Tuesday, 5th November 2024

ದ್ವಿಶತಕ ಬಾರಿಸಿದ ಕೇನ್‌ ವಿಲಿಯಮ್ಸನ್: 354 ರನ್ ಹಿನ್ನಡೆಯಲ್ಲಿ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.

ನಾಯಕ ಕೇನ್ ವಿಲಿಯಮ್ಸನ್ (238ರನ್) ವೃತ್ತಿ ಜೀವನದಲ್ಲಿ ಸಿಡಿಸಿದ 4ನೇ ದ್ವಿಶತಕ ಹಾಗೂ ಹೆನ್ರಿ ನಿಕೋಲ್ಸ್ (157ರನ್) ಮತ್ತು ಡೆರಿಲ್ ಮಿಚೆಲ್‌ ಅವರ ಅಜೇಯ ಶತಕ(102) ನೆರವಿನಿಂದ ಆತಿಥೇಯರು ಪ್ರವಾಸಿಗರ ಮೇಲೆ ಹಿಡಿತ ಸಾಧಿಸಿದೆ.

ಹ್ಯಾಗ್ಲೆ ಓವಲ್ ಮೈದಾನದಲ್ಲಿ 3 ವಿಕೆಟ್‌ಗೆ 286 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್‌ಗೆ 659 ರನ್‌ಗೆ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು. ಇದರಿಂದ 362 ರನ್ ಮುನ್ನಡೆ ಸಾಧಿಸಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡ 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 8 ರನ್ ಪೇರಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 354 ರನ್ ಗಳಿಸಬೇಕಿದೆ.

ಇದಕ್ಕೂ ಮೊದಲು 112 ರನ್‌ಗಳಿಂದ ವಿಲಿಯಮ್ಸನ್ ಹಾಗೂ 89 ರನ್‌ಗಳಿಂದ ದಿನದಾಟ ಆರಂಭಿಸಿದ ನಿಕೋಲ್ಸ್ ಜೋಡಿ 4ನೇ ವಿಕೆಟ್‌ಗೆ 369 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಮಿಚೆಲ್ ಹಾಗೂ ವಿಲಿಯಮ್ಸನ್ ಜೋಡಿ 6ನೇ ವಿಕೆಟ್‌ಗೆ 133 ಕಲೆಹಾಕಿತು. ವಿಲಿಯಮ್ಸನ್ ನಿರ್ಗಮನದ ಬೆನ್ನಲ್ಲೆ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಲಾಯಿತು. 2 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಯಿಂದ ಮುನ್ನಡೆ ಸಾಧಿಸಿದೆ.