Sunday, 15th December 2024

36 ರನ್ನಿಗೆ ಆಟ ಮುಗಿಸಿದ ಕೊಹ್ಲಿ ಪಡೆ, ಆಸೀಸ್ ಗೆಲುವಿಗೆ 90 ರನ್

ಅಡಿಲೇಡ್: ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್ ವುಡ್ ದಾಳಿಗೆ ನಲುಗಿದ ಟೀಂ ಇಂಡಿಯಾ  ದ್ವಿತೀಯ ಇನ್ನಿಂಗ್ಸ್ ನಲ್ಲಿ 36 ರನ್ನಿಗೆ ತನ್ನಾಟ ಮುಗಿಸಿತು.

ವೇಗಿ ಮೊಹಮ್ಮದ್‌ ಶಮಿ ಗಾಯಾಳಾಗಿ ಬ್ಯಾಟಿಂಗ್‌ ಮುಂದುವರೆಸಲಿಲ್ಲ. ಪಂದ್ಯ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ಭಾರತ ಸತತ ವಿಕೆಟ್ ಕಳೆದುಕೊಂಡಿತು. ಕೇವಲ 21.2 ಓವರ್ ನಲ್ಲಿ ಭಾರತ 36 ರನ್ ಗೆ 9 ವಿಕೆಟ್ ಕಳೆದುಕೊಂಡಿದೆ.

9 ರನ್ ಗೆ ಒಂದು ವಿಕೆಟ್ ಕಳೆದುಕೊಂಡಲ್ಲಿಂದ ತೃತೀಯ ದಿನದಾಟ ಆರಂಭಿ ಸಿದ ಭಾರತ ಮೊದಲು ನೈಟ್ ವಾಚ್ ಮ್ಯಾನ್ ಬುಮ್ರಾ ವಿಕೆಟ್ ಕಳೆದು ಕೊಂಡಿತು. ಮಯಾಂಕ್ ಅಗರ್ವಾಲ್ ಕೂಡಾ 9 ರನ್ ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಪುಜಾರ, ಕೊಹ್ಲಿ, ರಹಾನೆ, ಸಹಾ ಕೂಡಾ ಹೆಚ್ಚು ಸಮಯ ವ್ಯರ್ಥ ಮಾಡಲಿಲ್ಲ.

ಭಾರತ ಆಸೀಸ್ ಗೆ 90 ರನ್ ಗುರಿ ನೀಡಿದೆ. ಶಮಿ ಗಾಯಾಳಾಗಿರುವ ಕಾರಣ ಬೌಲಿಂಗ್ ನಲ್ಲೂ ಭಾರತಕ್ಕೆ ಹಿನ್ನಡೆಯಾಗಿದೆ. ಆಸೀಸ್ ಪರ ಕಮಿನ್ಸ್ ಐದು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ನಾಲ್ಕು ವಿಕೆಟ್ ಪಡೆದರು.

ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯರಿಗೆ ಗೆಲ್ಲಲು 75 ರನ್‌ ಗುರಿ ನೀಡಲಾಗಿದೆ.