ನ್ಯೂಯಾರ್ಕ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್ ಧೋನಿ(MS Dhoni) ಫುಟ್ಬಾಲ್(ms dhoni football) ಎಂದರೆ ಅಚ್ಚುಮೆಚ್ಚು. ಕ್ರಿಕೆಟ್‌ಗೆ ಬರುವ ಮುನ್ನ ಧೋನಿ ಗೋಲ್ ಕೀಪರ್ ಆಗಿದ್ದರು. ಭಾರತ ತಂಡದ ಪರ ಆಡುತ್ತಿದ್ದ ವೇಳೆಯೂ ಧೋನಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಾಗಿ ಸ್ನೇಹಿತರ ಜತೆ ಫುಟ್ಬಾಲ್ ಆಡುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಅವರು ಫುಟ್ಬಾಲ್ ಆಡುವುದನ್ನು ನಿಲ್ಲಿಸಿದ್ದರೂ ಕೂಡ ಫುಟ್ಬಾಲ್ ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಧೋನಿ ತಮ್ಮ ಗೆಳೆಯರ ಜತೆ ಅಮೆರಿಕದಲ್ಲಿ ನಡೆಯುತ್ತಿರುವ ಫುಟ್ಬಾಲ್ ಟೂರ್ನಿಯ ಪಂದ್ಯವೊಂದನ್ನು ವೀಕ್ಷಿಸಿದ್ದಾರೆ. ಈ ಫೋಟೊ ವೈರಲ್ ಆಗಿದೆ.
ಧೋನಿ ತಮ್ಮ ಸ್ನೇಹಿತರ ಜತೆ ಅತ್ಯಂತ ಸ್ಟೈಲೀಸ್ ಲುಕ್‌ನಲ್ಲಿ ಗ್ಯಾಲರಿಯಲ್ಲಿ ಕುಳಿತು ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿರುವ ಫೋಟೊ ಕಂಡ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಧೋನಿ ತಮ್ಮ ಸ್ನೇಹಿತರ ಜತೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಧೋನಿಯ ರಾಕೆಟ್ ವೇಗದ ಜಂಪಿಂಗ್ ಸ್ಮ್ಯಾಶ್(jump smash) ಕಂಡು ಅಭಿಮಾನಿಗಳು ದಂಗಾಗಿದ್ದರು. 43 ವರ್ಷದಲ್ಲಿಯೂ ಇತಂಹ ಫಿಟ್‌ನೆಸ್ ಮೆಚ್ಚಲೇ ಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.
ಇದನ್ನೂ ಓದಿ ಅಂದು ಧೋನಿ ತೋರಿದ ವರ್ತನೆಯಿಂದ ತಂಡದ ಮೀಟಿಂಗ್ ಕೂಡ ನಡೆಯಲಿಲ್ಲ; ಯಾವುದು ಆ ಘಟನೆ?
ಈ ಬಾರಿಯೂ ಐಪಿಎಲ್ ಆಡಲಿದ್ದಾರೆ ಧೋನಿ!
ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಧೋನಿ ಅವರು ಈ ಬಾರಿಯೂ ಐಪಿಎಲ್ ಆಡುವ ಸಲುವಾಗಿ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಧೋನಿ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್ ಮಾಡಿಕೊಳ್ಳಬಹುದು. ಇನ್ನೊಂದೆಡೆ ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ಅವರ ಸ್ಥಾನಕ್ಕೆ ಪಂತ್ ಅವರನ್ನು ಚೆನ್ನೈ ತಂಡಕ್ಕೆ ಸೇರಿಸಿಕೊಂಡು ಕೀಪಿಂಗ್ ಹೊಣೆ ಪಂತ್‌ಗೆ ನೀಡುವ ಯೋಜನೆಲ್ಲಿದೆ ಫ್ರಾಂಚೈಸಿ. ಪಂತ್ ಕೀಪಿಂಗ್ ನಡೆಸಿದರೆ ಆಗ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯಬಹುದು.