ಮುಂಬಯಿ: ಮುಂಬೈನ ಅತ್ಯಂತ ಹಳೆಯ ಕ್ರಿಕೆಟ್ ಕ್ಲಬ್ಗಳಲ್ಲಿ ಒಂದಾರುವ ಖಾರ್ ಜಿಮ್ಖಾನದ(Khar Gymkhana) ಸಭಾಂಗಣವನ್ನು ಮತಾಂತರ ಪ್ರಯತ್ನದಂಥ ಧಾರ್ಮಿಕ ಚಟುವಟಿಕೆಗಳಿಗೆ ಬಳಸಿರುವ ಆರೋಪವನ್ನು ಭಾರತ ಮಹಿಳಾ ತಂಡದ ಬ್ಯಾಟರ್ ಜೆಮೀಮಾ ರೋಡ್ರಿಗಸ್(Jemimah Rodrigues) ಅವರ ತಂದೆ(Jemimah’s father) ಐವಾನ್ ರೋಡ್ರಿಗಸ್(Ivan Rodrigues) ತಳ್ಳಿಹಾಕಿದ್ದಾರೆ. ಸಭಾಂಗಣದ ಆವರಣದಲ್ಲಿಕೇವಲ ಪ್ರಾರ್ಥನೆ ಕೂಟಗಳನ್ನು ನಡೆಸಿರುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಐವಾನ್ ರೋಡ್ರಿಗಸ್ ಪುತ್ರಿಯ ಕ್ಲಬ್ ಸದಸ್ಯತ್ವವನ್ನು ಬಳಸಿಕೊಂಡು, ಕಳೆದ ಒಂದು ವರ್ಷದಿಂದ ಪ್ರತಿ ವಾರಾಂತ್ಯಕ್ಕೆ ಕ್ಲಬ್ನ ಸಭಾಂಗಣವನ್ನು ತನ್ನ ಧಾರ್ಮಿಕ ಚಟುವಟಿಕೆಗಳಿಗೆ ಬಳಸಿದ್ದಾರೆ. “ಬ್ರದರ್ ಮ್ಯಾನ್ಯುಯೆಲ್ ಮಿನಿಸ್ಟ್ರೀಸ್’ ಗುಂಪಿನ ಭಾಗವಾಗಿರುವ ಅವರು ಅದರ ಮತಾಂತರ ಪ್ರಯತ್ನಗಳಿಗೆ ಕ್ಲಬ್ ಸಭಾಂಗಣವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಕ್ಲಬ್ ಸದಸ್ಯತ್ವವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಜೆಮೀಮಾ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ IPL 2025 Players Retention: ರಿಟೇನ್ ಪಟ್ಟಿ ಸಲ್ಲಿಸಲು ಅಕ್ಟೋಬರ್ 31 ಅಂತಿಮ ಗಡುವು
ಕ್ರಿಕೆಟ್ ಕೋಚ್ ಕೂಡ ಆಗಿರುವ ಐವಾನ್ ರೋಡ್ರಿಗಸ್ ಕಳೆದ ಒಂದು ವರ್ಷದಿಂದ ಕ್ಲಬ್ ಸಭಾಂಗಣದಲ್ಲಿ 35 ಧಾರ್ಮಿಕ ಸಮಾರಂಭಗಳನ್ನು ನಡೆಸಿದ್ದಾರೆ ಎಂದು ಕ್ಲಬ್ ಆಡಳಿತ ಮಂಡಳಿ ಸದಸ್ಯ ಶಿವ ಮಲ್ಹೋತ್ರಾ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐವಾನ್ ರೋಡ್ರಿಗಸ್, ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಕಟ್ಟುನಿಟ್ಟಾದ ಕಾರ್ಯವಿಧಾನಗಳಿಗೆ ಬದ್ಧವಾಗಿದೆ ಮತ್ತು ಜಿಮ್ಖಾನಾದಲ್ಲಿ ಯಾವುದೇ “ಪರಿವರ್ತನೆ ಸಭೆಗಳು” ನಡೆದಿಲ್ಲ. ಇದೊಂದು ಸುಳ್ಳು ಆರೋಪ ಎಂದು ಹೇಳಿದ್ದಾರೆ.
“ನಾವು ಏಪ್ರಿಲ್ 2023 ರಿಂದ ಒಂದು ವರ್ಷದ ಅವಧಿಯಲ್ಲಿ ಅನೇಕ ಸಂದರ್ಭಗಳಲ್ಲಿ ಪ್ರಾರ್ಥನಾ ಸಭೆಗಳ ಉದ್ದೇಶಕ್ಕಾಗಿ ಖಾರ್ ಜಿಮ್‌ಖಾನಾದಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡಿದ್ದೇವೆ. ಆದಾಗ್ಯೂ, ಇದನ್ನು ಖಾರ್ ಜಿಮ್‌ಖಾನಾ ಹೊಂದಿರುವ ಕಾರ್ಯವಿಧಾನಗಳ ಸಂಪೂರ್ಣ ಅನುಸಾರವಾಗಿ ಮಾಡಲಾಗಿದೆ. ಮತಾಂತರ ಪ್ರಯತ್ನದಂಥ ಧಾರ್ಮಿಕ ಚಟುವಟಿಕೆ ನಡೆದಿಲ್ಲ” ಎಂದು ಐವಾನ್ ತಮ್ಮ ಹೇಳಿಯಲ್ಲಿ ತಿಳಿಸಿದ್ದಾರೆ.
“ಪ್ರಾರ್ಥನಾ ಸಭೆಗಳನ್ನು ನಡೆಸುವುದನ್ನು ನಿಲ್ಲಿಸಲು ನಮಗೆ ತಿಳಿಸಿದಾಗ, ನಾವು ಜಿಮ್ಖಾನಾದ ನಿಲುವನ್ನು ಗೌರವಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಭೆ ನಡೆಸುವುದನ್ನು ನಿಲ್ಲಿಸಿದ್ದೇವೆ” ಎಂದು ಐವಾನ್ ಹೇಳಿದರು. ತಂದೆ ವಿರುದ್ಧ ಕೇಳಿ ಬಂದ ಆರೋಪದಿಂದ ಜೆಮೀಮಾಗೆ ನೀಡಲಾಗಿದ್ದ ಖಾರ್ ಜಿಮ್ಖಾನಾದ ಗೌರವ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಭಾರತ ಪರ 3 ಟೆಸ್ಟ್, 30 ಏಕದಿನ, 104 ಟಿ20 ಪಂದ್ಯಗಳನ್ನು ಆಡಿರುವ ಜೆಮೀಮಾ, ಇತ್ತೀಚೆಗೆ ಮಹಿಳೆಯರ ಟಿ20 ವಿಶ್ವಕಪ್ನಲ್ಲೂ ಭಾಗವಹಿಸಿದ್ದರು. 2023ರಲ್ಲಿ ಅವರು 3 ವರ್ಷಗಳಿಗೆ ಖಾರ್ ಜಿಮ್ಖಾನಾದ ಸದಸ್ಯತ್ವ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದ್ದರು.