Sunday, 15th December 2024

ಕ್ರಿಕೆಟ್ʼಗೆ ಲಸಿತ್ ಮಾಲಿಂಗ ವಿದಾಯ

ಕೊಲಂಬೋ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಕ್ರಿಕೆಟ್ʼಗೆ ವಿದಾಯ ಹೇಳಿದ್ದಾರೆ.

ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ವಿದಾಯ ಹೇಳಿರುವ ಮಾಲಿಂಗ ಇನ್ನು ಮುಂದೆ ಲೀಗ್ ಕ್ರಿಕೆಟ್ʼನಲ್ಲೂ ಆಡುವುದಿಲ್ಲ ಎಂದಿದ್ದಾರೆ.

ನಾನು ಪ್ರತಿಯೊಂದು ಕ್ರಿಕೆಟ್ ಮಾದರಿಗೂ ವಿದಾಯ ಹೇಳುತ್ತಿದ್ದೇನೆ. ನನ್ನನ್ನ ಬೆಂಬಲಿಸಿದವರಿಗೆ ಧನ್ಯವಾದಗಳು. ಈಗ ಮುಂಬರುವ ವರ್ಷಗಳಲ್ಲಿ ಯುವ ಕ್ರಿಕೆಟಿಗರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ.