Sunday, 15th December 2024

ಪಂಜಾಬ್ ಪಾಲಿಗೆ ಇಂದು ’ಮಾಡು ಇಲ್ಲವೇ ಮಡಿ’ ಪಂದ್ಯ

ಅಬುಧಾಬಿ: ಅಬುಧಾಬಿಯಲ್ಲಿ ಶನಿವಾರ ನಡೆಯುವ ಐಪಿಎಲ್ ನ 24ನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತಂಡವು ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ.

ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತಂಡ 5 ಪಂದ್ಯಗಳಲ್ಲಿ 3 ಪಂದ್ಯದಲ್ಲಿ ಗೆಲುವು 2 ರಲ್ಲಿ ಸೋಲು ಕಂಡಿದ್ದು, 6 ಪಾಯಿಂಟ್ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲಿನ ಸುಳಿಯಲ್ಲಿ ಸಿಲುಕಿ ಕೊಂಡಿದ್ದು, ಗೆಲುವಿನ ಹುಡುಕಾಟದಲ್ಲಿದೆ. ಇದುವರೆಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 6 ಪಂದ್ಯಗಳಲ್ಲಿ ಕೇವಲ 1 ಪಂದ್ಯ ದಲ್ಲಿ ಜಯಿಸಿದ್ದು 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಪಂಜಾಬ್ ಗೆ ಗೆಲುವು ಅನಿವಾರ್ಯವಾಗಿದೆ.