Thursday, 12th December 2024

ಪ್ಲೇಆಫ್ ಅಗ್ರಸ್ಥಾನಿ ಮುಂಬೈಗೆ ಸನ್‌ರೈಸರ‍್ಸ್ ಸವಾಲು

ಶಾರ್ಜಾ: ಅಮೋಘ ಆಟದ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ  ಆಫ್‌ ಹಂತಕ್ಕೇರುವ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂದು ಎದುರಾಗ ಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ಮುಂಬೈ ಮತ್ತು ಸನ್‌ರೈಸರ್ಸ್ ತಂಡಗಳು ಸೆಣಸಲಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಭರವಸೆಯ ಅಲೆಯಲ್ಲಿ ತೇಲುತ್ತಿರುವ ಸನ್‌ರೈಸರ್ಸ್‌ ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಪ್ರವೇಶಿಸಲಿದೆ.