Thursday, 12th December 2024

ಅಮಿತ್‌ ಮಿಶ್ರಾ ಸ್ಪಿನ್ನಿಗೆ ಕುಸಿದ ಮುಂಬೈ: ಡೆಲ್ಲಿಗೆ ಮೂರನೇ ಗೆಲುವು

ಚೆನ್ನೈ : ಐಪಿಎಲ್ 14ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳ ಪೇರಿಸಿತ್ತು. ಮುಂಬೈ ನೀಡಿದ 138 ರನ್ ಗಳ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ವಿಜಯ ಸಾಧಿಸಿತು.

ಮುಂಬೈ ಪರ ರೋಹಿತ್ ಶರ್ಮಾ 44, ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶನ್ 26 ಮತ್ತು ಜಯಂತ್ ಯಾದವ್ 23 ರನ್ ಬಾರಿಸಿದ್ದಾರೆ. ಡೆಲ್ಲಿ ಪರ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಮಾಡಿ 45 ರನ್ ಬಾರಿಸಿದರು. ಇನ್ನು ಸ್ಟೀವನ್ ಸ್ಮಿತ್ 33, ಲಲಿತ್ ಯಾದವ್ 22 ರನ್ ಬಾರಿಸಿದ್ದಾರೆ.

ಮುಂಬೈ ಬ್ಯಾಟಿಂಗಿನಲ್ಲಿ ಮಧ್ಯಮ ಕ್ರಮಾಂಕ ಕುಸಿತ ಕಂಡ ಕಾರಣ, ಸವಾಲೆಸೆಯುವ ಮೊತ್ತ ಪೇರಿಸಲಾಗಲಿಲ್ಲ. ಮುಂಬೈನ ಈ ಕುಸಿತಕ್ಕೆ ಸ್ಪಿನ್ನರ್‌ ಅಮಿತ್‌ ಮಿಶ್ರಾ ಮುಹೂರ್ತ ಫಿಕ್ಸ್ ಮಾಡಿದರು. ತಮ್ಮ ನಾಲ್ಕು ಓವರುಗಳ ಕೋಟಾದಲ್ಲಿ ನಾಯಕ ರೋಹಿತ್‌ ಶರ್ಮಾ ಸಹಿತ ನಾಲ್ಕು ವಿಕೆಟ್‌ ಕಿತ್ತು, ಎದ್ದೇಳಲಾರದಂತಹ ಹೊಡೆತ ನೀಡಿದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.