ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ(ISL 2024) ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ(Bengaluru FC) ಗೆಲುವಿನ ಶುಭಾರಂಭ ಕಂಡಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ತಂಡ ಈಸ್ಟ್ ಬೆಂಗಾಲ್(East Bengal) ತಂಡದ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿತು. 19 ವರ್ಷದ ವಿನೀತ್ ವೆಂಕಟೇಶ್(Vinith Venkatesh) ಗಳಿಸಿದ ಏಕೈಕ ಗೋಲು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಎಫ್‌ಸಿ ತಂಡವು 3-2ರಿಂದ ಒಡಿಶಾ ಎಫ್‌ಸಿ ವಿರುದ್ಧ ಜಯಿಸಿತು. ಈ ಪಂದ್ಯ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದಿತ್ತು.
ಪಂದ್ಯದಲ್ಲಿ ಆರಂಭದಿಂದಲೂ ಉಭಯ ತಂಡಗಳ ರಕ್ಷಣಾತ್ಮ ಆಟ ಪ್ರೇಕ್ಷಕರ ಗಮನಸೆಳೆಯಿತು. 25ನೇ ನಿಮಿಷದಲ್ಲಿ ವಿನಿತ್ ಈಸ್ಟ್ ಬೆಂಗಾಲ್ ತಂಡದ ಗೋಲ್‌ಕೀಪರ್ ಪ್ರಭಸುಖನ್ ಸಿಂಗ್ ಅವರನ್ನು ವಂಚಿಸಿ ಒಂದು ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು. ಗೋಲು ದಾಖಲಾದ ಬಳಿಕ ಬೆಂಗಲೂರು ತಂಡ ತನ್ನ ರಕ್ಷಣಾ ವಿಭಾಗವನ್ನು ಮತ್ತಷ್ಟು ಬಲಿಷ್ಠ ಗೊಳಿಸುವ ಮೂಲಕ ಎದುರಾಳಿ ತಂಡಕ್ಕೆ ಗೋಲು ಬಾರಿಸುವ ಅವಕಾಶವನ್ನೇ ನಿಡದೆ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.
ಮಹಿಳಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು
ಇಂದಿನಿಂದ(ಭಾನುವಾರ ಸೆ.15) ಅಕ್ಟೋಬರ್ 9ರ ತನಕ ನಡೆಯಲಿರುವ ರಾಷ್ಟ್ರೀಯ ಮಹಿಳಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರನ್ನು ಆರಿಸಲಾಗಿದೆ. ಈ ಶಿಬಿರ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಡೆಯಲಿದೆ. ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಸಿದ್ಧತೆ ಹಾಗೂ ತಂಡದ ಆಯ್ಕೆ ಹಿನ್ನೆಲೆಯಲ್ಲಿ ಈ ಶಿಬಿರ ಮಹತ್ವದ ಪಾತ್ರ ವಹಿಸಲಿದೆ. ಈ ಪಂದ್ಯಾವಳಿ ನವೆಂಬರ್ 11ರಿಂದ 20ರ ತನಕ, ಬಿಹಾರದ ರಾಜ್‌ಗಿರ್‌ನಲ್ಲಿ ಸಾಗಲಿದೆ.
ಇದನ್ನೂ ಓದಿ Diamond League Final: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ಅಗ್ರಸ್ಥಾನ ಕಳೆದುಕೊಂಡ ನೀರಜ್ ಚೋಪ್ರಾ
ಸಂಭವನೀಯ ಆಟಗಾರ್ತಿಯರು
ಗೋಲ್‌ಕೀಪರ್ಸ್: ಸವಿತಾ ಪೂನಿಯಾ, ಬಿಚು ದೇವಿ ಖರಿಬಮ್, ಬನ್ಸಾರಿ ಸೋಲಂಕಿ, ಮಾಧುರಿ ಕಿಂಡೊ
ಡಿಫೆಂಡರ್ಸ್: ನಿಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ರೋಪ್ನಿ ಕುಮಾರಿ, ಮಹಿಮಾ ಚೌಧರಿ, ಜ್ಯೋತಿ ಚೆಟ್ರಿ, ಪ್ರೀತಿ.
ಮಿಡ್‌ಫೀಲ್ಡರ್ಸ್: ಸಲಿಮಾ ಟೆಟೆ, ಮರಿನಾ ಲಾಲರಾಮಂಗ್‌ಹಾಕಿ, ವೈಷ್ಣವಿ ವಿಠ್ಠಲ್ ಫಾಳ್ಕೆ, ನೇಹಾ, ಜ್ಯೋತಿ, ಎಡುಲಾ ಜ್ಯೋತಿ, ಬಲಜೀತ್ ಕೌರ್, ಮನಿಶಾ ಚೌಹನ್, ಅಕ್ಷತಾ ಆಬಾಸೊ ಧೇಕಳೆ, ಅಜ್ಮಿನಾ ಕುಜುರ್.
ಫಾರ್ವರ್ಡ್ಸ್: ಸುನೆಲಿತಾ ಟೊಪ್ಪೊ, ಮುಮ್ತಾಝ್ ಖಾನ್, ಲಾಲ್‌ರೆಮ್ಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ದೀಪಿಕಾ ಸೊರೆಂಗ್, ಪ್ರೀತಿ ದುಬೆ, ವಂದನಾ ಕಟಾರಿಯಾ, ರುತುಜಾ ದಾದಸೊ ಪಿಸಾಳ,