅಳಿಸಿ. ಮುಖ್ಯ ಖಾತೆಯಲ್ಲಿಯೇ ಕನ್ನಡ ಬಳಸಿ,” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಬೆಂಗಳೂರು ಫ್ರಾಂಚೈಸಿ ವಿರುದ್ಧ ಕಿಡಿ ಕಾರಿದ್ದಾರೆ.
ಹಿಂದಿ ಬಳಸೋಕೆ ಒಂದು ನೆಪ ಬೇಕಿತ್ತು ಅದಕ್ಕೆ ಕನ್ನಡಕ್ಕಾಗಿ ಒಂದು ಖಾತೆ ತೆರೆದು ಜೊತೆಗೆ ಹಿಂದಿ ಅಂತ. ವಾ. ಈ ಶೋಕಿ ಎಲ್ಲ ಬೇಡ. ಮೊದಲು ಈ ಖಾತೆ ಅಳಿಸಿ. ಮುಖ್ಯ ಖಾತೆಯಲ್ಲಿಯೇ ಕನ್ನಡ ಬಳಸಿ
— ಆದರ್ಶ ಹೆಚ್ ಎಂ | Adarsh H M (@iAdarshAdi) November 26, 2024
“ಇವರದು ಅತಿಯಾಯ್ತು. ಬೆಂಗಳೂರಿನ ತಂಡಕ್ಕೇಕೆ ಈ ಪಾಟಿ ಹಿಂದಿ ಪ್ರೀತಿ,” ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.
ಇವರದು ಅತಿಯಾಯ್ತು. ಬೆಂಗಳೂರಿನ ತಂಡಕ್ಕೇಕೆ ಈ ಪಾಟಿ ಹಿಂದಿ ಪ್ರೀತಿ.@Ellarakannada @Metikurke @ajavgal @rajanna_rupesh
— ಚಂದನ್ ಕುಮಾರ ಡಿ.ಎನ್ (@ChandanKumarDN) November 26, 2024
“ಯಾಕ್ ಬಕೆಟ್ ಹಿಡಿತೀರಾ ಹಿಂದಿವಾಲಗಳಿಗೆ?” ಎಂದು ಮತ್ತೊಬ್ಬರು ಟೀಕೆ ಮಾಡಿದ್ದಾರೆ.
ಯಾಕ್ ಬಕೆಟ್ ಹಿಡಿತೀರಾ ಹಿಂದಿವಾಲಗಳಿಗೆ?
— ನಂದನ್_ (@nks155) November 26, 2024
“ಎಷ್ಟು ದುರಂಹಕಾರ ನಿಮಗೆ. ಕನ್ನಡಿಗರು ಎಷ್ಟೇ ಹೇಳಿದರೂ ನಿಮಗೆ ಹೇಗೆ ಬೇಕೋ ಹಾಗೆ ಮಾಡ್ತಾ ಇದ್ದೀರಾ? ಮುಗಿತು ನಿಮ್ಮ ಕಥೆ ಬಿಡಿ. ಜನಗಳನ್ನು ಮಂಕು ಮಾಡಿ ದುಡ್ಡು ಮಾಡಿದ್ದಾಯಿತು. ಈಗ ಅಭಿಮಾನಿಗಳು ಯಾಕೇ ಬೇಕು ಆಲ್ವಾ ಅದರಲ್ಲೂ ಕನ್ನಡಿಗರು ಯಾಕೇ ಬೇಕು?,” ಎಂದು ಮತ್ತೊಬ್ಬ ಅಭಿಮಾನಿ ಆರ್ಸಿಬಿ ವಿರುದ್ದ ಕಿಡಿಕಾರಿದ್ದಾರೆ.
#stopHindiImposition
— Keerthi Kumar S (@keerthik_007) November 26, 2024
ಬೆಂಗಳೂರು ತೋಟದಪ್ಪನ ಛತ್ರ ಅಲ್ಲ. ಬೆಂಗಳೂರು ಅಂದ್ರೇನೇ ಕನ್ನಡ. ಹಿಂದಿ ಯಾಕ್ರೋ %$&*#%!@ ಮಕ್ಳ
“ನಮ್ಮ ಆರ್ಸಿಬಿ ಅದು…. ಕನ್ನಡದಲ್ಲಿ ಮಾತ್ರ ವ್ಯವಹಾರ ಮಾಡಬೇಕು… ಹಿಂದಿಯನ್ನು ಬಲವಂತವಾಗಿ ಕನ್ನಡಿಗರ ಮೇಲೆ ಏರಲು ಬಂದರೆ ಸುಮ್ಮನಿರುವ ನಾವಲ್ಲ,” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಷ್ಟು ಕೊಬ್ಬು ಕನ್ರೋ ನಿಮಗೆ. ಕನ್ನಡಿಗರು ಎಷ್ಟೇ ಹೇಳಿದರೂ ನಿಮಗೆ ಹೇಗೆ ಬೇಕೋ ಹಾಗೆ ಮಾಡ್ತಾ ಇದ್ದೀರ. ಬೇವರ್ಸಿಗಳ. ಮುಗಿತು ನಿಮ್ಮ ಕಥೆ ಬಿಡಿ. ಜನಗಳನ್ನ ಮಂಕು ಮಾಡಿ ದುಡ್ಡು ಮಾಡಿದ್ದಾಯಿತು. ಈಗ ಅಭಿಮಾನಿಗಳು ಯಾಕೇ ಬೇಕು ಆಲ್ವಾ ಅದರಲ್ಲೂ ಕನ್ನಡಿಗರು ಯಾಕೇ ಬೇಕು.
— ಪ್ರದೀಪ್ ಸಾಗರ್ ಮೈಸೂರು ಕನ್ನಡಿಗ 💛❤️ (@IamDeepuMysore) November 26, 2024
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ ರೂ.), ಫಿಲ್ ಸಾಲ್ಟ್ (ರೂ. 11.50 ಕೋಟಿ), ಜಿತೇಶ್ ಶರ್ಮಾ (11 ಕೋಟಿ ರೂ.), ಜಾಶ್ ಹೇಝಲ್ವುಡ್ (ರೂ. 12.50 ಕೋಟಿ), ರಸಿಖ್ ಸಲಾಮ್ ದರ್ (ರೂ. 6 ಕೋಟಿ), ಸುಯಾಶ್ ಶರ್ಮಾ (ರೂ. 2.60 ಕೋಟಿ), ಕೃಣಾಲ್ ಪಾಂಡ್ಯ (ರೂ. 5.75) ಕೋಟಿ), ಭುವನೇಶ್ವರ್ ಕುಮಾರ್ (ರೂ. 10.75 ಕೋಟಿ), ಸ್ವಪ್ನಿಲ್ ಸಿಂಗ್ (ರೂ. 50 ಲಕ್ಷ), ಟಿಮ್ ಡೇವಿಡ್ (ರೂ. 3 ಕೋಟಿ), ರೊಮಾರಿಯೊ ಶೆಫರ್ಡ್ (ರೂ. 1.50 ಕೋಟಿ), ನುವಾನ್ ತುಷಾರ (ರೂ. 1.60 ಕೋಟಿ), ಮನೋಜ್ ಭಾಂಡಗೆ (30 ಲಕ್ಷ ರೂ.), ಜಾಕೋಬ್ ಬೆಥೆಲ್ (2.60 ಕೋಟಿ ರೂ.), ದೇವದತ್ ಪಡಿಕ್ಕಲ್ (ರೂ. 2) ಕೋಟಿ), ಸ್ವಸ್ತಿಕ್ ಚಿಕಾರಾ (30 ಲಕ್ಷ ರೂ.), ಲುಂಗಿ ಎನ್ಗಿಡಿ (1 ಕೋಟಿ ರೂ.), ಅಭಿನಂದನ್ ಸಿಂಗ್ (ರೂ. 30 ಲಕ್ಷ), ಮೋಹಿತ್ ರಥಿ (ರೂ. 30 ಲಕ್ಷ).