Tuesday, 26th November 2024

IPL 2025: ಪೃಥ್ವಿ ಶಾ ಅನ್‌ಸೋಲ್ಡ್‌ ಆಗಲು ಕಾರಣ ತಿಳಿಸಿದ ಮೊಹಮ್ಮದ್‌ ಕೈಫ್‌!

IPL 2025: Mohammad Kaif Told Real Reason Why Prithvi Shaw Remained Unsold In Ipl Mega Auction

ನವದೆಹಲಿ: ಪೃಥ್ವಿ ಶಾ ಅವರನ್ನು ಭಾರತ ತಂಡದ ದೊಡ್ಡ ಭವಿಷ್ಯ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪ್ರತಿರೂಪ ಎಂದೆಲ್ಲ ಕ್ರಿಕೆಟ್ ತಜ್ಞರು ಪೃಥ್ವಿ ಶಾ ಬಗ್ಗೆ ಹೇಳುತ್ತಿದ್ದರು. ಇದು ಪೃಥ್ವಿ ಆಟದಲ್ಲೂ ಕಾಣುತ್ತಿತ್ತು. ಅವರು ಹೊಡೆತಗಳನ್ನು ಹೊಡೆಯುವ ರೀತಿ ನನಗೆ ಸಚಿನ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸುತ್ತಿತ್ತು. ಪೃಥ್ವಿ ಶಾ ಪ್ರತಿಭಾವಂತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಸ್ಟಾರ್‌ ಗಿರಿ ಬಂದ ತಕ್ಷಣ ಅದನ್ನು ನಿಭಾಯಿಸಲು ಅವರಿಂದ ಸಾಧ್ಯವಾಗಲಿಲ್ಲ. ಇದರ ಪರಿಣಾಮ ಇಂದು ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ (IPL 2025) ಮಾರಾಟವಾಗದೆ ಉಳಿದರು.

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪೃಥ್ವಿ ಶಾ ತನ್ನನ್ನು 75 ಲಕ್ಷ ರೂ ಮೂಲ ಬೆಲೆಗೆ ಪಟ್ಟಿ ಮಾಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಲಾಟ್‌ನಲ್ಲಿ ಕೆಲವು ತಂಡಗಳು ಖಂಡಿತವಾಗಿಯೂ ಪೃಥ್ವಿಯನ್ನು ಖರೀದಿಸಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಯಾವುದೇ ತಂಡವು ಪೃಥ್ವಿ ಶಾ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹರಾಜಿನ ಪ್ರಸಾರ ತಂಡದ ಸದಸ್ಯರಾಗಿದ್ದ ಮೊಹಮ್ಮದ್ ಕೈಫ್ ಕೂಡ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

IPL 2025: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಟಾಪ್‌ 5 ಆಟಗಾರರು!

ಜಿಯೋ ಸಿನಿಮಾದ ಪ್ರಸಾರ ತಂಡದಲ್ಲಿ ಪರಿಣತರಾಗಿ ಸೇರ್ಪಡೆಗೊಂಡಿದ್ದ ಮೊಹಮ್ಮದ್ ಕೈಫ್ ಒಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಡೆಲ್ಲಿ ಫ್ರಾಂಚೈಸಿಯಲ್ಲಿ ಮೊಹಮ್ಮದ್‌ ಕೈಫ್‌ ಕೋಚಿಂಗ್ ಸಿಬ್ಬಂದಿಯ ಸದಸ್ಯರಾಗಿದ್ದರು. ಇದೀಗ ಅನ್‌ಸೋಲ್ಡ್‌ ಆಗಿರುವ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಬಗ್ಗೆ ಕೈಫ್‌ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

“ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಸಾಕಷ್ಟು ಬೆಂಬಲ ನೀಡಿತ್ತು. ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಬಲ್ಲ ಸಾಮರ್ಥ್ಯ ಪೃಥ್ವಿ ಶಾಗೆ ಇದೆ ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ನಿರೀಕ್ಷೆ ಇತ್ತು. ಅದರಂತೆ ಅವರು ಇದನ್ನು ಸಾಬೀತುಪಡಿಸಿದ್ದರು. ಶಿವಂ ಮಾವಿಗೆ ಒಂದೇ ಓವರ್‌ನಲ್ಲಿ ಇವರು ಆರು ಬೌಂಡರಿಗಳನ್ನು ಸಿಡಿಸಿದ್ದರು.ಅವರಲ್ಲಿ ಸಾಕಷ್ಟು ಪ್ರತಿಭೆ ಹಾಗೂ ಸಾಮರ್ಥ್ಯವಿತ್ತು ಹಾಗೂ ಡೆಲ್ಲಿ ಫ್ರಾಂಚೈಸಿ ಕೂಡ ಅವರನ್ನು ಬೆಂಬಲಿತ್ತು. ಅವರು ರನ್‌ ಹೊಡೆದಾಗಲೆಲ್ಲಾ ನಾವು ಗೆದ್ದಿದ್ದೇವೆ. ಅದರಂತೆ ನಾವು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇವೆ,” ಎಂದು ಮೊಹಮ್ಮದ್‌ ಕೈಫ್‌ ತಿಳಿಸಿದ್ದಾರೆ.

IPL 2025: ಅನ್‌ಸೋಲ್ಡ್‌ ಆಟಗಾರರು ಕೂಡ ಐಪಿಎಲ್ ಆಡಬಹುದು! ಹೇಗೆ ಗೊತ್ತೆ?

“ಪೃಥ್ವಿ ಶಾ ವಿಫಲವಾಗಿರುವುದರಿಂದ ಅವರು ಆಡಬೇಕೇ ಅಥವಾ ಬೇಡವೇ ಎಂದು ಮಾತನಾಡಲು ನಾವು ರಾತ್ರಿ ಹೊತ್ತು ಮೀಟಿಂಗ್‌ ನಡೆಸುತ್ತಿದ್ದೆವು. ಅದರಂತೆ ಪೃಥ್ವಿ ಶಾ ಪ್ಲೇಯಿಂಗ್ XIನಲ್ಲಿ ಹೊರಗಿಡಬೇಕೆಂದು ನಿರ್ಧರಿಸಿದ್ದೆವು. ನಂತರ ಪಂದ್ಯದ ದಿನದಂದು ನಾವು ನಮ್ಮ ನಿರ್ಧಾರವನ್ನು ಬದಲಾಯಿಸಿದೆವು. ಪೃಥ್ವಿ ಶಾ ತಂಡದಲ್ಲಿ ಇರಬೇಕು ಹಾಗೂ ಅವರು ನಮಗೆ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆಂದು ನಮ್ಮ ನಿರ್ಧಾರವನ್ನು ಬದಲಿಸಿದೆವು,” ಎಂದು ಅವರು ಹಳೆಯ ಘಟನೆಯನ್ನು ರಿವೀಲ್‌ ಮಾಡಿದ್ದಾರೆ.