Friday, 22nd November 2024

ಪುರುಷರ ಹಾಕಿ: ಆಸ್ಟ್ರೇಲಿಯಾಕ್ಕೆ ಸುಲಭದ ತುತ್ತಾದ ಭಾರತ

  ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿ ವಿಭಾಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಹೀನಾಯವಾಗಿ ಸೋಲುಂಡಿದೆ.

ಭಾನುವಾರ ನಡೆದ ಆಸೀಸ್ ಪಡೆ ಭಾರತ ವಿರುದ್ಧ 1-7 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿ ಸಿತು. ಭಾರತದ ಪರ ದಿಲ್‌ಪ್ರೀತ್ ಸಿಂಗ್ ಸಮಾಧಾನಕರ ಗೋಲು ದಾಖಲಿಸಿದರು.

ಪಂದ್ಯದ ಆರಂಭದಿಂದಲೂ ಆಸೀಸ್ ಮೊದಲ ಕ್ವಾರ್ಟರ್ ವೇಳೆಗೆ 1-0 ಮತ್ತು ಮೊದಲಾರ್ಧದಲ್ಲಿ 4-0 ಗೋಲುಗಳ ಅಂತರದ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಗೋಲು ದಾಖಲಿಸಿ ತಿರು ಗೇಟು ನೀಡಿದರೂ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಭಾರತ ಕೊನೆಯ ಹಂತದಲ್ಲಿ ತಿರುಗೇಟು ನೀಡುವ ಪ್ರಯತ್ನಕ್ಕೆ ಯಶಸ್ಸು ದಕ್ಕಲಿಲ್ಲ. ಪರಿಣಾಮ ಅಂತಿಮವಾಗಿ 7-1 ಗೋಲುಗಳ ಅಂತರದಲ್ಲಿ ಸೋಲೊಪ್ಪಿಕೊಳ್ಳ ಬೇಕಾಯಿತು.

ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲನ್ನು ದಾಖಲಿಸಿರುವ ಭಾರತದ ಕ್ವಾರ್ಟರ್ ಫೈನಲ್ ಆಸೆ ಜೀವಂತವಾಗಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 3-2 ಗೋಲು ಗಳ ಅಂತರದ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿ ಮಿಂಚಿದ್ದರು.

ಪುರುಷರ ಹಾಕಿ ವಿಭಾಗವನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎರಡೂ ಗುಂಪಿನಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲಿದೆ. ‘ಎ’ ಗುಂಪಿನಲ್ಲಿ ಭಾರತ ಹೊರತಾಗಿ ಆಸ್ಟ್ರೇಲಿಯಾ, ಅರ್ಜೇಂಟೀನಾ, ಸ್ಪೇನ್, ನ್ಯೂಜಿಲೆಂಡ್ ಹಾಗೂ ಆತಿಥೇಯ ಜಪಾನ್ ತಂಡ ಗಳಿವೆ.