Sunday, 15th December 2024

ಬೂಮ್ರಾ, ಬೌಲ್ಟ್ ಮಾರಕ: ಡೆಲ್ಲಿ ಆಟವನ್ನು ನಿಯಂತ್ರಿಸಿದ ಮುಂಬೈ

ದುಬೈ: ಟಾಸ್‌ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಮುಂಬೈ ಇಂಡಿಯನ್ಸ್‌ ತಂಡ ಭರಪೂರ ಯಶಸ್ಸು ಸಾಧಿಸಿತು. ಎದುರಾಳಿ ಪಡೆಯನ್ನು ಕೇವಲ 110 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು.

ಡೆಲ್ಲಿ ತಂಡಕ್ಕೆ ವೇಗಿ ಟ್ರೆಂಟ್‌ ಬೌಲ್ಟ್‌ ಆರಂಭದಲ್ಲೇ ಆಘಾತ ನೀಡಿದರು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಶಿಖರ್‌ ಧವನ್‌ (0) ಅವರನ್ನು ಪೆವಿಲಿ ಯನ್‌ಗೆ ಅಟ್ಟಿದ ಬೌಲ್ಟ್,‌ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಪೃಥ್ವಿ ಶಾ (10) ಅವರ ವಿಕೆಟ್‌ ಪಡೆದರು.

ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಮೂರನೇ ವಿಕೆಟ್‌ ಜೊತೆ ಯಾಟದಲ್ಲಿ 35 ರನ್ ಸೇರಿಸಿದರು. 25 ರನ್‌ ಗಳಿಸಿ ಆಡುತ್ತಿದ್ದ ಅಯ್ಯರ್‌ 11ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸುವುದರೊಂದಿಗೆ ಡೆಲ್ಲಿ ತಂಡದ ಕುಸಿತ ಆರಂಭ ವಾಯಿತು.

ಮಾರ್ಕಸ್‌ ಸ್ಟೋಯಿನಸ್‌ (2), ಶಿಮ್ರೋನ್‌ ಹೆಟ್ಮೆಯರ್‌ (11) ನಿರಾಸೆ ಮೂಡಿಸಿದರು. ಕೊನೆಯಲ್ಲಿ ಒಂದು ಸಿಕ್ಸರ್ ಸಿಡಿಸಿದ ಕಗಿಸೊ ರಬಾಡ ತಂಡದ ಮೊತ್ತ 110ಕ್ಕೇರಲು ನೆರವಾದರು. ಮುಂಬೈ ಪರ ಜಸ್‌ಪ್ರೀತ್‌ ಬೂಮ್ರಾ ಮತ್ತು ಟ್ರೆಂಟ್‌ ಬೌಲ್ಟ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಕಲ್ಟರ್‌ನೈಲ್‌ ಮತ್ತು ರಾಹುಲ್‌ ಚಹಾರ್ ಒಂದೊಂದು ವಿಕೆಟ್‌ ಕಿತ್ತರು.