ಗೋವಾ: ಭಾರತ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS DHONI) ಅವರು ಹೊಸ ವರ್ಷವನ್ನು(ms dhoni new year celebration) ಗೋವಾದಲ್ಲಿ ಆಚರಿಸಿದ್ದಾರೆ. ಪತ್ನಿ ಸಾಕ್ಷಿ ಸಿಂಗ್(Sakshi Dhoni)ಮತ್ತು ಮಗಳು ಝೀವಾ(,ziva dhoni) ಜತೆ ಧೋನಿ ಹೊಸ ವರ್ಷವನ್ನು ಸಂಭ್ರಮಿಸಿದ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದೆ.
ಗೋವಾದ ಮೊರ್ಜಿಮ್ ಬೀಚ್‌ನಲ್ಲಿ(morjim beach) ಧೋನಿ ಬೃಹತ್ ಗಾತ್ರದ ಆಕಾಶ ಬುಟ್ಟಿಐನ್ನು ಹಾರಿ ಬಿಡುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಿದರು. ಈ ವಿಡಿಯೊವನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಬಣ್ಣ ಬಣದ್ಣದ ಉಡುಗೆಯಲ್ಲಿ ಧೋನಿ ಮಗಳು ಮತ್ತು ಪ್ನಿ ಜತೆ ಇರುವ ಫೋಟೊ ಕೂಡ ವೈರಲ್ ಆಗಿದೆ. ಅಭಿಮಾನಿಗಳು ಧೋನಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
ಇತ್ತೀಚೆಗೆ ಧೋನಿ ಕುಟುಂಬ ಮತ್ತು ಗೆಳೆಯರೊಂದಿಗೆ ಕ್ರಿಸ್‌ಮಸ್ ಆಚರಿಸಿದ್ದ ಫೋಟೊಗಳು ವೈರಲ್ ಆಗಿತ್ತು. ಸಾಂತಾ ಕ್ಲಾಸ್ ವೇಷ(MS Dhoni Santa Claus) ಧರಿ ಮಗಳು ಝೀವಾಗೆ ಧೋನಿ ಸರ್ಪ್ರೈಸ್ ಕೊಟ್ಟಿದ್ದರು. ಇದಕ್ಕೂ ಮುನ್ನ ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಸಿಂಗ್(Sakshi Dhoni) ಜತೆ ಉತ್ತಾರಖಂಡ್‌ನ ಸಾಂಪ್ರದಾಯಿಕ ಪಹಾಡಿ ಗರ್ವಾಲಿ ನೃತ್ಯ ಮಾಡಿರುವ ವಿಡಿಯೊವೊಂದು ವೈರಲ್ ಆಗಿತ್ತು. ಹೊಸ ವರ್ಷ ಆಚರಣೆ ವೇಳೆಯೂ ಧೋನಿ ಪತ್ನಿಯೊಂದಿಗೆ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಾಮಾನ್ಯವಾಗಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಆದರೆ, ಧೋನಿ ಪ್ರವಾಸದ ಫೋಟೊಗಳನ್ನು ಅವರ ಮಗಳು ಮತ್ತು ಪತ್ನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಧೋನಿ ಅವರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ 4 ಕೋಟಿ ರೂ. ನೀಡಿ ತಂಡಕ್ಕೆ ರಿಟೇನ್ ಮಾಡಿತ್ತು. ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನ್ಯೂಜಿಲ್ಯಾಂಡ್‌ನ ಡೆವೊನ್ ಕಾನ್ವೇ ನಿರ್ವಹಿಸಬಹುದು. ಈ ಬಾರಿ ಐಪಿಎಲ್ ಧೋನಿಗೆ ಕೊನೆಯ ಟೂರ್ನಿಯಾಗುವ ಸಾಧ್ಯತೆಯೂ ಅಧಿಕವಾಗಿದೆ. 2023ರ ಆವೃತ್ತಿಯಲ್ಲೇ ಧೋನಿ ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕಳೆದ ವರ್ಷ ಐಪಿಎಲ್ ಆಡಿದ್ದರು. ಆದರೆ ಈ ಬಾರಿ ಅವರಿಗೆ ವಿದಾಯದ ಟೂರ್ನಿ ಎನ್ನಲಾಗಿದೆ.