ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್, 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 27 ಕೋಟಿ ರೂ. ಗಳ ದಾಖಲೆ ಬೆಲೆಗೆ ಪಂತ್ ಲಖನೌ ತಂಡದ ಭಾಗವಾದರು. ಆ ಮೂಲಕ ಐಪಿಎಲ್ ಟೂರ್ನಿಯ ಇತಿಗಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.
ಅಂದ ಹಾಗೆ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಖರೀದಿಸದೆ ಇರಲು ಕಾರಣವೇನೆಂದು ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ತಿಂಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ನಾಯಕ ರಿಷಭ್ ಪಂತ್ ಅವರನ್ನು ಹರಾಜಿಗೆ ಬಿಡುಗಡೆ ಮಾಡಿತ್ತು. ಆ ಮೂಲಕ ಕ್ರಿಕೆಟ್ ವಲಯದಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಏಕೆಂದರೆ, 2016 ರಲ್ಲಿ ಐಪಿಎಲ್ ಪದಾರ್ಪಣೆಯಿಂದ ಇಲ್ಲಿಯವರೆಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮಾತ್ರ ಆಡಿದ್ದಾರೆ. ನಂತರ 2021ರಿಂದ ಇಲ್ಲಿಯವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದಾರೆ.
IPL Auction 2025: ʻಪಂತ್ ಅತ್ಯಂತ ದುಬಾರಿ ಆಟಗಾರʼ-ಮೆಗಾ ಹರಾಜಿನ ಬಳಿಕ 10 ತಂಡಗಳ ಆಟಗಾರರ ವಿವರ!
ರಿಷಭ್ ಪಂತ್ ಅವರನ್ನು ಮೆಗಾ ಹರಾಜಿಗೆ ಬಿಡುಗಡೆ ಮಾಡಿದ ಬಳಿಕ ಡೆಲ್ಲಿ ಫ್ರಾಂಚೈಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಅಂದ ಹಾಗೆ ಮೆಗಾ ಹರಾಜಿನ ಬಳಿಕ ಡೆಲ್ಲಿ ಫ್ರಾಂಚೈಸಿ ಮಾಲೀಕ ಪಾರ್ತ್ ಜಿಂದಾಲ್ ಅವರು, ರಿಷಭ್ ಪಂತ್ ಅವರನ್ನು ಕೈ ಬಿಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ ಹಾಗೂ ಎಡಗೈ ಆಟಗಾರನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ರಿಷಭ್ ಪಂತ್‌ರನ್ನು ಕೈ ಬಿಡಲು ಕಾರಣ ತಿಳಿಸಿದ ಪಾರ್ಥ್ ಜಿಂದಾಲ್
“ಸೌರವ್ ಗಂಗೂಲಿ ಬಳಿಕ ನನ್ನ ನೆಚ್ಚಿನ ಕ್ರಿಕೆಟಿಗ ರಿಷಭ್ ಪಂತ್. ನನ್ನ ನೆಚ್ಚಿನ ಕ್ರಿಕೆಟಿಗನನ್ನು ಕಳೆದುಕೊಂಡಿದ್ದೇನೆಂಬ ಬಗ್ಗೆ ನಾನು ನಿಜವಾಗಿಯೂ ಭಾವನಾತ್ಮಕ ಮತ್ತು ದುಃಖಿತನಾಗಿದ್ದೇನೆ. ಅವರು ನನ್ನ ನೆಚ್ಚಿನ ಕ್ರಿಕೆಟಿಗನಾಗಿ ಮುಂದುವರಿಯಲಿದ್ದಾರೆ. ಆದರೆ, ಹರಾಜಿನ ಬಗ್ಗೆ ನನಗೆ ನಿಜವಾಗಿಯೂ ಸಂತೋಷವಿದೆ,” ಎಂದು ಪಾರ್ತ್ ಜಿಂದಾಲ್ ತಿಳಿಸಿದ್ದಾರೆ.
IPL 2025: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಟಾಪ್ 5 ಆಟಗಾರರು!
“ನಾವು ರಿಟೇನ್ ಮಾಡಿಕೊಳ್ಳದ ಕಾರಣ ರಿಷಭ್ ಪಂತ್ ಕೇವಲ ಕೆಲವೇ ನಿಮಿಷಗಳಲ್ಲಿ ನಮ್ಮ ಕೈ ತಪ್ಪಿದರು. ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಖರೀದಿಸಲು ಪ್ರಯತ್ನಿಸಿದರೆ, ನಮ್ಮ ಬಗ್ಗೆ ಎಲ್ಲರೂ ವ್ಯಂಗ್ಯವಾಡುತ್ತಿದ್ದರು. ಒಂದು ವೇಳೆ ಆರ್‌ಟಿಎಂ ನಿಯಮವನ್ನು ಬಳಿಸಿಕೊಳ್ಳುವಂತಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅವರನ್ನೇ ಉಳಿಸಿಕೊಳ್ಳುತ್ತಿತ್ತು. ಪಂತ್ ಅವರು 18 ಕೋಟಿ ರೂ. ಗಳಿಂದ 27 ಕೋಟಿ ರೂ ಗಳಿಗೆ ಬದಲಾಗಿದ್ದಾರೆ,” ಎಂದು ಪಾರ್ಥ್ ಜಿಂದಾಲ್ ರೆವ್‌ಸ್ಪೋರ್ಟ್ಸ್‌ಗೆ ಹೇಳಿದ್ದಾರೆ.
ಫ್ರಾಂಚೈಸಿಯ ನಿರೀಕ್ಷೆಯನ್ನು ತಲುಪಿರಲಿಲ್ಲ
ಫ್ರಾಂಚೈಸಿ ಇಟ್ಟಿದ್ದ ನಿರೀಕ್ಷೆಯನ್ನು ರಿಷಭ್ ಪಂತ್ ತಲುಪಿರಲಿಲ್ಲ ಹಾಗೂ ಭಾರತ ತಂಡದ ವಿಕೆಟ್ ಕೀಪರ್‌ನಿಂದ ಯಾವುದೇ ಅಭಿಪ್ರಾಯ ತೆಗೆದುಕೊಂಡಿರಲಿಲ್ಲ. ಲಖನೌ ಸೂಪರ್ ಜಯಂಟ್ಸ್ ತಂಡ ಅತಿ ಹೆಚ್ಚು ಮೊತ್ತವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.
“ಇಲ್ಲಿ ಮಾಲೀಕತ್ವದ ವಿಚಾರ ಇಲ್ಲ. ನಾವು ಮಾಲೀಕತ್ವದ ಗುಂಪಿನಂತೆ ಬಹಳಾ ಹೊಂದಿಕೊಂಡಿದ್ದೇವೆ. ನಾವು ಎಲ್ಲರ ಅಭಿಪ್ರಾಯವನ್ನು ಪಡೆದು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ರಿಷಭ್ ಪಂತ್ ಬಗ್ಗೆ ನಾವು ಚರ್ಚೆಯನ್ನು ಕಳೆದುಕೊಂಡಿದ್ದೆವು. ಪಂತ್ ಕಳೆದ ಎರಡು ಸೀಸನ್‌ನಲ್ಲಿ ಚೆನ್ನಾಗಿ ಆಡಿರಲಿಲ್ಲ. ಈ ಕಾರಣದಿಂದಲೇ ನಾವು ಅವರಿಂದ ಯಾವುದೇ ಅಭಿಪ್ರಾಯವನ್ನು ಪಡೆದಿರಲಿಲ್ಲ. ಅವರೇ ಭಾವನಾತ್ನಕ ಕರೆಯನ್ನು ತೆಗೆದುಕೊಂಡಿದ್ದರು. ಅವರು ನಮ್ಮ ಫ್ರಾಂಚೈಸಿಯಲ್ಲಿಯೇ ಬೆಳೆದವರು,” ಎಂದು ಪಾರ್ಥ್ ಜಿಂದಾಲ್ ವಿವರಿಸಿದ್ದಾರೆ.