Monday, 25th November 2024

IPL 2025 Auction: ಆರ್‌ಸಿಬಿ ಖರೀದಿಸಿರುವ ರಾಸಿಖ್‌ ಸಲಾಮ್‌ ದರ್‌ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ!

Who Is Rasikh Salam Dar? Jammu And Kashmir Pacer Picked Up By RCB For Rs 6 Crore In Auction

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Auction) ಟೂರ್ನಿಯ ಮೆಗಾ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಜಮ್ಮು ಮತ್ತು ಕಾಶ್ಮೀರ ವೇಗಿ ರಾಸಿಖ್‌ ಸಲಾಮ್‌ ದರ್‌ ಅವರನ್ನು 6 ಕೋಟಿ ರೂ. ಗಳಿಗೆ ಖರೀದಿಸಿದೆ. ಮೆಗಾ ಹರಾಜಿನಲ್ಲಿ 24ರ ಪ್ರಾಯದ ಯುವ ವೇಗಿಯನ್ನು ಖರೀದಿಸಲು ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಟಿಎಂ ನಿಯಮದಡಿ ಖರೀದಿಸಲು ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಬೆಂಗಳೂರು ಫ್ರಾಂಚೈಸಿ 6 ಕೋಟಿ ರೂ. ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.

2019ರ ಐಪಿಎಲ್‌ ಹರಾಜಿನಲ್ಲಿ ಮೊಟ್ಟ ಮೊದಲ ಬಾರಿ ರಾಸಿಖ್‌ ಸಲಮ್‌ ದರ್‌ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿತ್ತು. ಆ ಮೂಲಕ ಐಪಿಎಲ್‌ಗೆ ಆಯ್ಕೆಯಾಗಿದ್ದ ಜಮ್ಮು ಕಾಶ್ಮೀರದ ಮೂರನೇ ಆಟಗಾರ ಎನಿಸಿಕೊಂಡಿದ್ದರು. ಮುಂಬೈನ ವಾಂಖೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ರಾಸಿಖ್‌ ಸಲಾಮ್‌ ದರ್‌ ಐಪಿಎಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಮುಂಬೈ ಇಂಡಿಯನ್ಸ್‌ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ರಾಸಿಖ್‌ ದರ್‌ ಭಾಜನರಾಗಿದ್ದರು. ಮುಂಬೈ ಇಂಡಿಯನ್ಸ್‌ ಬಳಿಕ ರಾಸಿಖ್‌ ದರ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು ನಂತರ 2024ರ ಟೂರ್ನಿಯ ನಿಮಿತ್ತ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿದ್ದರು. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದ 8 ಪಂದ್ಯಗಳಿಂದ ರಾಸಿಖ್‌ ದರ್‌ ಅವರು 9 ವಿಕೆಟ್‌ಗಳನ್ನು ಕಬಳಿಸಿದ್ದರು.

IPL 2025 Mega Auction: ಆರ್‌ಸಿಬಿಗೆ ಎಂಟ್ರಿ ಕೊಟ್ಟ ಸ್ಪೋಟಕ ಓಪನರ್‌ ಫಿಲ್‌ ಸಾಲ್ಟ್‌!

ರಾಸಿಖ್‌ ಸಲಾಮ್‌ ದರ್‌ ಯಾರು?

ರಾಸಿಖ್‌ ಸಲಾಮ್‌ ಜಮ್ಮು ಮತ್ತು ಕಾಶ್ಮೀರದ ಬಲಗೈ ಫಾಸ್ಟ್‌ ಬೌಲರ್‌. ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನದ ಕಾರಣ ಅವರು ಅವರನ್ನು 2019ರಲ್ಲಿ ಮುಂಬೈ ಇಂಡಿಯನ್ಸ್‌ ಖರೀದಿಸಿತ್ತು. ಅವರು ಈ ಹಿಂದೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಅದ್ಭುತ ಪ್ರದರ್ಶನ ತೋರಿದ್ದರು.

ತಮ್ಮ ವೃತ್ತಿ ಆರಂಭಿಕ ವರ್ಷಗಳಲ್ಲಿಯೇ ರಾಸಿಖ್‌ ಸಲಾಮ್‌ ದರ್‌ ವಯಸ್ಸಿನ ವ್ಯತ್ಯಾಸದ ಪ್ರಮಾದಕ್ಕೆ ಸಿಲುಕಿದ್ದರು ಹಾಗೂ 2022ರಲ್ಲಿ ಮತ್ತೆ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸೇರುವ ಮೂಲಕ ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಿದ್ದರು. 2018-19ರ ಆವೃತ್ತಿಯ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ರಾಸಿಖ್‌ ಸಲಾಮ್‌ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ ಇದೇ ಸಾಲಿನಲ್ಲಿ ಅವರು ಅಂದರೆ 2018ರ ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಐಪಿಎಲ್‌ ಮೆಗಾ ಹರಾಜಿನ ಮೊದಲನೇ ದಿನದ ಬಳಿಕ ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಯಶ್‌ ದಯಾಳ್‌, ಫಿಲ್‌ ಸಾಲ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ಜಾಶ್‌ ಹೇಝಲ್‌ವುಡ್‌, ರಾಸಿಖ್‌ ಸಲಾಮ್‌, ಸುಯಾಶ್‌ ಶರ್ಮಾ