Tuesday, 26th November 2024

Matthew Wade: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮ್ಯಾಥ್ಯೂ ವೇಡ್‌

ಸಿಡ್ನಿ: ಆಸ್ಟ್ರೇಲಿಯಾದ ಎಡಗೈ ಬ್ಯಾಟರ್‌& ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌(Matthew Wade) ಅವರು ಇಂದು(ಮಂಗಳವಾರ) ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ(Matthew Wade retires) ಘೋಷಿಸಿದ್ದಾರೆ. ಈ ಮೂಲಕ 13 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ನಿವೃತ್ತಿಯಾದರೂ ಕೂಡ ವೇಡ್‌ ಆಸ್ಟ್ರೇಲಿಯಾ ತಂಡದಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಅಕ್ಟೋಬರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಡ್, 36 ಟೆಸ್ಟ್, 97 ಏಕದಿನ ಮತ್ತು 92 ಟಿ20 ಪಂದ್ಯಗಳಲ್ಲಿ ಆಸೀಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಜೂನ್ 2024ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ ಪರ ಕೊನೆಯ ಪಂದ್ಯ ಆಡಿದ್ದರು. 2021ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದ ವೇಡ್‌ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

36 ಟೆಸ್ಟ್ ಪಂದ್ಯಗಳಲ್ಲಿ 4 ಶತಕ, 5 ಅರ್ಧಶತಕ ಸೇರಿದಂತೆ 29.87ರ ಸರಾಸರಿಯಲ್ಲಿ 1613 ರನ್ ಗಳಿಸಿದ್ದು, 97 ಏಕದಿನ ಪಂದ್ಯದಲ್ಲಿ 1 ಶತಕ ಹಾಗೂ 11 ಅರ್ಧಶತಕ ಒಳಗೊಂಡಂತೆ 26.87 ಸರಾಸರಿಯಲ್ಲಿ 1867 ರನ್ ಬಾರಿಸಿದ್ದಾರೆ. 92 ಟಿ-20ಯಲ್ಲಿ 3 ಅರ್ಧಶತಕ ಗಳಿಸಿದಂತೆ 26.03 ಸರಾಸರಿಯಲ್ಲಿ 1202 ರನ್ ಗಳಿಸಿದ್ದಾರೆ.

ಇದನ್ನೂ ಓದಿ Virat Kohli: ದೇಶೀಯ ಕ್ರಿಕೆಟ್‌ ಆಡುವಂತೆ ಕೊಹ್ಲಿಗೆ ಸಲಹೆ ನೀಡಿದ ಗೆಳೆಯ

“ಕಳೆದ T20 ವಿಶ್ವಕಪ್‌ನ ಕೊನೆಯಲ್ಲಿ ನನ್ನ ಅಂತಾರಾಷ್ಟ್ರೀಯ ದಿನಗಳು ಬಹುತೇಕ ಮುಗಿದಿವೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿತ್ತು. ನಿವೃತ್ತಿಯಾಗಿದ್ದರೂ ನಾನು ಜಾರ್ಜ್ ಬೈಲಿ ಮತ್ತು ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರೊಂದಿಗೆ ತರಬೇತಿ ನೀಡುವ ಮೂಲಕ ತಂಡಕ್ಕೆ ನೆರವಾಗಲಿದ್ದೇನೆ” ಎಂದು ವೇಡ್‌ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಆಟ ಮುಗಿಸಿದ್ದರೂ ಕೂಡ ಬಿಬಿಎಲ್‌ ಸೇರಿ ಹಲವು ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ನಲ್ಲಿ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಶತಕ, 5ಅರ್ಧಶತಕ, ಏಕದಿನಲ್ಲಿ 1 ಶತಕ, 11 ಅರ್ಧಶತಕ, ಟಿ20 ಕ್ರಿಕೆಟ್‌ನಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. 2021 ಭಾರತ ವಿರುದ್ಧ ಟೆಸ್ಟ್‌ ಮತ್ತು ವೆಸ್ಟ್‌ ಇಂಡೀಸ್‌ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು.