ನವದೆಹಲಿ: ಕಳೆದ ಎರಡು ದಿನಗಳಿಂದ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆಟಗಾರರ ಮೆಗಾ ಹರಾಜು ಅಂತ್ಯವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಟೂರ್ನಿಯಲ್ಲಿ ಪ್ರಮುಖ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಒಟ್ಟು 83 ಕೋಟಿ ರೂ. ಗಳಿಂದ 19 ಆಟಗಾರರನ್ನು ಖರೀದಿಸಿದೆ.
ಸ್ಥಳೀಯ ಆಟಗಾರ ಕೆಎಲ್ ರಾಹುಲ್ ಅವರನ್ನು ಖರೀದಿಸಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಆರ್‌ಸಿಬಿ 10.75 ಕೋಟಿ ರೂ.ಗಳವರೆಗೂ ಬಿಡ್ ಮಾಡಿ ನಂತರ ನಿಲ್ಲಿಸಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಹುಲ್ ತೆರಳಿದರು. ಮತ್ತೊಂದು ಕಡೆ ತಮ್ಮ ಹಳೆಯ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಕೂಡ ಆರ್‌ಸಿಬಿ ಖರೀದಿಸಲು ಮನಸು ಮಾಡಲಿಲ್ಲ. ಮತ್ತೊಂದೆಡೆ ಆರ್‌ಟಿಎಂ ನಿಯಮದಡಿಯಲ್ಲಿಯೂ ಮೊಹಮ್ಮದ್ ಸಿರಾಜ್ ಅಥವಾ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿಲ್ಲ.
IPL Auction 2025: ಆರ್‌ಸಿಬಿ ಸೇರಿದ ಭುವನೇಶ್ವರ್, ಕೃಣಾಲ್
ಆದರೆ, ಜಾಶ ಹೇಝಲ್‌ವುಡ್ (12.5 ಕೋಟಿ ರೂ), ಫಿಲ್ ಸಾಲ್ಟ್ (11.5 ಕೋಟಿ ರೂ., ಹಾಗೂ ಜಿತಿನ್ ಶರ್ಮಾ (11 ಕೋಟಿ ರೂ) ಅವರನ್ನು ಖರೀದಿಸಿತು. ಈ ಬಾರಿ ವಿರಾಟ್ ಕೊಹ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆಂದು ವರದಿಯಾಗಿದೆ. ಏಕೆಂದರೆ ಆಟಗಾರರನ್ನು ಖರೀದಿಸಿರುವುದನ್ನು ನೋಡಿದರೆ ಕೊಹ್ಲಿಯೇ ಈ ಬಾರಿ ಆರ್‌ಸಿಬಿಗೆ ನಾಯಕ ಎಂಬುದು ಮೇಲ್ನೋಟಕ್ಕೆ ತಿಳಿಯಲಿದೆ. ಬಹುಶಃ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
IPL Auction 2025: ʻಪಂತ್ ಅತ್ಯಂತ ದುಬಾರಿ ಆಟಗಾರʼ-ಮೆಗಾ ಹರಾಜಿನ ಬಳಿಕ 10 ತಂಡಗಳ ಆಟಗಾರರ ವಿವರ!
ಮೂರನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್, ನಂತರ ಲಿಯಾಮ್ ಲಿವಿಂಗ್‌ಸ್ಟೋನ್, ವಿಕೆಟ್ ಕೀಪರ್ ಆಗಿ ಜಿತೇಶ ಶರ್ಮಾ ಹಾಗೂ ಮ್ಯಾಷ್ ಫಿನಿಷರ್ ಆಗಿ ಟಿಮ್ ಡೇವಿಡ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಬಹುದು. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿ ಕೃಣಾಲ್ ಪಾಂಡ್ಯ ಆಡಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ರಾಸಿಖ್ ಸಲಾಮ್ ದರ್, ಜಾಶ ಹೇಝಲ್‌ವುಡ್ ಹಾಗೂ ಯಶ್ ದಯಾಳ್ ಕಾಣಿಸಿಕೊಳ್ಳಬಹುದು.
2025ರ ಐಪಿಎಲ್‌ಗೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI
ವಿರಾಟ್ ಕೊಹ್ಲಿ(ನಾಯಕ), ಫಿಲ್ ಸಾಲ್ಟ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರಾಸಿಖ್ ಸಲಾಮ್ ದರ್, ಭುವನೇಶ್ವರ್ ಕುಮಾರ್, ಜಾಶ ಹೇಝಲ್‌ವುಡ್, ಯಶ್ ದಯಾಳ್
Experience, Balance and Power, the ultimate base,
— Royal Challengers Bengaluru (@RCBTweets) November 25, 2024
Our Class of ‘25 is ready to embrace! 👊#PlayBold #ನಮ್ಮRCB #IPLAuction #BidForBold #IPL2025 pic.twitter.com/4M7Hnjf1Di
ಮೆಗಾ ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜಾಶ್ ಹೇಝಲ್‌ವುಡ್, ರಾಸಿಖ್ ಸಲಾಮ್ ದಾರ್, ಸುಯಶ್ ಶರ್ಮಾ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್ , ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.