Sunday, 8th September 2024

ಕೊಹ್ಲಿ ಮೂರು ಮಾದರಿಯ ನಾಯಕತ್ವ ತ್ಯಜಿಸಲಿ: ಶಾಹಿದ್ ಅಫ್ರಿದಿ

ಮುಂಬೈ: ವಿರಾಟ್ ಕೊಹ್ಲಿ, ಮೂರು ಮಾದರಿಯ ನಾಯಕತ್ವ ಬಿಡಬೇಕು ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಕೊಹ್ಲಿ ಅವರು ಟಿ20 ತಂಡದ ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ಶರ್ಮಾ ಅವರ ನ್ನು ನಾಯಕರನ್ನಾಗಿ ಆಯ್ಕೆ ಮಾಡಲಾ ಗಿದೆ. ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವ ತ್ಯಜಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅಫ್ರಿದಿ, ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಬೇಕು ಮತ್ತು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿರಾಟ್ ಕೇವಲ ಆಟಗಾರನಾಗಿ ಮುಂದುವರಿಯುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಭಾವಿಸುತ್ತೇನೆ. ಅವರು ತಮ್ಮ ಕ್ರಿಕೆಟ್ ಮತ್ತು ಬ್ಯಾಟಿಂಗ್ ಅನ್ನು ಆನಂದಿಸು ತ್ತಾರೆ. ತಂಡದ ನಾಯಕತ್ವವು ಸುಲಭವಲ್ಲ, ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ನೀವು ಎಲ್ಲಿಯವರೆಗೆ ಉತ್ತಮ ನಾಯಕತ್ವ ವಹಿಸುತ್ತೀರೋ ಅಲ್ಲಿಯವರೆಗೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.

ರೋಹಿತ್ ಅಗತ್ಯವಿದ್ದಾಗ ಆಕ್ರಮಣಶೀಲತೆಯನ್ನು ತೋರಿಸುತ್ತಾರೆ ಎಂದು ಅಫ್ರಿದಿ ಸೇರಿದರು.

Leave a Reply

Your email address will not be published. Required fields are marked *

error: Content is protected !!