Thursday, 12th December 2024

ನಿವೃತ್ತಿ ಸುಳಿವು ನೀಡಿದ ಮಿಥಾಲಿ ರಾಜ್

ಮುಂಬೈ: ನ್ಯೂಜಿಲ್ಯಾಂಡ್’ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2022ಕ್ಕೆ ತಮ್ಮ ತಂಡ ವನ್ನ ಮುನ್ನಡೆಸಲು ಸಜ್ಜಾಗುತ್ತಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನಿವೃತ್ತಿ ಸುಳಿವು ನೀಡಿದ್ದಾರೆ.

ಮಿಥಾಲಿ 22 ವರ್ಷಗಳ ಬಳಿಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ತಮ್ಮ ಮೊದಲ ವಿಶ್ವ ಕಪ್ ಪ್ರಶಸ್ತಿಯನ್ನ ಗೆಲ್ಲುವ ಸನಿಹದಲ್ಲಿದ್ದಾರೆ. 2000ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ʼನಲ್ಲಿ ಮಿಥಾಲಿ ಭಾರತ ತಂಡದ ಭಾಗವಾಗಿದ್ದರು. ಎರಡು ದಶಕಗಳ ನಂತರ ಟೀಂ ಇಂಡಿಯಾ ನಾಯಕಿ ಯಾಗಿದ್ದಾರೆ. 2017ರಲ್ಲಿ ಅವರ ತಂಡವು ಫೈನಲ್ʼನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

ದೀರ್ಘ ಪ್ರಯಾಣವಾಗಿದೆ ಮತ್ತು ನಾನು ಅದನ್ನ ಸಂತೋಷದಿಂದ ಕೊನೆಗೊಳಿಸಲು ಬಯಸುತ್ತೇನೆ. ವಿಶ್ವಕಪ್ʼನಲ್ಲಿ ನಮ್ಮ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ನಾನು ಬಯಸುತ್ತೇನೆ. ಈ ಪ್ರತಿಷ್ಠಿತ ಕಪ್ ಸಾಧಿಸಲು ಇದು ಭಾರತಕ್ಕೆ ಸಹಾಯ ಮಾಡುತ್ತದೆ.

ಕಳೆದ ಸರಣಿಯಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ 1-4ರಿಂದ ಸೋತಿತ್ತು. ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ವಿಶ್ವಕಪ್ʼನಲ್ಲಿ ತಮ್ಮ ತಂಡವು ಅತ್ಯುತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ಮಿಥಾಲಿ ಹೇಳಿದರು.