ನವದೆಹಲಿ: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್’ಗೆ ಮುಂಚಿತವಾಗಿ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ಬೌಲರುಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನವನ್ನ ಮರಳಿ ಪಡೆದಿದ್ದಾರೆ.
ಏಷ್ಯಾಕಪ್ ಫೈನಲ್ನಲ್ಲಿ ಸಿರಾಜ್ ಅವರ ದಾಳಿಯು ಶ್ರೀಲಂಕಾವನ್ನ 50 ರನ್ನುಗಳಿಗೆ ಕಟ್ಟಿಹಾಕಿತು. ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಸಹಾಯ ಮಾಡಿತು. ಏಷ್ಯಾಕಪ್ 21ಕ್ಕೆ 6 ವಿಕೆಟ್ ಪಡೆದ ಸಿರಾಜ್, ಈ ವರ್ಷದ ಮಾರ್ಚ್ನಲ್ಲಿ ಜೋಶ್ ಹೇಜಲ್ವುಡ್ ವಿರುದ್ಧ ಸೋತಿದ್ದ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.
ಸಿರಾಜ್ 12.2ರ ಸರಾಸರಿಯಲ್ಲಿ 10 ವಿಕೆಟ್ ಪಡೆದು ಟೂರ್ನಿಯನ್ನ ಮುಗಿಸಿದರು. ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರುಗಳನ್ನ ಹಿಂದಿಕ್ಕಿದ್ದಾರೆ.
ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿ ದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಗಾಯದಿಂದ ಚೇತರಿಸಿಕೊಂಡ ಬಳಿಕ ಅದ್ಭುತ ಪ್ರದರ್ಶನ ನೀಡಿದರು.