Friday, 20th December 2024

IPL 2025: ಬೆಂಗಳೂರಿನಲ್ಲೇ ಆರ್‌ಸಿಬಿ ಕಾಲೆಳೆದ ಚೆನ್ನೈ ನಾಯಕ ಗಾಯಕ್ವಾಡ್‌; ವಿಡಿಯೊ ವೈರಲ್‌

ಬೆಂಗಳೂರು: ಐಪಿಎಲ್​ನ(IPL 2025) ಸಾಂಪ್ರದಾಯಿಕ ಎದುರಾಳಿಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿಬಾರಿಯೂ ಉಭಯ ತಂಡಗಳು ಎದುರಾದಾಗಲೂ ಅಭಿಮಾನಿಗಳ ನಡುವಿನ ​ಸೋಶಿಯಲ್​ ಮೀಡಿಯಾ ವಾರ್​ ಮುಗಿಲು ಮುಟ್ಟಿರುತ್ತದೆ. ಇದೀಗ ಸಿಎಸ್‌ಕೆ ತಂಡದ ನಾಯಕ ಋತುರಾಜ್‌ ಗಾಯಕ್ವಾಡ್‌(Ruturaj Gaikwad) ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‌ಸಿಬಿಯನ್ನು ವ್ಯಂಗ್ಯವಾಡಿದ ಘಟನೆ ನಡೆದಿದೆ. ಇದು ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಇನ್ಫೋಸಿಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಋತುರಾಜ್ ಗಾಯಕ್ವಾಡ್, ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳನ್ನಾಡಲು ಮುಂದಾದ ವೇಳೆ ಮೈಕ್‌ ಕೈ ಕೊಟ್ಟಿತು. ಮೈಕ್‌ ಸರಿಯಾದ ಬಳಿಕ ಮಾತು ಮುಂದುವರಿಸಿದ ಗಾಯಕ್ವಾಡ್ ಬಹುಶಃ ಆರ್‌ಸಿಬಿ ಅಭಿಮಾನಿಗಳು ಮೈಕ್‌ ಆಫ್‌ ಮಾಡಿರಬೇಕು ಎಂದು ತಮಾಷೆ ಮಾಡಿದರು. ಇದು ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿಮ್ಮ ಈ ವರ್ತನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಮ್ಮ ಈ ದರ್ಪದ ಮಾತಿಗೆ ಮುಂದಿನ ಆವೃತ್ತಿಯ ಪಂದ್ಯದಲ್ಲಿ ಸರಿಯಾದ ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ MS Dhoni: ಸಾಂಪ್ರದಾಯಿಕ ಪಹಾಡಿ ಗರ್ವಾಲಿ ನೃತ್ಯ ಮಾಡಿದ ಧೋನಿ; ವಿಡಿಯೊ ವೈರಲ್‌

ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ,ರಜತ್‌ ಪಾಟೀದಾರ್‌, ಯಶ್‌ ದಯಾಳ್‌,ಜೋಶ್​ ಹ್ಯಾಸಲ್​ವುಡ್,​ ಫಿಲ್​ ಸಾಲ್ಟ್​, ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ಸ್ಟೋನ್​, ರಸಿಕ್​ ಸಲಾಂ, ಸುಯಶ್​ ಶರ್ಮ, ಭುವನೇಶ್ವರ್​ ಕುಮಾರ್,ಕೃನಾಲ್​ ಪಾಂಡ್ಯ, ಟಿಮ್​ ಡೇವಿಡ್, ಜೇಕಬ್​ ಬೆಥೆಲ್, ದೇವದತ್​ ಪಡಿಕ್ಕಲ್​, ನುವಾನ್​ ತುಷಾರ, ರೊಮಾರಿಯೊ ಶೆರ್ಡ್​, ಸ್ವಪ್ನಿಲ್​ ಸಿಂಗ್​, ಮನೋಜ್​ ಭಾಂಡಗೆ, ಸ್ವಸ್ತಿಕ್​ ಚಿಕರ, ಮೋಹಿತ್​ ರಾಥೀ, ಅಭಿನಂದನ್​ ಸಿಂಗ್​, ಲುಂಗಿ ಎನ್​ಗಿಡಿ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ

ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್​ ಅಹ್ಮದ್,​ ಆರ್​. ಅಶ್ವಿನ್​, ಡೆವೊನ್​ ಕಾನ್ವೇ, ರಚಿನ್​ ರವೀಂದ್ರ, ರಾಹುಲ್​ ತ್ರಿಪಾಠಿ, ಖಲೀಲ್​ ಅಹ್ಮದ್​, ವಿಜಯ್​ ಶಂಕರ್​, ಸ್ಯಾಮ್​ ಕರನ್​, ಅಂಶುಲ್​ ಕಂಬೋಜ್​, ಶೇಕ್​ ರಶೀದ್​, ಮುಕೇಶ್​ ಚೌಧರಿ, ದೀಪಕ್​ ಹೂಡಾ, ಗುರುಜಪ್​ನೀತ್​ ಸಿಂಗ್​ ,ನಾಥನ್​ ಎಲ್ಲಿಸ್​, ಜೇಮಿ ಓವರ್ಟನ್​, ಕಮಲೇಶ್​ ನಾಗರಕೋಟಿ, ರಾಮಕೃಷ್ಣ ಘೋಷ್​, ಶ್ರೇಯಸ್​ ಗೋಪಾಲ್​, ವಂಶ್​ ಬೇಡಿ, ಆಂಡ್ರೆ ಸಿದ್ಧಾರ್ಥ್​.