Sunday, 15th December 2024

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೌಲರ್ ನವ್‌ದೀಪ್ ಸೈನಿ

ಹರ್ಯಾಣ: ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ 30ನೇ ಹರೆಯದಲ್ಲಿ ಸುದೀರ್ಘ ಕಾಲದ ಗೆಳತಿ ಸ್ವಾತಿ ಅಸ್ಥಾನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

“ನಿನ್ನ ಜೊತೆಗೆ ಪ್ರತಿ ದಿನವೂ ಪ್ರೀತಿಯ ದಿನ. ಇಂದು ನಾವು ಎಂದೆಂದಿಗೂ ಜೊತೆಯಾಗಿರಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ” ಎಂದು ಸೈನಿ ಸಾಮಾಜಿಕ ಜಾಲತಾಣ ದಲ್ಲಿ ಬರೆದುಕೊಂಡಿದ್ದಾರೆ.

ಸ್ವಾತಿ ಅಸ್ಥಾನ ವ್ಲಾದರ್ ಆಗಿದ್ದು ಫ್ಯಾಶನ್, ಟ್ರಾವೆಲ್ ಹಾಗೂ ಲೈಫ್‌ಸ್ಟೈಲ್ ವಿಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ.

ಸೈನಿ ತೀರಾ ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿ ಪರವಾಗಿ ಆಡುವ ಸೈನಿ ಸೆಮಿ-ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಸೋಲಿನ ರುಚಿ ಅನುಭವಿಸುವ ಮೂಲಕ ನಿರಾಸೆ ಕಂಡಿದ್ದರು. ಈ ಪಂದ್ಯದಲ್ಲಿ ಸೈನಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು.

ಟೂರ್ನಿಯಲ್ಲಿ ಸೈನಿ ಏಳು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾದರು.