ನವದೆಹಲಿ: ಇತ್ತೀಚೆಗೆ ಮುಗಿದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಭಾಗವಹಿಸದೆ ಇರಲು ಬಲವಾದ ಕಾರಣವೇನೆಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್ ತಂಡದ ಕಡೆಗೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆಂದು ಅವರು ತಿಳಿಸಿದ್ದಾರೆ
ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೆ 52 ಇಂಗ್ಲೆಂಡ್ ಆಟಗಾರರು ತಮ್ಮ-ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಆದರೆ, ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ನಲ್ಲಿ ಬಹುಬೇಡಿಕೆಯ ಆಟಗಾರ ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ. ಇದರೊಂದಿಗೆ 2026ರ ವರೆಗೂ ಬೆನ್ ಸ್ಟೋಕ್ಸ್ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲವೆಂಬುದು ಖಚಿತವಾಗಿದೆ.
IPL 2025: ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಟಾಪ್ 5 ಆಟಗಾರರು!
2024ರ ಐಪಿಎಲ್ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಭಾಗವಹಿಸಿದ್ದರು. ಅದರಂತೆ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಆದರೆ, ಗಾಯ ಮತ್ತು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಸಲುವಾಗಿ ಬೆನ್ ಸ್ಟೋಕ್ಸ್ ಕಳೆದ ಟೂರ್ನಿಯಲ್ಲಿ ಸಿಎಸ್ಕೆ ತಂಡದ ಪರ ಆಡಿರಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಿಮಿತ್ತ ಬಿಬಿಸಿ ಸ್ಪೋರ್ಟ್ ಜೊತೆ ಮಾತನಾಡಿದ್ದ ಬೆನ್ ಸ್ಟೋಕ್ಸ್, “ಸಾಕಷ್ಟು ಕ್ರಿಕೆಟ್ನಿಂದ ನನ್ನ ಮೇಲೆ ಹೊರೆ ಬೀಳಲಿದೆ. ಐಪಿಎಲ್ ಏಕೆ ಆಡುತ್ತಿಲ್ಲವೆಂಬ ಕಾರಣವನ್ನು ಮುಚ್ಚಿಡುವ ಅಗತ್ಯವಿಲ್ಲ ಹಾಗೂ ನಾನು ನನ್ನ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದೇನೆ. ನನ್ನಿಂದ ಎಷ್ಟು ಕ್ರಿಕೆಟ್ ಆಡಲು ಸಾಧ್ಯವಾಗುತ್ತದೋ ಅಷ್ಟು ಆಡುತ್ತೇನೆ. ನನ್ನ ದೇಹವನ್ನು ನೋಡಿದ ಬಳಿಕ ನನಗೆ ಈ ಯೋಚನೆ ಬಂದಿದೆ,” ಎಂದು ತಿಳಿಸಿದ್ದಾರೆ.
IPL 2025: ಹರಾಜಿನಲ್ಲಿ ಸೋಲ್ಡ್, ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರಿವರು
ಮೆಗಾ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಏಕೆ ಇರಲಿಲ್ಲ?
ಬಿಸಿಸಿಐನ ಹೊಸ ನಿಯಮಗಳ ಅಡಿಯಲ್ಲಿ ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡು, ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸದ ಆಟಗಾರರು ಮುಂಬರುವ ಮಿನಿ ಹರಾಜಿನಲ್ಲಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮವು ಆಟಗಾರರ ಬದ್ಧತೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಹೊಸ ನಿಯಮದ ಪ್ರಕಾರ ಬೆನ್ ಸ್ಟೋಕ್ಸ್ ಅವರು ಮೆಗಾ ಹರಾಜಿನಲ್ಲಿ ಹೆಸರನ್ನು ನೋಂದಾಯಿಸಿಲ್ಲ ಹಾಗಾಗಿ, ಮುಂದಿನ ವರ್ಷ ಬರುವ ಮಿನಿ ಹತರಾಜಿನಲ್ಲಿಯೂ ಭಾಗವಹಿಸಲು ಕೂಡ ಅವಕಾಶವಿಲ್ಲ. ಆದರೆ, ಬೆನ್ ಸ್ಟೋಕ್ಸ್ ಅವರ ನಿರ್ಧಾರವು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಇಂಗ್ಲೆಂಡ್ ತಂಡಕ್ಕೆ ಹೆಚ್ಚು ಲಭ್ಯವಾಗುವುದಾಗಿದೆ.
ಇಂಗ್ಲೆಂಡ್ ಪರ ದೀರ್ಘಾವಧಿ ಆಡುವ ಇಂಗಿತ
“ತಾನು ಆಡುವ ಪಂದ್ಯಗಳಿಗೆ ಪ್ರಮುಖ ಆಧ್ಯತೆಗಳನ್ನು ನೀಡುತ್ತಿದ್ದೇನೆ. ನಿಸ್ಸಂಶವಾಗಿ ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಇರುತ್ತೇನೆ ಹಾಗೂ ತದ ನಂತರ ತನ್ನ ಮುಂದೆ ಏನಿದೆ ಎಂಬುದನ್ನು ನೋಡುತ್ತೇನೆ. ಅಂದ ಹಾಗೆ ಇಂಗ್ಲೆಂಡ್ ತಂಡದ ಪರ ಆದಷ್ಟು ದೀರ್ಘಾವಧಿ ಕ್ರಿಕೆಟ್ ಆಡಲು ಎದುರು ನೋಡುತ್ತಿದ್ದೇನೆ,” ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ತಿಳಿಸಿದ್ದಾರೆ.