Thursday, 12th December 2024

ಐಪಿಎಲ್ ಬೆಟ್ಟಿಂಗ್: ಮಾಜಿ ರಣಜಿ ಆಟಗಾರ ಸೇರಿ ಮೂವರ ಬಂಧನ

ಮುಂಬೈ: ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿದಂತೆ ಮೂವರನ್ನು ವರ್ಸೊವಾ ಪೊಲೀಸರು ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಮೊರಿಸ್ ತನ್ನ ಫ್ಲಾಟ್ ನಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ರಾಬಿನ್, ಧಿರೇಂದ್ರ ಕುಲ್ಕರ್ಣಿ ಹಾಗೂ ರೋಹಿತ್ ಬಾಬು ಎಂಬುವರನ್ನು ಬಂಧಿಸಿದ್ದಾರೆ.

ಮೂವರು ಆರ್ ಸಿಬಿ ಹಾಗೂ ಎಸ್‌ಆರ್ ಹೆಚ್ ನಡುವಿನ ಪಂದ್ಯದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಬಂಧಿತರಿಂದ 9000 ರೂ ನಗದು, ಹಲವು ಮೊಬೈಲ್ ಫೋನ್, ಎರಡು ಟ್ಯಾಬ್ ಗಳನ್ನು ವಶಕ್ಕೆ ಪಡೆದಿದ್ದಾರೆ.