Sunday, 15th December 2024

ಏಕದಿನ ಬೌಲರುಗಳ ಶ್ರೇಯಾಂಕ: ಸಿರಾಜ್’ಗೆ ನಂ.1 ಸ್ಥಾನ

ವದೆಹಲಿ: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್’ಗೆ ಮುಂಚಿತವಾಗಿ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ಬೌಲರುಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನವನ್ನ ಮರಳಿ ಪಡೆದಿದ್ದಾರೆ.

ಸಿರಾಜ್ 12.2ರ ಸರಾಸರಿಯಲ್ಲಿ 10 ವಿಕೆಟ್ ಪಡೆದು ಟೂರ್ನಿಯನ್ನ ಮುಗಿಸಿದರು. ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರುಗಳನ್ನ ಹಿಂದಿಕ್ಕಿದ್ದಾರೆ.

ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿ ದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಗಾಯದಿಂದ ಚೇತರಿಸಿಕೊಂಡ ಬಳಿಕ ಅದ್ಭುತ ಪ್ರದರ್ಶನ ನೀಡಿದರು.