Saturday, 23rd November 2024

ಆರ್‌ಸಿಬಿಗೆ ಮ್ಯಾಕ್ಸ್’ವೆಲ್‌ ಬಲ: ಸನ್ ರೈಸರ್ಸ್ ವಿರುದ್ದ ಗೆದ್ದ ವಿರಾಟ್‌ ಪಡೆ

ಚೆನ್ನೈ: ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಆರ್‌ಸಿಬಿ ತಂಡ, ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಆರ್ ಸಿಬಿ ಪರ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ 59, ನಾಯಕ ವಿರಾಟ್ ಕೊಹ್ಲಿ 33, ಶಹಬಾಜ್ ಅಹ್ಮದ್ 14 ರನ್ ಗಳಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ಪರ ಜೇಸನ್ ಹೋಲ್ಡರ್ 3, ರಶೀದ್ ಖಾನ್ 2 , ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಪರ ನಾಯಕ ಡೇವಿಡ್ ವಾರ್ನರ್ 54, ಮನೀಶ್ ಪಾಂಡೆ 38, ರಶೀದ್ ಖಾನ್ 17 ರನ್ ಪಡೆದರು. ಕೇವಲ ಆರೇ ಎಸೆತದಲ್ಲಿ ಬೆಂಗಳೂರು ತಂಡದ ಹಿಡಿತಕ್ಕೆ ಬಂತು.

ಯುವ ಸ್ಪಿನ್ ಬೌಲರ್ ಶಹಬಾಜ್ ನದೀಮ್ ಮಾಡಿದ ಓವರ್ ನಲ್ಲಿ ಹೈದರಾಬಾದ್‌ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದು ಕೊಂಡು ಒತ್ತಡಕ್ಕೆ ಸಿಲುಕಿತು. ಮೊದಲ ಎಸೆತದಲ್ಲಿ ಜಾನಿ ಬೇರ್ ಸ್ಟೋ, ಎರಡನೇ ಎಸೆತದಲ್ಲಿ ಮನೀಷ್ ಪಾಂಡೆ, ಆರನೇ ಎಸೆತದಲ್ಲಿ ಅಬ್ದುಲ್ ಸಮಾದ್ ಅವರನ್ನು ಬಲೆಗೆ ಕೆಡವಿ, ಜಯದಲ್ಲಿ ಅಬ್ಬರಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

ಅರ್ಧಶತಕ ಹೊಡದ ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್’ವೆಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.