Tuesday, 19th November 2024

IPL Auction: ಡೆಲ್ಲಿ ಕ್ಯಾಪಿಟಲ್ಸ್‌ ತೊರೆದ ಬಗ್ಗೆ ಮಾನ ಮುರಿದ ಪಂತ್‌

ನವದೆಹಲಿ: ರಿಷಭ್‌ ಪಂತ್‌(Rishabh Pant) ಅವರು ಕ್ಯಾಪಿಟಲ್ಸ್‌(Delhi Capitals) ತಂಡವನ್ನು ಹಣದ ಉದ್ದೇಶಕೋಸ್ಕರ ತೊರೆದಿದ್ದಾರೆ ಎಂಬ ಸುನೀಲ್‌ ಗವಾಸ್ಕರ್‌(Sunil Gavaskar) ಅವರ ಹೇಳಿಕೆಗೆ ರಿಷಭ್‌ ಪಂತ್‌ ಸ್ಪಷ್ಟನೇ ನೀಡಿದ್ದಾರೆ. ಹಣದ ಉದ್ದೇಶವಾಗಿದ್ದರೆ ರಿಟೇನ್‌ಗೂ ಮುನ್ನ ಫ್ರಾಂಚೈಸಿ ಬಳಿ ನಾನೇ ಕೇಳುತ್ತಿದೆ ಎಂದು ಹೇಳುವ ಮೂಲಕ ಹಣ ಅಲ್ಲ ಬೇರೆ ಕಾರಣಕ್ಕೆ ತಂಡ ತೊರೆದಿರುವುದಾಗಿ ತಿಳಿಸಿದ್ದಾರೆ. ಆದರೆ ಕಾರಣ ಎನ್ನುವುದನ್ನು ಮಾತ್ರ ಪಂತ್‌ ಸ್ಪಷ್ಟವಾಗಿ ಹೇಳಿಲ್ಲ.

ಐಪಿಎಲ್ 2025 ರ ಮೆಗಾ ಹರಾಜಿಗೆ(IPL Auction) ಸಂಬಂಧಿಸಿ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀಲ್‌ ಗವಾಸ್ಕರ್‌, ʼನನ್ನ ಪ್ರಕಾರ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲು ಫ್ರಾಂಚೈಸಿ ಮತ್ತು ಆಟಗಾರರ ನಡುವಿನ ಶುಲ್ಕದ ಭಿನ್ನಾಭಿಪ್ರಾಯ ಇರಬಹುದುʼ ಎಂದು ಹೇಳಿದ್ದರು. ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಪಂತ್‌ʼ ಹಣದ ಉದ್ದೇಶವಾಗಿದ್ದರೆ ನಾನು ಫ್ರಾಂಚೈಸಿ ಬಳಿ ನೇರವಾಗಿ ಕೇಳುತ್ತಿದೆ. ತಂಡ ತೊರೆದಿರುವುದು ಹಣದ ಉದ್ದೇಶಕ್ಕಲ್ಲʼ ಎಂದು ಹೇಳಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ರಿಷಭ್‌ ಪಂತ್‌ ಖರೀದಿಗೆ ಭಾರೀ ಪೈಪೋಟಿ ಏರ್ಪಡುವುದರಲ್ಲಿ ಅನುಮಾನವೇ ಬೇಡ. ನೆಟ್ಟಿಗರ ಊಹೆ ಪ್ರಕಾರ ಪಂತ್‌ ಗರಿಷ್ಠ ಮೊತ್ತ ಉಳಿದಿರುವ ಪಂಜಾಬ್‌ ಕಿಂಗ್ಸ್‌ ತಂಡ ಸೇರುವುದು ಖಚಿತ ಎಂದಿದ್ದಾರೆ. ಪಂಜಾಬ್‌ ಬಳಿ 110.5 ಕೋಟಿ ರೂ. ಮೊತ್ತವಿದೆ.

ಇದನ್ನೂ ಓದಿ IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು?

ಅಕ್ಷರ್‌ ಪಟೇಲ್(16.5‌ ಕೋಟಿ ರೂ.), ಕುಲ್‌ ದೀಪ್‌ ಯಾದವ್‌ (13.25 ಕೋಟಿ ರೂ.), ಟ್ರಿಸ್ಟಾನ್ ಸ್ಟಬ್ಸ್(10 ಕೋಟಿ ರೂ.) ಅಭಿಷೇಕ್‌ ಪೋರೆಲ್(4‌ ಕೋಟಿ) ಅವರನ್ನು ರಿಟೈನ್‌ ಮಾಡಿಕೊಂಡಿ ಆಟಗಾರರು. ಕೈ ಬಿಟ್ಟ ಪ್ರಮುಖ ಆಟಗಾರರೆಂದರೆ ರಿಷಭ್‌ ಪಂತ್ , ಡೇವಿಡ್‌ ವಾರ್ನರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್. ಕೈಯಲ್ಲಿ ಉಳಿದಿರುವ ದುಡ್ಡು 73 ಕೋಟಿ ರೂ.

ಇದೇ ತಿಂಗಳ ನ. 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ(Jeddah) ಹರಾಜು ಪ್ರಕ್ರಿಯೆ ನಡೆಯಲಿದೆ. ಮೆಗಾ ಹರಾಜಿನಲ್ಲಿ ಒಟ್ಟು 574 ಮಂದಿ ಅಂತಿಮ ಪಟ್ಟಿಯಲ್ಲಿದ್ದಾರೆ. ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಅಂತಿಮ ಪಟ್ಟಿಯಲ್ಲಿ 366 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ.