Saturday, 14th December 2024

ಕೋಲ್ಕತಾ ಗೆಲುವಿಗೆ 229 ರನ್ ಗುರಿ

ದುಬೈ : ಐಪಿಎಲ್ 16 ನೇ ಪಂದ್ಯದಲ್ಲಿ ಡೆಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿದೆ. ಟಾಸ್ ಗೆದ್ದ ಕೆಕೆ ಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಆರಂಭಿಕ ಆಟಗಾರ ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿದೆ. ಶಾ 41 ಎಸೆತಗಳಲ್ಲಿ 66 ರನ್  ರಿಷಬ್ ಪಂತ್ 17 ಎಸೆತ ಗಳಲ್ಲಿ 38 ರನ್ ಬಾರಿಸಿದರು.

ಡೆಲ್ಲಿ ತಂಡದಲ್ಲಿ ಅಕ್ಷರ್ ಪಟೇಲ್ ಬದಲು ಅಶ್ವಿನ್, ಕೆಕೆ ಆರ್ ಗೆ ಕುಲದೀಪ್ ಗೆ ರಾಹುಲ್ ತ್ರಿಪಾಠಿ ಸೇರಿಕೊಂಡಿದ್ದಾರೆ.