Tuesday, 26th November 2024

IPL 2025: ಹರಾಜಿನಲ್ಲಿ ಸೋಲ್ಡ್‌, ಅನ್‌ಸೋಲ್ಡ್‌ ಆದ ಕರ್ನಾಟಕದ ಆಟಗಾರರಿವರು

ಬೆಂಗಳೂರು: ಈ ಬಾರಿಯ ಐಪಿಎಲ್‌ ಮೆಗಾ ಹಾರಾಜಿನಲ್ಲಿ ಕರ್ನಾಟಕದ ಪಟ್ಟು 27 ಕ್ರಿಕೆಟಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಈ ಪೈಕಿ ಖರೀದಿಯಾದದ್ದು ಕೇವಲ 13 ಮಂದಿ ಮಾತ್ರ. ಉಳಿದ 14 ಮಂದಿ ನಿರಾಸೆ ಮೂಡಿಸಿದರು. ಅದರಲ್ಲೂ ಅಚ್ಚರಿಗೆ ಕಾರಣವಾದದ್ದು ಕರ್ನಾಟಕ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಅನ್‌ಸೋಲ್ಡ್‌ ಆಗಿರುವುದು.

ಖರೀದಿಯಾದ ಆಟಗಾರರು

ಆಟಗಾರತಂಡಪಡೆದ ಮೊತ್ತ
ಕೆ.ಎಲ್‌ ರಾಹುಲ್‌ಡೆಲ್ಲಿ ಕ್ಯಾಪಿಟಲ್ಸ್‌‌14 ಕೋಟಿ
ಪ್ರಸಿದ್ಧ್‌ ಕೃಷ್ಣಗುಜರಾತ್‌ ಟೈಟಾನ್ಸ್9.5 ಕೋಟಿ
ಅಭಿನವ್‌ ಮನೋಹರ್‌ಹೈದರಾಬಾದ್‌3.2 ಕೋಟಿ
ವೈಶಾಕ್ ವಿಜಯ್ ಕುಮಾರ್ಪಂಜಾಬ್‌ ಕಿಂಗ್ಸ್‌1.8 ಕೋಟಿ
ಮನೋಜ್ ಭಾಂಡಗೆಆರ್‌ಸಿಬಿ30 ಲಕ್ಷ
ದೇವದತ್ತ ಪಡಿಕ್ಕಲ್‌ಆರ್‌ಸಿಬಿ2 ಕೋಟಿ
ಮನೀಷ್‌ ಪಾಂಡೆಕೆಕೆಆರ್‌75 ಲಕ್ಷ
ಕೆ.ಎಲ್‌ ಶ್ರೀಜೇಶ್‌ಮುಂಬೈ ಇಂಡಿಯನ್ಸ್‌30 ಲಕ್ಷ
ಶ್ರೇಯಸ್‌ ಗೋಪಾಲ್‌ಚೆನ್ನೈ ಸೂಪರ್‌ ಕಿಂಗ್ಸ್‌‌30 ಲಕ್ಷ
ಪ್ರವೀಣ್‌ ದುಬೆಪಂಜಾಬ್‌ ಕಿಂಗ್ಸ್‌‌30 ಲಕ್ಷ
ಲವನೀತ್‌ಕೆಕೆಆರ್‌‌30 ಲಕ್ಷ
ಮನ್ವಂತ್‌ ಕುಮಾರ್‌ಡೆಲ್ಲಿ‌30 ಲಕ್ಷ
ಕರುಣ್‌ ನಾಯರ್‌ಡೆಲ್ಲಿ50 ಲಕ್ಷ

ಅನ್‌ಸೋಲ್ಡ್‌ ಆದ ಆಟಗಾರರು

ಮಯಾಂಕ್ ಅಗರ್ವಾಲ್, ಎಲ್. ಆರ್ ಚೇತನ್, ಸ್ಮರಣ್ ಆರ್, ಬಿ.ಆರ್ ಶರತ್, ಕೆ ಗೌತಮ್, ಹಾರ್ದಿಕ್ ರಾಜ್, ಶುಭಾಂಗ ಹೆಗಡೆ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ದೀಪಕ್ ದೇವಾಡಿಗ, ವಿದ್ಯಾಧರ ಪಾಟೀಲ, ಸಮರ್ಥ ನಾಗರಾಜ್.

ಇದನ್ನೂ ಓದಿ IPL 2025: ವಿರಾಟ್‌ ಕೊಹ್ಲಿಗೆ ನಾಯಕತ್ವ?, ಆರ್‌ಸಿಬಿಯ ಬಲಿಷ್ಠ ಪ್ಲೇಯಿಂಗ್‌ XI ಹೀಗಿದೆ!

ಅನ್​ಸೋಲ್ಡ್​ ಆದರೂ ಇನ್ನೂ ಇದೆ ಅವಕಾಶ

ಅನ್​ಸೋಲ್ಡ್​ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್​ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್​ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್​ಸೋಲ್ಡ್​ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.